ಹಲ್ಲಿ ಓಡಿಸುವ ವಿಧಾನ ||ಯಾವುದೇ ಊರು ಆಗಲಿ ಅಥವಾ ಪ್ರತಿಯೊಂದು ಹಳ್ಳಿಯಾಗಲಿ ಅಥವಾ ಸಿಟಿಯಾಗಲಿ ಊರು ಅಂದಮೇಲೆ ಮನೆ ಇದ್ದೇ ಇರಲೇಬೇಕು ಹಾಗೆ ಆ ಮನೆಯಲ್ಲಿ ನೀವು ಕೂಡ ವಾಸ ಮಾಡುತ್ತಾ ಇರುತ್ತೀರಾ ಅಲ್ಲವೇ ಅದರ ಜೊತೆಗೆ ಆ ಮನೆಯಲ್ಲಿ ಸಣ್ಣಪುಟ್ಟ ಜಿರಳೆ ಹಲ್ಲಿ ನೊಣ ಹೀಗೆ ಸಣ್ಣ ಪುಟ್ಟ ಕ್ರಿಮಿಕೀಟಗಳು ಇರುತ್ತವೆ ಮುಖ್ಯವಾಗಿ ಮನೆಯಲ್ಲಿ ಜಿರಳೆ ಮತ್ತು ಹಲ್ಲಿಯ ಕಾಟದಿಂದ ಮುಕ್ತಿಯನ್ನು ಹೊಂದಿದರೆ ಸಾಕು ಎಂದು ಹಲವಾರು ಜನರು ಹೇಳುತ್ತಿರುತ್ತಾರೆ ಆದ್ದರಿಂದ ಹಲವಾರು ಜನರು ಈ ಹಲ್ಲಿ ಜಿರಳೆಯನ್ನು ಓಡಿಸುವುದಕ್ಕಾಗಿ ಮಾರುಕಟ್ಟೆ ಗಳಲ್ಲಿ ಸಿಗುವಂತಹ ಹಲವಾರು ಔಷಧಿ ರಾಸಾಯನಿಕ ಪದಾರ್ಥಗಳನ್ನು ತಂದು ಅವುಗಳನ್ನು ಹಾಕಿ ಆ ಸಣ್ಣ ಪುಟ್ಟ ಕ್ರಿಮಿಕೀಟಗಳನ್ನು ನಾಶಪಡಿಸುತ್ತಾರೆ ಹೀಗೆ ಮಾಡುವುದರ ಬದಲು ಅದನ್ನು ಮನೆಯಿಂದ ಹೇಗೆ ಓಡಿಸುವುದು ಹಾಗೆ ಮಾಡಲು ಯಾವ ವಿಧಾನವನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಮಾರುಕಟ್ಟೆಗಳಲ್ಲಿ ಸಿಗುವಂತಹ ಹಲವಾರು ರಾಸಾಯನಿಕ ಪದಾರ್ಥಗಳನ್ನು ಹಾಕಿ ಹಣ ಮತ್ತು ಸಮಯ ಎರಡನ್ನು ವ್ಯರ್ಥ ಮಾಡಿಕೊಳ್ಳುವುದರ ಬದಲು ಮನೆಯಲ್ಲಿಯೇ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಬಳಸಿಕೊಂಡು ಇವುಗಳನ್ನು ಓಡಿಸಬಹುದಾಗಿದೆ ಅಲ್ಲದೆ ಮನೆಗಳಲ್ಲಿ ಮಾಡಿಟ್ಟಂತಹ ಆಹಾರ ಪದಾರ್ಥಗಳ ಮೇಲೆ ನಮಗೆ ಗೊತ್ತಿಲ್ಲದಂತಹ ಸಮಯದಲ್ಲಿ ಈ ಹಲ್ಲಿ ಅಥವಾ ಜಿರಳೆಗಳು ಓಡಾಡಿರುತ್ತವೆ ಅವುಗಳನ್ನು ತಿನ್ನುವುದ ರಿಂದ ನಮ್ಮ ಆರೋಗ್ಯದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕೂಡ ಕಂಡು ಬರುತ್ತದೆ ಪ್ರತಿಯೊಬ್ಬರ ಮನೆಯಲ್ಲಿಯೂ ಪ್ರತಿನಿತ್ಯ ಹಲವಾರು ಕೆಲಸ ಕಾರ್ಯಗಳು ಹಲವಾರು ವಸ್ತುಗಳು ಇದ್ದೇ ಇರುತ್ತವೆ ಅವುಗಳು ಇದ್ದರೆ ಈ ಜಿರಳೆ ಹೆಚ್ಚಾಗುತ್ತದೆ.

ಹಾಗಾದರೆ ಇವುಗಳನ್ನು ಓಡಿಸುವ ವಿಧಾನ ಯಾವುದೆಂದರೆ ನಾವು ಈಗ ಹೇಳುವಂತಹ ಈ ವಿಧಾನವನ್ನು ಅನುಸರಿಸಿದರೆ ಅದನ್ನು ಸೇವನೆ ಮಾಡುವುದಿಲ್ಲ ಅದರ ವಾಸನೆಗೆ ಅವು ದೂರ ಓಡಿ ಹೋಗುತ್ತವೆ ಎಂದು ಹೇಳಬಹುದಾಗಿದೆ ಮೊದಲನೆಯದಾಗಿ ಒಂದು ಹಿಡಿಯಷ್ಟು ಬೇವಿನ ಎಲೆಯ ಸೊಪ್ಪುಗಳನ್ನು ತೆಗೆದುಕೊಂಡು ಮತ್ತು ಒಂದು ಹಿಡಿಯಷ್ಟು ಕರ್ಪೂರವನ್ನು ಮತ್ತು ನೀಲಗಿರಿ ಎಣ್ಣೆಯನ್ನು ಈ ಮೂರನ್ನು ಚೆನ್ನಾಗಿ ಪೇಸ್ಟ್ ಹದಕ್ಕೆ ಮಾಡಿಕೊಳ್ಳಬೇಕು ನಂತರ ಇದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಹಲ್ಲಿ ಜಿರಳೆ, ಓಡಾಡುವಂತಹ ಸ್ಥಳಗಳಿಗೆ ಇಟ್ಟರೆ ಅವುಗಳ ವಾಸನೆಗೆ ಅವು ಮನೆಯನ್ನು ಬಿಟ್ಟು ಹೊರಗಡೆ ಹೋಗುತ್ತವೆ ಇದರ ವಾಸನೆ ಕೇವಲ 15 ದಿನಗಳ ತನಕ ಇರುತ್ತದೆ ನಂತರ ಹೊಸದಾಗಿ ಮಾಡಿಕೊಂಡು ಹೀಗೆ ಮಾಡುವುದರಿಂದ ಅವುಗಳಿಂದ ಮುಕ್ತಿಯನ್ನು ಹೊಂದಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *