ಈ 8 ರೀತಿಯ ಜನರನ್ನು ನಿಮ್ಮ ಜೀವನದಿಂದ ದೂರವಿಡಲೆಬೇಕು..! ನಿಮ್ಮ ಜೀವನ ಇವರಿಂದಲೇ ಬಲಿಯಾಗೋದು » Karnataka's Best News Portal

ಈ 8 ರೀತಿಯ ಜನರನ್ನು ನಿಮ್ಮ ಜೀವನದಿಂದ ದೂರವಿಡಲೆಬೇಕು..! ನಿಮ್ಮ ಜೀವನ ಇವರಿಂದಲೇ ಬಲಿಯಾಗೋದು

ಈ ರೀತಿಯ ಎಂಟು ಜನರಿಂದ ನೀವು ಯಾವಾಗಲೂ ದೂರ ಇರಬೇಕಾಗುತ್ತದೆ.ಎಲ್ಲರೂ ನಿಮ್ಮ ಒಳ್ಳೆಯತನಕ್ಕೆ ಅರ್ಹರಾಗಿರುವುದಿಲ್ಲ ಇದನ್ನು ನೀವು ನೆನಪಿಡಲೇಬೇಕು ಇದು ಮೊದಲನೇ ಸೂಚನೆಯಾಗಿದೆ ನಿಮ್ಮ ವೈಯಕ್ತಿಕ ವಿಚಾರವನ್ನು ಯಾರೊಂದಿಗೂ ಕೂಡ ಹಂಚಿಕೊಳ್ಳಬೇಡಿ ಅದನ್ನು ಖಾಸಗಿತನದಿಂದ ಇಡಿ. ಇನ್ನೊಬ್ಬರನ್ನು ಮೆಚ್ಚಿಸಿಕೊಳ್ಳಲು ನಿಮ್ಮ ಕೆಟ್ಟ ಸ್ವಭಾವವನ್ನು ಎಂದಿಗೂ ಕೂಡ ಅವರಿಂದ ಮರೆಮಾಚಬೇಡಿ ನಿಮ್ಮಲ್ಲಿ ಇರುವಂತಹ ಕೆಟ್ಟ ಗುಣವನ್ನು ಅವರಿಗೆ ತೋರಿಸಿ ತದನಂತರ ಕಾದು ನೋಡಿ ನಿಮ್ಮ ಜೊತೆ ಯಾರು ಉಳಿಯಬಹುದು ಯಾರು ಹೊರಹೋಗಬಹುದು ಅಂತ. ಇನ್ನು ನೀವು ನಿಮ್ಮ ಜೀವನದಿಂದ ಈ 8 ಸ್ವಭಾವವನ್ನು ಒಳಗೊಂಡಿರುವಂತಹ ವ್ಯಕ್ತಿಯನ್ನು ದೂರ ಇಡಬೇಕಾಗುತ್ತದೆ. ಮೊದಲನೇದಾಗಿ ನಕಾರಾತ್ಮಕವಾಗಿ ಮಾತನಾಡುವಂಥವರನ್ನು, ನಿಮ್ಮನ್ನು ಸದಾ ಟೀಕಿಸುವವರನ್ನು ಹಾಗೂ ನಿಮ್ಮ ಸಮಯವನ್ನು ವ್ಯರ್ಥ ಮಾಡುವವರನ್ನು, ಅಸೂಯ ಪಡುವವರನ್ನು ಮತ್ತು ಇತರೆ ಜನರನ್ನು ಕಾಳಜಿ ಮಾಡದವರನ್ನು.

ಬೆನ್ನ ಹಿಂದೆ ಮಾತನಾಡುವವರನ್ನು ಮತ್ತು ನಿಮ್ಮನ್ನು ನಿರಾಶೆಗೊಳ್ಳುವಂತೆ ಮಾಡುವವರನ್ನು, ನಿಮ್ಮ ಬಗ್ಗೆ ಮತ್ತು ಇತರರ ಸಂಬಂಧದ ಬಗ್ಗೆ ಅಪಪ್ರಚಾರ ಮಾಡುವವರನ್ನು ಈ ಎಂಟು ಜನರಿಂದ ನೀವು ದೂರ ಇರಬೇಕಾಗುತ್ತದೆ. ಇನ್ನು ನೀವು ಮನಸ್ಸಿನಲ್ಲಿ ಇಟ್ಟುಕೊಳ್ಳಲೇ ಬೇಕಾದಂತಹ ಬಹುಮುಖ್ಯವಾದ ಅಂತಹ ಅಂಶಗಳು ಜೀವನದಲ್ಲಿ ಯಾರಾದರೂ ನಿಮ್ಮನ್ನು ತಿರಸ್ಕರಿಸಿದರೆ ಅದರಿಂದ ದುಃಖ ಪಡಬೇಡಿ ಏಕೆಂದರೆ ದುಬಾರಿಯಾದ ವಸ್ತುವಿನನ್ನು ಖರೀದಿ ಮಾಡಲು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಹಾಗೆಯೇ ನಿಮ್ಮ ಒಳ್ಳೆಯ ಗುಣಗಳ ಜೊತೆ ನಡೆಯುವಂತಹ ಅರ್ಹತೆಯನ್ನು ಎಲ್ಲರೂ ಕೂಡ ಪಡೆದಿರಲು ಸಾಧ್ಯವಿಲ್ಲ ಹಾಗಾಗಿ ನೀವು ಯಾರಿಂದಲಾದರೂ ತಿರಸ್ಕರಿಸಿದರೆ ಅದಕ್ಕೆ ಬೇಸರಪಟ್ಟುಕೊಳ್ಳಬೇಡಿ. ನಿಮ್ಮನ್ನು ಯಾರಾದರೂ ಕೆಟ್ಟದಾಗಿ ನಡೆಸಿಕೊಳ್ಳಲು ಪ್ರಯತ್ನಪಟ್ಟರೆ ನೀವು ಅವರ ಮಾದರಿಯಲ್ಲೇ ಕೆಟ್ಟತನಕ್ಕೆ ಇಳಿಯಬೇಡಿ.

WhatsApp Group Join Now
Telegram Group Join Now
See also  ಧಾರವಾಡದ ಗೃಹಿಣಿ ಯೂಟ್ಯೂಬ್ ನಲ್ಲಿ ಗೆದ್ದ ಕಥೆ..ಯೂಟ್ಯೂಬ್ ಹಣದಿಂದ 2 ಸೈಟ್ ತಗೊಂಡ ಶ್ರಾವಣಿ ಅಡುಗೆ ಮನೆ ಚಾನಲ್ ಓನರ್..

ಅದರ ಬದಲಾಗಿ ಶಾಂತವಾಗಿರಿ ಸದೃಢರಾಗಿರಿ ಹಾಗೂ ಅವರ ಜೊತೆ ಇರುವುದನ್ನು ಬಿಟ್ಟು ಅಲ್ಲಿಂದ ಹೊರಗಡೆಯಿರಿ. ಇನ್ನು ನಂಬಿಕೆ ಎಂಬುವುದು ಕರಗಿ ಹೋದ ಚಾಕಲೇಟ್ ನಂತೆ ಅದನ್ನು ಎಷ್ಟೇ ಬಾರಿ ನೀವು ಫ್ರಿಜ್ಜಿನಲ್ಲಿ ಇಟ್ಟರೂ ಕೂಡ ಅದು ಮತ್ತೆ ಮೊದಲಿನ ಆಕಾರವನ್ನು ಪಡೆಯುವುದಿಲ್ಲ. ಹಾಗೆಯೇ ನಂಬಿಕೆ ಎಂಬುವುದು ಒಂದು ಬಾರಿ ಕಳೆದು ಹೋದರೆ ಆ ವ್ಯಕ್ತಿ ಎಷ್ಟೇ ವಿಧವಾಗಿ ನಂಬಿಸಲು ಪ್ರಯತ್ನಿಸಿದರು ಕೂಡ ಆ ನಂಬಿಕೆಗೆ ಮೊದಲಿನ ಸ್ಥಾನಮಾನ ದೊರೆಯುವುದಿಲ್ಲ. ಡಾಕ್ಟರ್ ಅಬ್ದುಲ್ ಕಲಾಂ ಹೇಳಿರುವ ಇನ್ನಷ್ಟು ಸ್ಪೂರ್ತಿದಾಯಕ ಮಾತುಗಳನ್ನು ಕೇಳಲು ಈ ಕೆಳಗಿನ ವಿಡಿಯೋವನ್ನು ನೋಡಿ ಕೇವಲ ಎರಡು ನಿಮಿಷ ಇವರ ಮಾತುಗಳನ್ನು ಕೇಳಿದರೆ ಸಾಕು ನಿಮ್ಮ ಬದುಕನ್ನು ಬದಲಾಯಿಸಬಲ್ಲ ಶಕ್ತಿ ಇದಕ್ಕೆ ಇದೆ.



crossorigin="anonymous">