ಮಾಡಿದ ಮೊದಲ ಸಿನಿಮಾವೇ ಫ್ಲಾಫ್ ಆಗಿ ಹೋದರು ಇಂದು ಇಡೀ ಭಾರತವೇ ತಿರುಗಿ ನೋಡುವಂತೆ ಬೆಳೆದ ನಟ…
ಅಭಿನಯ ಅನ್ನುವುದು ಅಷ್ಟು ಸುಲಭವಾಗಿ ಒಲಿಯುವುದಿಲ್ಲ, ಯಾರು ಬೇಕಾದರೂ ನಟನೆ ಮಾಡಬಹುದು ಆದರೆ ಎಲ್ಲರೂ ಕೂಡ ಗೆಲ್ಲುವಂತ ಕಲಾವಿದ ಆಗಲು ಸಾಧ್ಯವಿಲ್ಲ. ಯಾಕೆಂದರೆ ಒಬ್ಬ ಪಾತ್ರಧಾರಿ ಆಗಿ ಒಂದು ಪಾತ್ರವನ್ನು ನಿರ್ವಹಿಸಿ ಅದು ಜನರಿಗೆ ಮೆಚ್ಚುಗೆ ಆಗಬೇಕು ಎಂದರೆ ಅಭಿನಯದ ಆಳ ಅಗಲವನ್ನು ಅವರು ಅರಿತು ಅಭಿನಯಿಸಬೇಕು. ಅದಕ್ಕೆ ಉತ್ತಮ ಉದಾಹರಣೆಯನ್ನು ನಮ್ಮ ಕನ್ನಡದಲ್ಲಿ ಡಾಕ್ಟರ್ ರಾಜಕುಮಾರ್ ಹೆಸರನ್ನು ಕೊಡಬಹುದು. ಹಾಗೆಯೆ ತಮಿಳಿನಲ್ಲಿ ಕಮಲ್ ಹಾಸನ್, ಮಲಯಾಳಂ ಮುಮ್ಮುಟ್ಟಿ ಮತ್ತು ಮೋಹನ್ ಲಾಲ್ ಅವರು. ಈಗ ಇಂತಹ ಸಾಲಿನಲ್ಲಿ ಮತ್ತೊಬ್ಬ ನಟನ ಹೆಸರು ಸಹ ಸೇರುತ್ತಿದೆ. ಅದು ಎಷ್ಟರಮಟ್ಟಿಗೆ ಹೆಸರಾಗುತ್ತಿದೆ ಎಂದರೆ ಭಾರತಕ್ಕೆ ಅಭಿನಯದಲ್ಲಿ ಏನಾದರೂ ಆಸ್ಕರ್ ಅವಾರ್ಡ್ ಬಂದರೆ ಅದು ಈ ಖಂಡಿತ ಈತನ ಅಭಿನಯಕ್ಕಾಗಿ ಮಾತ್ರ ಬರುತ್ತದೆ ಎಂದು ಸಿನಿಮಾ ವಿಮರ್ಶಕರು ಭವಿಷ್ಯ ನುಡಿಯುವಷ್ಟು ಈ ನಟ ಅಭಿನಯದಲ್ಲಿ ಪಳಗಿ ಹೋಗಿದ್ದಾರೆ.

ಇವರು ಮತ್ತಾರು ಅಲ್ಲ ಮಾಲಿವುಡ್ ಅಲ್ಲಿ ಸ್ಟಾರ್ ನಟರಾಗಿರುವ ಇಂದು ಬರಿ ಮಲಯಾಳಂ ಮಾತ್ರವಲ್ಲದೆ ತಮಿಳು ತೆಲುಗು ಹಾಗೂ ಹಿಂದಿ ಸಿನಿಮಾಗಳ ಮೇಲು ಕೂಡ ತಮ್ಮ ಪ್ರಭಾವವನ್ನು ಬೀರಿರುವ ಮಹಾ ನಟ ಫಾಹಿದ್ ಫಾಸಿಲ್ ಅವರು. ಇತ್ತೀಚೆಗೆ ಅವರು ಅಭಿನಯಿಸಿದ ಎರಡು ಸಿನಿಮಾಗಳು ಎಂದರೆ ಅದು ತಮಿಳಿನ ವಿಕ್ರಂ ಮತ್ತು ತೆಲುಗಿನ ಪುಷ್ಪ ಸಿನಿಮಾ. ಎರಡು ಸಿನಿಮಾದಲ್ಲೂ ಕೂಡ ನೆಗೆಟಿವ್ ರೋಲ್ ಅಲ್ಲಿ ಇವರು ಕಾಣಿಸಿಕೊಂಡಿದ್ದರು ಈ ಎರಡು ಸಿನಿಮಾದ ಅಭಿನಯವನ್ನು ಜನರನ್ನು ಕಣ್ಣು ಕಟ್ಟಿಕೊಂಡಿದ್ದಾರೆ. 2018ನೇ ಇಸವಿಯಿಂದ ತುಂಬಾ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು ಈವರೆಗೆ 52 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದು ಇಡೀ ಭಾರತ ಸಿನಿಮಾ ರಂಗವೇ ಮಾತನಾಡುವಷ್ಟು ಬೆಳೆದಿರುವ ಈ ನಟನ ಅಷ್ಟು ಸಿನಿಮಾಗಳು ಸೂಪರ್ ಹಿಟ್ ಸಿನಿಮಾ ಗಳು ಆಗಿದ್ದವೇ ಎಂದರೆ ಅದು ಖಂಡಿತ ಇಲ್ಲ.

ನಟಿಸಿದ ಮೊದಲ ಮಲಯಾಳಂ ಸಿನಿಮಾ ಕೇತುಂ ದೂರತ್ ಅಟ್ಟರ್ ಫ್ಲಾಫ್ ಆಗಿತ್ತು. ಇವರ ತಂದೆ ಕೂಡ ಮಲಯಾಳಂ ಸಿನಿಮಾಗಳಲ್ಲಿ ಫೇಮಸ್ ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್ ಆಗಿದ್ದರು. ಅಮೆರಿಕದಲ್ಲಿ ಹೈಯರ್ ಎಜುಕೇಶನ್ ಮಾಡುತ್ತಿದ್ದ ಇವರಿಗೆ ತಂದೆಯೇ ಮೊದಲು ಆಕ್ಷನ್ ಕಟ್ ಹೇಳಿದ್ದರು. ಆದರೆ ಆ ಸಿನಿಮಾದ ಸೋಲು ಇದುವರೆಗೆ ಫಾಹಿದ್ ಫಾಸಿಲ್ ಅವರ ವೃತ್ತಿ ಬದುಕಿನ ಕಪ್ಪು ಚುಕ್ಕಿ. ಆದರೆ ಅದನ್ನೇ ಸ್ಪೋಟಿವ್ ಆಗಿ ತೆಗೆದುಕೊಂಡ ಇವರು ಆ ಸಿನಿಮಾದ ನಂತರ ಮತ್ತೆ ವಿದ್ಯಾಭ್ಯಾಸ ಮುಂದುವರಿಸಲು ಅಮೆರಿಕಾಗೆ ತೆರಳಿ ಮರಳಿ ಬಂದ ಬಳಿಕ ಇಲ್ಲೇ ಗೆಲುವು ಕಾಣಲು ನಿರ್ಧರಿಸಿ ಮತ್ತೆ ಅಭಿನಯ ಮಾಡಲು ಆರಂಭಿಸಿದರು. ಇದಾದ ಬಳಿಕ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ಕೊಡುವುದು ಮಾತ್ರವಲ್ಲದೆ ಅವರ ಅಭಿನಯದಲ್ಲಿ ಅವರು ಎಷ್ಟು ಪಳಗಿದ್ದಾರೆ ಎಂದರೆ ಎಲ್ಲರೂ ಇದರ ಬಗ್ಗೆ ಹುಬ್ಬೇರಿಸಿಕೊಳ್ಳುತ್ತಿದ್ದಾರೆ. ಇವರ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Reply

Your email address will not be published. Required fields are marked *