ಕನ್ನಡ ಬಾರದ ಹುಡುಗಿ ನೂರಾರು ಕನ್ನಡ ಧಾರವಾಹಿ ಮಾಡಿ ಗೆದ್ದ ಕಥೆ.ಸಪ್ನ ದೀಕ್ಷಿತ್ ಅವರು ಬಣ್ಣದ ಜಗತ್ತಿಗೆ ನಿರೂಪಕಿಯಾ ಗಿ ಪದಾರ್ಪಣೆಯನ್ನು ಮಾಡಿದಂತಹ ನಟಿ ಮತ್ತು ಇವರು ಪ್ರಾಯಶ್ಚಿತ್ತ ಎಂಬ ಮೊದಲ ಧಾರವಾಹಿಯ ನ್ನು ಮಾಡುವುದರ ಮೂಲಕ ತಮ್ಮ ನಟನೆಯನ್ನು ಶುರು ಮಾಡಿದರು ನಂತರ ಪಾಪ ಪಾಂಡು ಸಿಲ್ಲಿಯಲ್ಲಿ ಪಾಯಿಂಟ್ ಪರಿಮಳ ಪಾಂಡುರಂಗ ವಿಠಲ ದಂಡ ಪಿಂಡಗಳು ದರಿದ್ರ ಲಕ್ಷ್ಮಿಯರು ಜನನಿ ಮಾಂಗಲ್ಯ ಚಂದ್ರಿಕಾ ಪುರುಷೋತ್ತಮ ಗಿರಿಜಾ ಕಲ್ಯಾಣ ಇಂತಿ ನಿಮ್ಮ ಆಶಾ ಸೇರಿದಂತೆ ಹಲವಾರು ಧಾರವಾಹಿಗಳಲ್ಲಿ ನಟನೆಯನ್ನು ಮಾಡುವುದರ ಮೂಲಕ ಕಿರುತೆರೆಯಲ್ಲಿ ವೀಕ್ಷಕರ ಗಮನವನ್ನು ಸೆಳೆದಿದ್ದರು ಮತ್ತು ಕನ್ನಡ ಚಿತ್ರರಂಗದಲ್ಲಿ ರನ್ನ ರಂಗಿತರಂಗ ಕೃಷ್ಣ ರುಕ್ಕು ಶಿವಲಿಂಗ ಭರ್ಜರಿ ಹೀಗೆ ಹತ್ತಕ್ಕೂ ಅಧಿಕ ಸಿನಿಮಾ ಗಳಲ್ಲಿ ನಟಿಸಿರುವ ಸಪ್ನ ಕಿರುತೆರೆಯ ಜೊತೆ ಹಿರಿತೆರೆ ಯಲ್ಲಿಯೂ ತಮ್ಮ ನಟನೆಯನ್ನು ಮಾಡುತ್ತಾ ಬಂದಿದ್ದಾರೆ.

ಇವರು ಇತ್ತೀಚೆಗೆ ಜೀ ಕನ್ನಡದಲ್ಲಿ ಮೂಡಿಬರುತ್ತಿರು ವಂತಹ ಜನಪ್ರಿಯ ಧಾರವಾಹಿ ಕಮಲಿ ಧಾರಾವಾಹಿಯಲ್ಲಿ ನಾಯಕ ನಟನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತು ಉದಯ ಟಿವಿಯಲ್ಲಿ ಬರುವಂತಹ ಸೇವಂತಿ ಧಾರವಾಹಿಯ ಮೂಲಕ ತಮ್ಮ ಹೊಸ ಪಾತ್ರವಾದಂತಹ ಪೊಲೀಸ್ ಅಧಿಕಾರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಹೀಗೆ ಹಲವಾರು ಸೀರಿಯಲ್ ಗಳ ಮೂಲಕ ಹೆಚ್ಚು ಮನೆಮಾತಾಗಿದ್ದಂತಹ ಇವರು ಇತ್ತೀಚೆಗೆ ತೆರೆ ಕಂಡಂತಹ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಡೆಸಿ ಕೊಡುವಂತಹ ಇಸ್ ಸ್ಮಾರ್ಟ್ ಜೋಡಿ ಎಂಬ ಶೋನಲ್ಲಿ ಭಾಗವಹಿಸಿದ್ದು ಅದರಲ್ಲಿ ದಂಪತಿಗಳು ಇಬ್ಬರು ಭಾಗವಹಿಸುವ ಮೂಲಕ ಇನ್ನು ಹೆಚ್ಚಿನ ಹೆಸರನ್ನು ಪಡೆದುಕೊಳ್ಳುತ್ತಿದ್ದಾರೆ.

ಇವರು ಮಧ್ಯಮ ಕುಟುಂಬದಲ್ಲಿ ಜನಿಸಿದ್ದು ಇವರ ತಂದೆ ಸೀರೆ ವ್ಯಾಪಾರವನ್ನು ಮಾಡುತ್ತಿದ್ದರು ಇವರಿಗೆ ಒಬ್ಬಳು ತಂಗಿ ಇದ್ದಾಳೆ ಇವರು ಕಾಲೇಜು ವ್ಯಾಸಂಗ ಮಾಡುತ್ತಿರುವಂತಹ ಸಂದರ್ಭದಲ್ಲಿ ಇವರು ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಅದನ್ನು ಕಂಡಂತಹ ನಾಗಭೂಷಣ ಅವರು ಸಪ್ನಾ ಅವರನ್ನು ನಟನೆಯನ್ನು ಮಾಡುತ್ತೀರಾ ಎಂದು ಕೇಳಿದಂತಹ ಸಂದರ್ಭ ದಲ್ಲಿ ಆಗ ಇವರು ಅವರ ಮುಖಾಂತರ ಕೇಬಲ್ ನೆಟ್ವರ್ಕ್ ಗಳ ಒಂದು ಶೋ ಮುಖಾಂತರ ಇವರು ತಮ್ಮ ಆಂಕರಿಂಗ್ ವೃತ್ತಿಯನ್ನು ಪ್ರಾರಂಭಿಸಿ ದರು ಹೀಗೆ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಇವತ್ತಿಗೆ ಸರಿ ಸುಮಾರು ನೂರಾರು ಧಾರವಾಹಿಗಳಲ್ಲಿ 10 ಕ್ಕೂ ಹೆಚ್ಚು ಸಿನಿಮಾರಂಗಗಳಲ್ಲಿ ನಟನೆಯನ್ನು ಮಾಡುವುದರ ಮೂಲಕ ಹೆಚ್ಚಿನ ಜನಮನ್ನಣೆಯನ್ನು ಗಳಿಸಿಕೊಂಡಿ ದ್ದಾರೆ ಎಂದು ಹೇಳಬಹುದಾಗಿದೆ. ಪಾತ್ರ ಯಾವುದೇ ಇರಲಿ ನಾನು ಶ್ರದ್ಧೆಯಿಂದ ಅಭಿನಯಿಸುತ್ತಿದ್ದೇನೆ ಎಂದು ಹಲವಾರು ಮೀಡಿಯಾದ ಮುಂದೆ ಹೇಳಿದಂತಹ ಉದಾಹರಣೆಗಳು ಉಂಟು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *