ಹಸಿ ತರಕಾರಿಗಳಂತೆ ಇಲ್ಲಿ ಹಣದ ಕಂತೆಗಳನ್ನೇ ಬಜಾರಿನಲ್ಲಿಟ್ಟು ಮಾರಾಟ ಮಾಡ್ತಾರೆ...! - Karnataka's Best News Portal

ಹಸಿ ತರಕಾರಿಗಳಂತೆ ಇಲ್ಲಿ ಹಣದ ಕಂತೆಗಳನ್ನೇ ಬಜಾರಿನಲ್ಲಿಟ್ಟು ಮಾರಾಟ ಮಾಡ್ತಾರೆ…!

ಹಣ್ಣು ತರಕಾರಿಗಳಂತೆ ದುಡ್ಡಿನ ಕಂತೆಯನ್ನು ಕೂಡ ಮಾರ್ಕೆಟ್ ಅಲ್ಲಿ ಇಟ್ಟು ಮಾರಾಟ ಮಾಡುವ ದೇಶ ಯಾವುದು ಗೊತ್ತಾ?
ಜಗತ್ತಿನಲ್ಲಿಯೇ ನಂಬರ್ ಒನ್ ಭ್ರಷ್ಟ ದೇಶ ಇಂದು ಈ ದೇಶ ಕರೆಸಿಕೊಂಡಿದೆ, ಬಡತನ ತುಂಬಿ ತುಳುಕುತ್ತಿರುವ ದೇಶ ಇದು. ಇಲ್ಲಿ ಶ್ರೀಮಂತಿಕೆಯನ್ನು ಯಾರು ಒಂಟೆಗಳನ್ನು ಹೆಚ್ಚಾಗಿ ಹೊಂದಿರುತ್ತಾರೆ ಎನ್ನುವ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ನಮ್ಮ ದೇಶದಲ್ಲಿ ಹಣ್ಣು ತರಕಾರಿ ಮಾರ್ಕೆಟ್ ಇರುವಂತೆ ಆ ದೇಶಗಳಲ್ಲಿ ಹಣದ ಕಂತೆಗಳನ್ನು ಇಟ್ಟು ಮಾರಾಟ ಮಾಡುವ ಮಾರ್ಕೆಟ್ಗಳು ಇವೆ. ಈ ದೇಶ ಬೇರೆ ಯಾವುದು ಅಲ್ಲ ಸೋಮಾಲಿಯಾ ದೇಶ. ವಿಶ್ವದಲ್ಲಿ ಇರುವ ಅನೇಕ ಬಡ ಹಾಗೂ ಧಾರುಣ ದೇಶಗಳ ಪೈಕಿ ಆಫ್ರಿಕಾದ ಸೋಮಾಲಿಯಾ ದೇಶವು ಕೂಡ ಒಂದು. ಈ ಬಡ ದೇಶದ ದಾರಿದ್ಯದ ಬಗ್ಗೆ ಆಗಾಗ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಲೇ ಇರುತ್ತದೆ. ಅದನ್ನು ನೀವೂ ನೋಡಿರುತ್ತೀರಿ ಹಾಗೂ ಕೇಳಿರುತ್ತೀರಿ.

WhatsApp Group Join Now
Telegram Group Join Now

ಅರಾಚಕತೆಯೇ ತುಂಬಿರುವ ಈ ದೇಶದಲ್ಲಿ ಅಲ್ಲಿ ನಡೆದ ಯುದ್ಧದ ಸಂಘರ್ಷವು ಸೊಮಾಲಿಯಾ ದೇಶದ ಜನರ ಜೀವನವನ್ನು ಅತ್ಯಂತ ಧಾರುಣ ರೀತಿಯಲ್ಲಿ ಬದಲಾಯಿಸಿದೆ.
ಪುರುಷ ಪ್ರಧಾನವಾದ ಸೋಮಾಲಿಯ ದೇಶದಲ್ಲಿ ಸ್ತ್ರೀಯರಿಗೆ ಹೆಚ್ಚಿನ ಯಾವುದೇ ರೀತಿಯ ಸ್ವಾತಂತ್ರ್ಯವಿಲ್ಲ. ಸೋಮಾಲಿಯ ದೇಶದ ಯಾವುದೇ ಸಾರ್ವಜನಿಕ ಸ್ಥಳದಲ್ಲೂ ಕೂಡ ಸ್ತ್ರೀಯರು ಯಾವೊಬ್ಬ ಪುರುಷನ ಜೊತೆ ಕೂಡ ಸ್ವಚ್ಛಂದವಾಗಿ ಮಾತನಾಡುತ್ತ ಸಮಯ ಕಳೆಯುವಂತಿಲ್ಲ. ಸೊಮಾಲಿಯ ದೇಶದಲ್ಲಿ ಒಂಟೆಗಳಿಗೆ ವಿಶೇಷ ಸ್ಥಾನಮಾನವಿದೆ. ಅಲ್ಲಿಯ ಪ್ರಮುಖ ಸಾರಿಗೆ ವಾಹನಗಳಲ್ಲಿ ಒಂಟೇ ಕೂಡ ಒಂದು. ಇದು ಸೊಮಾಲಿಯಾ ದೇಶದ ಜನರ ಪ್ರತಿಷ್ಠೆಯ ಹಾಗೂ ಶ್ರೀಮಂತಿಕೆಯ ಸಂಕೇತವಾಗಿದೆ. ಇಲ್ಲಿಯ ಜನರು ಒಂಟಿಯ ಮಾಂಸವನ್ನು ಕೂಡ ಆಹಾರದ ರೂಪದಲ್ಲಿ ಸೇವನೆ ಮಾಡುತ್ತಾರೆ. ಯಾರ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಒಂಟೆಗಳು ಇದೆಯೋ ಅದರ ಮೇಲೆ ಆಧಾರದ ಮೇಲೆ ಅವರ ಸಿರಿವಂತಿಕೆಯನ್ನು ಅಳೆಯಲಾಗುತ್ತದೆ.

ಸೊಮಾಲಿಯ ದೇಶದ ಪ್ರಮುಖ ಭಾಷೆಯ ಹೆಸರು ಸೋಮಾಲಿ ಇದೇ ಅಲ್ಲಿಯ ಆಡಳಿತ ಭಾಷೆ ಕೂಡ.ಇದರ ಜೊತೆಗೆ ಅರೇಬಿಕ್ ಹಾಗೂ ಇಂಗ್ಲಿಷ್ ಭಾಷೆಯನ್ನು ಕೂಡ ಇಲ್ಲಿಯ ಜನರು ಮಾತನಾಡುತ್ತಾರೆ. ಹೆಚ್ಚಿಗೆ ಓದಿದವರು ಐದಾರು ಭಾಷೆಗಳಲ್ಲಿ ಕೂಡ ಇಲ್ಲಿ ಮಾತನಾಡುತ್ತಾರೆ. 1995ರ ನಂತರ ಸೋಮಾಲಿಯ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಸಾರ್ವಜನಿಕವಾಗಿ ರೆಸ್ಟೋರೆಂಟ್ಗಳು ತೆರೆಯಲ್ಪಟ್ಟವು. 2000 ನೇ ವರ್ಷದಿಂದಲೂ ಇಲ್ಲಿ ಅಂತರ್ ಯುದ್ಧ ನಡೆಯುತ್ತಲೇ ಇದೆ. ಪ್ರತಿ ಬಾರಿ ಯುದ್ಧ ಆದಾಗಲೂ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿ ಹಾಳಾಗುತ್ತಿದೆ. ಇದರ ಪರಿಣಾಮವಾಗಿ ಅಲ್ಲಿನ ಜನರು ಇಂತಹ ಜೀವನ ನಡೆಸಬೇಕಾಗಿದೆ ಈ ಕುರಿತಾದ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.



crossorigin="anonymous">