ನಲವತ್ತು ವರ್ಷದಿಂದ ಮಲಗೇ ಇಲ್ಲ ಯಾಕೆ ಗೊತ್ತಾ ಈತ ಇಲ್ಲಿತನಕ ಮಲಗದೆ ಇರೋದಕ್ಕೆ ಕಾರಣ ಏನ್ ಗೊತ್ತಾ ? - Karnataka's Best News Portal

ನಲವತ್ತು ವರ್ಷದಿಂದ ಮಲಗೇ ಇಲ್ಲ ಯಾಕೆ ಗೊತ್ತಾ ಈತ ಇಲ್ಲಿತನಕ ಮಲಗದೆ ಇರೋದಕ್ಕೆ ಕಾರಣ ಏನ್ ಗೊತ್ತಾ ?

46 ವರ್ಷಗಳಿಂದ ನಿದ್ರೆ ಮಾಡದೇ ವೈದ್ಯಲೋಕಕ್ಕೆ ಸವಾಲಾದ ವ್ಯಕ್ತಿನಮಸ್ತೆ ಸ್ನೇಹಿತರೆ, ನಿದ್ದೆ ಎಂಬುದು ಪ್ರತಿಯೊಂದು ಜೀವಿಗೂ ಅತ್ಯಾವಶ್ಯಕವಾದ ಅಂಶ ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದೆ. ನಿದ್ರೆ ಮಾಡಿದ ಜೀವಿಗಳು ಬಹುವಿರಳ ಹಗಲೆಲ್ಲ ಕೆಲಸದಲ್ಲಿ ಕಾಲಹರಣ ಮಾಡುವ ನಮಗೆ ರಾತ್ರಿಯ ಸಮಯದಲ್ಲಿ ವಿಶ್ರಾಂತಿ ಅಗತ್ಯವಾಗಿ ಬೇಕೇ ಬೇಕು. ನಾವು ಹಗಲೆಲ್ಲ ಮಲಗಿ ರಾತ್ರಿಯೆಲ್ಲಾ ನಿದ್ದೆ ಬಿಡಬಹುದು ಆದರೆ ಕೆಲವರಿಗೆ ರಾತ್ರಿ ಹೊತ್ತು ನಿದ್ದೆ ಬರುವುದಿಲ್ಲ. ನಿದ್ರೆ ಬರದ ಈ ರೋಗವನ್ನು ವೈದ್ಯ ಲೋಕವೂ ಇನ್ಸೊಮ್ನಿಯ ಎಂದು ಕರೆಯುತ್ತಾರೆ. ಬಹುತೇಕ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದು ನಿದ್ರೆಗಾಗಿ ಮಾತ್ರೆಗಳ ಮೊರೆಹೋಗುತ್ತಾರೆ. ಇನ್ಸೋಮ್ನಿಯಾ ಕಾಯಿಲೆಯಿಂದ ಉಂಟಾಗುವ ಮಾನಸಿಕ ಒತ್ತಡದಿಂದ ಏನೆಲ್ಲಾ ಆಗಬಹುದು 1999ರಲ್ಲಿ ತೆರೆ ಕಂಡಂತಹ ಫೈಟ್ ಕ್ಲಬ್ ಎಂಬ ಹಾಲಿವುಡ್ ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾ ಅತ್ಯಂತ ಮನೋಜ್ಞವಾಗಿ ತೋರಿಸಲಾಗಿದೆ.

ಒಬ್ಬ ವ್ಯಕ್ತಿ ಎಷ್ಟು ದಿನಗಳ ಕಾಲ ನಿದ್ದೆ ಇಲ್ಲದೇ ಬದುಕಬಹುದು ಎಂದು Randy ಎಂಬ ವ್ಯಕ್ತಿ ಕ್ಯಾಲಿಫೋರ್ನಿಯಾದ ಯುವಕನೊಬ್ಬ ಈ ಒಂದು ನೋ ಸ್ಲಿಪ್ ಚಾಲೆಂಜನ್ನು ಸ್ವೀಕರಿಸಿ, ಸುಮಾರು ಹನ್ನೊಂದು ದಿನಗಳ ಕಾಲ ನಿದ್ದೆ ಮಾಡದೇ ಸಾರ್ವತ್ರಿಕ ದಾಖಲೆಯನ್ನು ಸೃಷ್ಟಿ ಮಾಡಿದನು. ಆದರೆ ಈತನಿಗಿಂತ ವಿಲಕ್ಷಣವಾದ ಇನ್ನೋರ್ವ ವ್ಯಕ್ತಿಯ ಬಗ್ಗೆ ನಾವು ಎಂದು ತಿಳಿಯೋಣ. ಈತ ಸುಮಾರು 46 ವರ್ಷಗಳಿಂದಲೂ ಸಹ ನಿದ್ದೆಯನ್ನೇ ಮಾಡಿಲ್ಲವಂತೆ ಇದು ನಾವೆಲ್ಲರೂ ದಿಗ್ಬ್ರಮೆ ಪಡುವಂತಹ ವಿಷಯ. ವ್ಯಕ್ತಿಯೊಬ್ಬ ಇಷ್ಟು ದಿನಗಳ ಕಾಲ ನಿದ್ರೆ ಏನೇ ಮಾಡದೇ ಇರಲು ಸಾಧ್ಯವೇ ಎಂದು ವೈದ್ಯಲೋಕಕ್ಕೆ ಸವಾಲಾಗಿದೆ. ಈ ವ್ಯಕ್ತಿ ಸುಮಾರು 46 ವರ್ಷ ನಿದ್ದೆ ಮಾಡದೇ ಇರುವುದು ಅತ್ಯಂತ ಸೋಜಿಗದ ವಿಷಯ ಎಂದು ಹೇಳಬಹುದು. ನಾವು ಈ ಹಿಂದೆ ಹೇಳಿದ್ದ Randu ಎಂಬ ವ್ಯಕ್ತಿ ಸುಮಾರು ಹನ್ನೊಂದು ದಿನಗಳ ಕಾಲ ನಿದ್ದೆ ಮಾಡಿದೆ ಇದ್ದರೂ ನಂತರ ಜೀವಂತ ಶವದ ಪರಿಸ್ಥಿತಿಗೆ ಬಂದಿದ್ದರು.

ಆತನನ್ನು ಮತ್ತೆ ಮೊದಲಿನಂತೆ ಮಾಡಲು ಹೇಣಗಾಡಬೇಕಿತ್ತು. ಆದರೆ ಈ ವ್ಯಕ್ತಿಯು 46 ವರ್ಷದಿಂದ ನಿದ್ರೆ ಮಾಡಿಲ್ಲ, ಈತನಿಗೆ ನಿದ್ದೆ ಮಾಡುವುದೇ ಮರೆತುಹೋದಂತಿದೆ. ಏಕೆಂದರೆ ಈತ ಬರೋಬ್ಬರಿ 40 ವರ್ಷದಿಂದ ನಿದ್ದೆಯನ್ನೇ ಮಾಡಿಲ್ಲವಂತೆ. ವಿಯೇಟ್ನಾಂ ದೇಶದ ಟ್ರಂಗ್ ಹಾ ಎಂಬ ಹಳ್ಳಿಯ ಥಾಯ್ ಯಿಂಗಾಕ್ ಎಂಬ ವ್ಯಕ್ತಿ ಕಳೆದ 40 ವರ್ಷಗಳಿಂದ ನಿದ್ದೆಯನ್ನೇ ಮಾಡದೇ ವಿಜ್ಞಾನಕ್ಕೆ ಸವಾಲಾಗಿದ್ದಾರೆ. ಇಷ್ಟು ದಿನಗಳ ಅವಧಿಯಲ್ಲಿ ಥಾಯ್ ಯಿಂಗಾಕ್ ಒಂದೇ ಒಂದು ಬಾರಿ ಮಲಗಿಲ್ಲ ಎಂದರೆ ಅಚ್ಚರಿಯ ಸಂಗತಿ. ವೈದ್ಯರೂ ಕೂಡ ಹಲವು ಬಾರಿ ಇವರನ್ನು ಪರೀಕ್ಷೆಗೆ ಒಳಪಡಿಸಿದ್ದರೂ ನಿದ್ರೆ ಮಾಡದ ಈತನ ಒಳ ಮರ್ಮ ಏನೆಂಬುದನ್ನು ತಿಳಿಯಲು ಸಾಧ್ಯವಾಗಿಲ್ಲ. ಸದಾ ಕಾಲ ಚಟುವಟಿಕೆಯಿಂದ ಕೂಡಿರುವ ಇವರ ಬಗ್ಗೆ ವೈದ್ಯರು ಕೂಡ ಅಚ್ಚರಿ ವ್ಯಕ್ತಪಡಿಸುತ್ತಾರೆ. 1973 ರಲ್ಲಿ ಥಾಯ್ ಯಿಂಗಾಕ್ ಗೆ ಒಮ್ಮೆ ಜ್ವರ ಬಂದಿತ್ತು.