ಅನಾನಸ್ ಗೋಡ್ ಪಡಿ ಹೊಸ ಸವಿರುಚಿ..ಜೇನಿನಷ್ಟೆ ರುಚಿಕರವಾದ ಈ ಗೋಡ್ ಪಡಿ ನೀವು ಒಮ್ಮೆ ಮಾಡಿ ಇಟ್ಟುಕೊಂಡರೆ, ಮೆತ್ತೆ ಇನ್ನೊಂದು ಬಾರಿ ಮಾಡಿ ಬಳಸೋದು ನಿಜ.ಆರು ತಿಂಗಳ ಕಾಲ ಕೆಡದೇ ಇಟ್ಟುಕೊಂಡು ಬಳಸಬಹುದು. ಈ ಮಳೆ ಚಳಿಗಾಲದಲ್ಲಿ ಎಲ್ಲರ ಮನೆಯಲ್ಲೂ ಇರಲೇ ಬೇಕಾದ ಒಳ್ಳೆಯ ಮನೆಮದ್ದು.ಕೆಮ್ಮು, ಕಫ ನಿವಾರಕ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ದೇಹದ ಲವಲವಿಕೆ ಹೆಚ್ಚಿಸುತ್ತದೆ. ಜೀರ್ಣಕ್ರಿಯೆ ಹೆಚ್ಚಿಸಿ, ನಾಲಿಗೆ ರುಚಿ ತರಿಸುತ್ತದೆ.ಇದನ್ನು ಖಂಡಿತಾ ನಾಜೂಕಿನಿಂದ ಇಟ್ಟುಕೊಂಡರೇ?ಆರು ತಿಂಗಳು ಕಾಲ ಕೆಡದಂತೆ ಶೇಖರಣೆ ಮಾಡಿ ಇಟ್ಟುಕೊಂಡು ಬಳಸಬಹುದು.ಮಕ್ಕಳಿಂದ ವಯೋವೃದ್ಧರ ತನಕ ಇದನ್ನ ಸೇವಿಸಬಹುದು. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ. ಬೇಕಾದರೆ ಮಕ್ಕಳಿಗೆ ದೋಸೆ,ಚಪಾತಿ ಇಂಥವುಗಳ ಮೂಲಕ ತಿನ್ನಿಸಲೂ ಬಹುದು. ಜೇನಿನಷ್ಟು ರುಚಿಕರವಾದ ಈ ಗೋಡ್ ಪಡಿ ಎಲ್ಲರ ಮನೆಯಲ್ಲಿ ಹೆಂಗಸರು ಅವರೆ ಮಾಡಿ ಇಟ್ಟು ಕೊಳ್ಳಬಹುದು. ಮನೆಮದ್ದು ರುಚಿಯಾಗಿದ್ದು ದೇಹಕ್ಕೆ ಶಕ್ತಿ ಮತ್ತು ಸ್ವಾಸ್ಥ್ಯ ಎರಡು ನೀಡುವಂತೆ ಇದ್ದರೆ? ಯಾರು ತಾನೇ ನಿರಾಕರಿಸುತ್ತಾರೆ.ಒಮ್ಮೆ ಸ್ವಲ್ಪ ಮಾಡಿ ನೋಡಿ ಸವಿದು ತಿಳಿಯಿರಿ.ಆಮೇಲೆ ಮರಳಿ ಮರಳಿ ಮಾಡಿ ಇಟ್ಟುಕೊಳ್ಳುವಿರಿ.ರಾಸಾಯನಿಕಯುಕ್ತ ಪೇಟೆಯ ಹಲವಾರು ಜಾಮ್ ಜೆಲ್ಲಿ ಗಿಂತ ನಿಮ್ಮ ಕೈಯಾರೆ ಮಾಡಿಕೊಂಡ ಈ ಜೇನಿನ ಸವಿ ಎಷ್ಟು ಆರೋಗ್ಯ ಕರ ನೀವೆ ಆಲೋಚನೆ ಮಾಡಿ ನೋಡಿಸವಿಯಿರಿ…ಧನ್ಯವಾದಗಳು.ಅಶ್ವಿನಿ.ಜೆ.ವಿ.ಶೇಟ್.ಕೆಳಗಿನ ವಿಡಿಯೋ ನೋಡಿ.
