ಕೆನರಾ ಬ್ಯಾಂಕ್ ಅಕೌಂಟ್ ಆನ್ ಲೈನ್ ನಲ್ಲಿ ಓಪನ್ ಮಾಡುವ ವಿಧಾನ,ತಕ್ಷಣ ಅಕೌಂಟ್ ನಂಬರ್ ಸಿಗುತ್ತೆ..ಈ ವಿಡಿಯೋ ನೋಡಿ » Karnataka's Best News Portal

ಕೆನರಾ ಬ್ಯಾಂಕ್ ಅಕೌಂಟ್ ಆನ್ ಲೈನ್ ನಲ್ಲಿ ಓಪನ್ ಮಾಡುವ ವಿಧಾನ,ತಕ್ಷಣ ಅಕೌಂಟ್ ನಂಬರ್ ಸಿಗುತ್ತೆ..ಈ ವಿಡಿಯೋ ನೋಡಿ

ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಓಪನ್ ಮಾಡುವ ವಿಧಾನ ಬ್ಯಾಂಕ್ ಗೆ ಹೋಗುವ ಅವಶ್ಯಕತೆ ಇಲ್ಲ ಕೇವಲ ಐದೇ ನಿಮಿಷದಲ್ಲಿ ಮೊಬೈಲ್ ನಲ್ಲಿ ಅಕೌಂಟ್ ಓಪನ್ ಮಾಡಿ.
ಕೆನರಾ ಬ್ಯಾಂಕ್ ನಲ್ಲಿ ನೀವು ಅಕೌಂಟ್ ಓಪನ್ ಮಾಡಿಸಬೇಕು ಅಂತ ಅಂದರೆ ಹಿಂದೆಲ್ಲ ತುಂಬಾನೇ ಓಡಾಡಬೇಕಿತ್ತು ಅಷ್ಟೇ ಅಲ್ಲದೆ ಕನಿಷ್ಠಪಕ್ಷ ಐದು ದಿನಗಳ ಸಮಯಾವಕಾಶವನ್ನು ತೆಗೆದುಕೊಳ್ಳುತ್ತಿದ್ದರು. ಮೊದಲು ಬ್ಯಾಂಕಿಗೆ ಹೋಗಿ ಅಪ್ಲಿಕೇಶನ್ ಫಾರಂ ಅನ್ನು ಫಿಲ್ ಮಾಡಬೇಕಿತ್ತು ತದನಂತರ ನಿಮ್ಮ ಡೀಟೇಲ್ಸ್ ಎಲ್ಲವನ್ನು ಕೂಡ ಅವರಿಗೆ ಕೊಡಬೇಕಿತ್ತು, ಇದಾದ ನಂತರ ಅವರು ಐದರಿಂದ ಏಳು ದಿನಗಳ ಸಮಯಾವಕಾಶವನ್ನು ತೆಗೆದುಕೊಂಡು ನಂತರ ಅಕೌಂಟ್ ಓಪನ್ ಮಾಡಿ ಕೊಡುತ್ತಿದ್ದರು. ಆದರೆ ತುಂಬಾನೇ ಅವಶ್ಯಕತೆ ಇರುವಂತಹ ಸಮಯದಲ್ಲಿ ಅಥವಾ ಒಂದೇ ದಿನಕ್ಕೆ ಅಕೌಂಟ್ ತೆಗೆಯಬೇಕು ಅಂದಾಗ ತುಂಬಾನೇ ಪರಿತಪಿಸಬೇಕಿತ್ತು.

WhatsApp Group Join Now
Telegram Group Join Now

ಆದರೆ ಇನ್ನು ಮುಂದೆ ನೀವು ಚಿಂತೆ ಮಾಡುವಂತಹ ಅಗತ್ಯವಿಲ್ಲ ವಾರಗಟ್ಟಲೆ ಬ್ಯಾಂಕ್ ನಲ್ಲಿ ಕಾಯಬೇಕಾದಂತಹ ಪ್ರಮೇಯವು ಇಲ್ಲ ಕೇವಲ ಐದು ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ಕೆನರಾ ಬ್ಯಾಂಕ್ ಅಕೌಂಟ್ ಅನ್ನು ತೆರೆಯಬಹುದು. ಹೌದು ಕೇವಲ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಇದಿಷ್ಟು ದಾಖಲಾತಿಗಳು ಇತರೆ ಸಾಕು ನೀವು ನಿಮ್ಮ ಮೊಬೈಲ್ ನಲ್ಲಿ ಕೇವಲ ಐದೇ ನಿಮಿಷದಲ್ಲಿ ಕೆನರಾ ಬ್ಯಾಂಕ್ ಅಕೌಂಟನ್ನು ತೆರೆಯಬಹುದು. ನಿಮ್ಮ ಬಳಿ ಈಗಾಗಲೇ ಕೆನರಾ ಬ್ಯಾಂಕ್ ಆಪ್ಲಿಕೇಶನ್ ಇತ್ತು ಅಂದರೆ ಅದರಿಂದಲೂ ಕೂಡ ಅಕೌಂಟನ್ನು ಓಪನ್ ಮಾಡಬಹುದು. ಒಂದು ವೇಳೆ ಇದೇ ಮೊದಲ ಬಾರಿಗೆ ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಕ್ರಿಯೇಟ್ ಮಾಡುವುದಾದರೆ ನೀವು ಮೊಬೈಲ್ ನಲ್ಲಿ chrome ವರ್ಷನ್ ಅನ್ನು ಆಕ್ಟಿವೇಶನ್ ಮಾಡಿಕೊಳ್ಳಬೇಕಾಗುತ್ತದೆ.

See also  ಕೆಜಿಗಟ್ಟಲೆ ಬೆಳ್ಳುಳ್ಳಿ ಸಿಪ್ಪೆಯನ್ನು ಸ್ಟೇನರ್ ನಿಂದ ಬಿಡಿಸಿ ಶಾಕ್ ಆಗುತ್ತೀರಿ ಬಹಳ ಸುಲಭ ವಿಧಾನದಿಂದ ಬಿಡಿಸಬಹುದು..

ಕ್ರೋಮ್ ಗೆ ಹೋಗಿ ಅಲ್ಲಿ ನೀವು ಕೆನರಾ ಬ್ಯಾಂಕ್ ವೆಬ್ಸೈಟ್ ಅಡ್ರೆಸ್ ಅನ್ನು ಹಾಕಬೇಕಾಗುತ್ತದೆ ಈ ರೀತಿಯ ಹಾಕಿದಾಗ ನಿಮಗೆ ಕೆನರಾ ಬ್ಯಾಂಕ್ ನ ಪೋರ್ಟಲ್ ಓಪನ್ ಆಗುತ್ತದೆ. ಇಲ್ಲಿ ಆನ್ಲೈನ್ ಅಕೌಂಟ್ ಓಪನಿಂಗ್ ಆಪ್ಶನ್ ಅನ್ನೋ ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ ಸೆಲೆಕ್ಟ್ ಮಾಡಿದ ತಕ್ಷಣ ಮತ್ತೊಂದು ವಿಂಡೋ ಓಪನ್ ಆಗುತ್ತದೆ. ಇಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ್ ಡೀಟೇಲ್ಸ್ ಅನ್ನು ಕೇಳುತ್ತದೆ ಮೊದಲು ನೀವು ಅದನ್ನು ಅಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ. ನಂತರ ನಿಮ್ಮ ಹೆಸರು ನಿಮ್ಮ ವಿಳಾಸ ಹಾಗೂ ಇನ್ನಿತರ ದಾಖಲಾತಿಗಳನ್ನು ಕೇಳುತ್ತದೆ ಅವೆಲ್ಲವನ್ನು ಕೂಡ ನೀವು ಎಂಟ್ರಿ ಮಾಡಬೇಕಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.

[irp]


crossorigin="anonymous">