ಅಮೆರಿಕದ ಮಾರ್ಕೆಟ್ ಗಳಲ್ಲಿ ಭಾರತೀಯ ದಿನಸಿ ಗಳಿಗೆ ಎಷ್ಟು ರೇಟ್ ಇದೆ ಗೊತ್ತಾ?ಇಂದು ಪ್ರಪಂಚದ ಬಹುತೇಕ ಎಲ್ಲಾ ದೇಶಗಳನ್ನು ಕೂಡ ಭಾರತೀಯರು ವಾಸ ಮಾಡುತ್ತಿದ್ದಾರೆ ಹಾಗಾಗಿ ಅಮೆರಿಕ ಮಾತ್ರವಲ್ಲದೆ ಪ್ರಪಂಚದ ಹಲವಾರು ದೇಶಗಳಲ್ಲಿ ಭಾರತೀಯರಿಗೆ ಅವರು ಇಲ್ಲಿ ಬಳಸುವ ಪದಾರ್ಥಗಳು ಸಿಗಲಿ ಎಂದು ಭಾರತೀಯರಿಗಾಗಿ ಸ್ಟೋರ್ ಗಳನ್ನು ಓಪನ್ ಮಾಡಲಾಗಿದೆ ಇಲ್ಲಿ ಭಾರತದಲ್ಲಿ ಸಿಗುವ ಎಲ್ಲಾ ಪದಾರ್ಥಗಳು ಕೂಡ ಸಿಗುತ್ತವೆ. ಅಮೆರಿಕ ದೇಶದಲ್ಲಿ ಭಾರತದ ದೇಶದಂತೆ ತಳ್ಳುಬಂಡಿಗಳಲ್ಲಿ ತರಕಾರಿ ಇಟ್ಟುಕೊಂಡು ಮನೆ ಮನೆಗಳ ಬಳಿ ಬಂದು ವ್ಯಾಪಾರ ಮಾಡುವುದಿಲ್ಲ. ಅಲ್ಲದೆ ಇಲ್ಲಿ ಮಾರ್ಕೆಟ್ ಗಳು ಬೆಳಗಿನ ಜಾವವೇ ಓಪನ್ ಇರುತ್ತದೆ ಆದರೆ ಅಮೆರಿಕದಲ್ಲಿ 10 ಗಂಟೆಯ ಬಳಿಕ ಎಲ್ಲಾ ಅಂಗಡಿಗಳು ಓಪನ್ ಆಗುತ್ತವೆ. ಅಲ್ಲದೆ ನಿಮಗೆ ಏನಾದರೂ ಫ್ರೆಶ್ ಆಗಿರುವ ಹಣ್ಣು ತರಕಾರಿಗಳು ಬೇಕು ಎಂದರೆ ನೀವು ಶುಕ್ರವಾರ ಅಥವಾ ಶನಿವಾರದ ದಿನಗಳಂದು ಸ್ಟೋರ್ ಗಳಿಗೆ ಭೇಟಿ ಕೊಟ್ಟರೆ ತಾಜವಾದ ಹಣ್ಣು ಹಾಗೂ ತರಕಾರಿ ಪದಾರ್ಥಗಳು ನಿಮಗೆ ಸಿಗುತ್ತವೆ.

ನಮ್ಮ ಭಾರತ ದೇಶದಲ್ಲಿ ಯಾವುದೇ ಸಮಯದಲ್ಲಿ ಏನೇ ತಿನ್ನಬೇಕು ಎಂದುಕೊಂಡರೂ ಕೂಡ ತಕ್ಷಣ ಅವುಗಳನ್ನು ಖರೀದಿಸಿ ತಂದು ಮಾಡಿಕೊಂಡು ತಿನ್ನಬಹುದು ಆದರೆ ನಮಗೆ ಬೇಕಾದ ಎಲ್ಲಾ ಪದಾರ್ಥಗಳು ಕೂಡ ಅಮೆರಿಕದಲ್ಲಿ ತಕ್ಷಣಕ್ಕೆ ಸಿಗುವುದಿಲ್ಲ. ಕೆಲವೊಮ್ಮೆ ಸ್ಟಾಕ್ ಗಳು ಖಾಲಿ ಆಗಿ ತಿಂಗಳು ಗಟ್ಟಲೇ ಆ ಪದಾರ್ಥಗಳು ಸಿಗುವುದಿಲ್ಲ. ಹಾಗಾಗಿ ಅಲ್ಲಿರುವ ಪದಾರ್ಥಗಳಲ್ಲೇ ನಾವು ಆರಿಸಿಕೊಂಡು ಅವುಗಳಿಂದ ಆಹಾರ ಪದಾರ್ಥಗಳನ್ನು ಮಾಡಿಕೊಂಡು ತಿನ್ನಬೇಕು. ಅಲ್ಲದೇ ಅಮೆರಿಕದಲ್ಲಿ ತರಕಾರಿಗಳಿಗೆ ವಿಪರೀತವಾಗಿ ಬೆಲೆ ಇರುತ್ತದೆ. ಉದಾಹರಣೆಗೆ ಒಂದು ಸೋರೆಕಾಯಿಗೆ ಇಲ್ಲಿ ಹೆಚ್ಚೆಂದರೆ ಹತ್ತು ರೂಪಾಯಿ ಇರಬಹುದು ಅಷ್ಟೇ ಆದರೆ ಅಮೆರಿಕದಲ್ಲಿ ಒಂದು ಸಾಮಾನ್ಯ ಗಾತ್ರದ ಸೋರೆಕಾಯಿಗೆ 160 ರೂ ಇರುತ್ತದೆ. ಒಂದು ಕಟ್ಟು ಪುದಿನ ಸೊಪ್ಪಿಗೆ ಇಲ್ಲಿ 5 ರಿಂದ 10 ಇದ್ದರೆ ಅಲ್ಲಿ 60 ರೂಗಳು ಇರುತ್ತದೆ.

ಮೆಂತ್ಯ ಸೊಪ್ಪಿಗೆ ಭಾರತ ದೇಶದಲ್ಲಿ 10ರಿಂದ 15 ರೂಗಳು ಇದ್ದರೆ ಅಮೆರಿಕ ದೇಶದಲ್ಲಿ ಒಂದು ಕಟ್ಟು ಮೆಂತ್ಯ ಸೊಪ್ಪಿಗೆ 160 ರೂಪಾಯಿಗಳು ಬೆಲೆ ಇರುತ್ತದೆ. ಒಂದೇ ಒಂದು ಮೂಲಂಗಿ ಗೆ ಅಮೆರಿಕ ದೇಶದಲ್ಲಿ 60 ರೂಪಾಯಿಗಳು ಕೊಡಬೇಕು. ಅರ್ಧ ಕೆಜಿ ಹೀರೆಕಾಯಿಗೆ ನಮ್ಮ ದೇಶದಲ್ಲಿ 20 ರೂಪಾಯಿ ಕೂಡ ಕೊಡದೆ ನಮ್ಮ ಹೆಣ್ಣು ಮಕ್ಕಳು ಚೌಕಾಸಿ ಮಾಡುತ್ತಾರೆ ಆದರೆ ಅಮೆರಿಕ ದೇಶದಲ್ಲಿ ಅರ್ಧ ಕೆಜಿ ಹೀರೆಕಾಯಿಗೆ 260 ಗಳು ಕೊಡಬೇಕು. ಈ ರೀತಿ ಅಮೆರಿಕ ಜೀವನ ಶೈಲಿ ಹಾಗೂ ಅಲ್ಲಿನ ಆಹಾರ ಪದಾರ್ಥಗಳ ಬೆಲೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Reply

Your email address will not be published. Required fields are marked *