ನಿಮ್ಮ ನೆಚ್ಚಿನ ಕಾಮಿಡಿಯನ್ ಪ್ರಕಾಶ್ ಆರ್ ಕೆ ಅವರ ಇನ್ನೊಂದು ಮುಖ ಇಲ್ಲಿದೆ ನೋಡಿ..ಯಾರು ಈ ಪ್ರಕಾಶ್ ಗೊತ್ತಾ ? - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ನಿಮ್ಮ ಮೆಚ್ಚಿನ ಕಾಮಿಡಿಯನ್ ಪ್ರಕಾಶ್ ಆರ್ ಕೆ ಇನ್ನೊಂದು ಮುಖ ಇಲ್ಲಿದೆ ಯಾರು ಪ್ರಕಾಶ್ ಆರ್ ಕೆ ?ಬಹುಮುಖ ವ್ಯಕ್ತಿತ್ವವುಳ್ಳ ಪ್ರತಿಭೆ ಈ ಪ್ರಕಾಶ್ ಆರ್ ಕೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಹಾಸ್ಯ ಕಲಾವಿದ ಹಾಗೂ ಐ ಪಿ ಎಲ್ ನಲ್ಲಿ ಆರ್ ಸಿ ಬಿ ಪ್ರಮೋಟರ್ ಕೂಡ ಹೌದು. ಚಸ್ಮಾ ಹಾಕಿಕೊಂಡು ಐ ಪಿ ಎಲ್ ಸಮಯದಲ್ಲಿ ಆರ್ ಸಿ ಬಿ ಗೆದ್ದಾಗ ಹಾಗೂ ಸೋತಾಗಲು ಸಹ ಆರ್ ಸಿ ಬಿ ಗೆ ಸಪೋರ್ಟ್ ಮಾಡುತ್ತ ಆರ್ ಸಿ ಬಿ ಅಭಿಮಾನಿಗಳನ್ನು ಹುರಿದುಂಬಿಸುತ್ತಿದ್ದ ಈ ಪ್ರಕಾಶ್ ಆರ್ ಕೆ ಅವರು ಮೂಲತಃ ಬಿಜಾಪುರದವರಾಗಿದ್ದು ಒಂದು ಬಡ ಕುಟುಂಬದ ಕುಡಿಯಾಗಿದ್ದಾರೆ. ಸದಾ ತಮ್ಮ ಹಾಸ್ಯ ಶೈಲಿಯಿಂದ ಉತ್ತರ ಕರ್ನಾಟಕದ ಭಾಷೆಯಲ್ಲಿ ಜನರನ್ನು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಸ್ಯ ಪ್ರತಿಭೆಯಿಂದ ರಂಜಿಸುತ್ತಾ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ವಿಜಯಪುರದಲ್ಲಿ ಮುನ್ನೆಲೆಗೆ ಬಂದಂತಹ ಈ ಪ್ರಕಾಶ್ ಆರ್ ಕೆ ಮೂಲತಃ ಗದುಗಿನವರಾಗಿದ್ದು ತಂದೆ ರಮೇಶ್ ಹಾಗೂ ತಾಯಿ ಲೀಲಾಭಾಯಿ ದಂಪತಿಗಳಿಗೆ ಮೂವರು ಗಂಡು ಮಕ್ಕಳ ಪೈಕಿ 2ನೇ ಅವರಾಗಿ ಜನಿಸಿದ ಪ್ರಕಾಶ್ ಅವರು ಕೇವಲ 7ನೇ ತರಗತಿಯಷ್ಟಕ್ಕೆ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಾರೆ.

ಮನೆಯಲ್ಲಿನ ಬಡತನದಿಂದ ಗದುಗಿನಿಂದ ವಿಜಯಪುರಕ್ಕೆ ವಲಸೆ ಬಂದ ಪ್ರಕಾಶ್ ಕುಟುಂಬ ಸಣ್ಣ ಹೋಟೆಲ್ ಒಂದನ್ನು ತೆರೆದು ಜೀವನ ನಡೆಸಲು ಆರಂಭಿಸುತ್ತಾರೆ. ಕೆಲವು ವರ್ಷಗಳು ಹೋಟೆಲ್ ವ್ಯಾಪಾರವನ್ನು ನೋಡಿಕೊಂಡ ಪ್ರಕಾಶ್ ಅನಂತರ ಹೆಚ್ಚಾಗಿ ನಾಟಕ ಹಾಗೂ ಅಭಿನಯದಲ್ಲಿ ಚಿಕ್ಕಂದಿನಿಂದಲೇ ಆಸಕ್ತಿ ಹೊಂದಿದ್ದ ಇವರು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ನೇರವಾಗಿ ಕಟ್ಟಿ ಪಾಸ್ ಮಾಡುತ್ತಾರೆ. ನಾಟಕದಲ್ಲಿ ಹೆಚ್ಚು ಒಲವಿದ್ದ ಪ್ರಕಾಶ್ ತನ್ನ ಕೆಲವು ಗೆಳೆಯರೊಂದಿಗೆ ಸೇರಿ ನಾಟಕಗಳನ್ನು ಮಾಡುತ್ತ ಕಲೆಯನ್ನು ಬೆಳೆಸಿಕೊಳ್ಳುತ್ತಾರೆ ಆದರೆ ವಿಜಯಪುರದಲ್ಲಿ ಅವರಿಗೆ ಹೆಚ್ಚಾಗಿ ಉತ್ತಮ ವೇದಿಕೆ ಸಿಗದೇ ರಂಗಮಂದಿರ ಇದ್ದರೂ ಅಲ್ಲಿನ ಅವ್ಯವಸ್ಥೆ ಹಾಗೂ ಅಸ್ವಚ್ಚತೆಯನ್ನು ಕಂಡು ಪ್ರಕಾಶ್ ಅವರು ಸಮಾಜ ಸೇವೆಗೆ ತೊಡಗಿಕೊಳ್ಳುವುದಲ್ಲದೆ ಅಲ್ಲಿನ ಜನರ ನೋವು ನಲಿವುಗಳನ್ನ ಹಾಗೂ ಸರ್ಕಾರ ಸರಿಯಾಗಿ ಜನರ ತೊಂದರೆಗಳಿಗೆ ಸ್ಪಂದಿಸದಿದ್ದುದನ್ನು ಕಂಡು ಪ್ರಕಾಶ್ ಅವರು ಗಾನಯೋಗಿ ಸಂಘವನ್ನು ತಮ್ಮ ಕೆಲವು ಗೆಳೆಯರೊಂದಿಗೆ ಸೇರಿ ಶುರು ಮಾಡುತ್ತಾರೆ.

ತಮ್ಮ ಸ್ನೇಹಿತರ ಜೊತೆಗಿನ ಗಾನಯೋಗಿ ಸಂಘದ ಮೂಲಕ ಬಣ್ಣ ಮಾಸಿದ ಸರ್ಕಾರಿ ಶಾಲೆಗಳ ಗೋಡೆಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಬಣ್ಣ ಹಚ್ಚಿ ಶಾಲೆಗಳು ಸ್ವಚ್ಛಂದವಾಗಿ ಕಾಣುವಂತೆ ಮಾಡುವುದಲ್ಲದೆ ಸಾರ್ವಜನಿಕ ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ಅಂದವಾಗಿ ಕಾಣುವ ಹಾಗೆ ಮಾಡುತ್ತಿದ್ದಾರೆ. ಈ ಎಲ್ಲಾ ಕೆಲಸಗಳನ್ನು ಯಾವುದೇ ಪ್ರಚಾರ ಹಾಗೂ ಜನಪ್ರಿಯತೆ ಆಸೆಗಳಿಲ್ಲದೆ ಪ್ರಕಾಶ್ ಆರ್ ಕೆ ಅವರು 5 ವರ್ಷಗಳಿಂದ ಇಂದಿಗೂ ಮಾಡುತ್ತ ಬಂದಿದ್ದಾರೆ. ಈ ಎಲ್ಲಾ ಕೆಲಸಗಳಿಗೂ ಯಾರಿಂದಲೂ ನಯ ಪೈಸೆ ಕೈ ಚಾಚದೆ ಮಾಡುತ್ತಿದ್ದಾರೆ. ಇದಿಷ್ಟೇ ಅಲ್ಲದೇ ಇವರು ಒಬ್ಬ ಡೈರೆಕ್ಟರ್ ಕೂಡ ಆಗಿದ್ದು ಅನೇಕ ಸಮಾಜಮುಖಿ ಕಿರುಚಿತ್ರಗಳನ್ನು ರಚಿಸಿದ್ದಾರೆ.

Leave a Reply

Your email address will not be published. Required fields are marked *