ಮಾಜಿ ಸಿಎಂ ಮಕ್ಕಳು ಎಷ್ಟು ಓದಿದ್ದಾರೆ ಅವರ ನಿಖರ ಆಸ್ತಿ ಎಷ್ಟು...ಗೊತ್ತಾ ಈ ವಿಡಿಯೋ ನೋಡಿ - Karnataka's Best News Portal

ಕರ್ನಾಟಕದ ಸಿಎಂ ಗಳ ಮಕ್ಕಳ ಬಗ್ಗೆ ನಿಮಗೆಷ್ಟು ಮಾಹಿತಿ ಗೊತ್ತಿದೆ?ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರ ಬಗ್ಗೆ ಕರ್ನಾಟಕದ ಜನತೆಗೆ ಪರಿಚಯ ಇದೆ. 34 ವರ್ಷದ ನಿಖಿಲ್ ಕುಮಾರಸ್ವಾಮಿ ಅವರು 2014ರ ಲೋಕಸಭೆ ಚುನಾವಣೆ ಸಮಯದಲ್ಲಿ ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದರು. ಆ ಸಮಯದಲ್ಲಿ ಕರ್ನಾಟಕದಾದ್ಯಂತ ನಿಖಿಲ್ ಎಲ್ಲಿದ್ದೀಯಪ್ಪ ಎನ್ನುವ ಟ್ರೋಲ್ ವೈರಲ್ ಕೂಡ ಆಗಿತ್ತು. ಆದರೆ ಈ ಎಲೆಕ್ಷನ್ ಅಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸುಮಲತಾ ಅಂಬರೀಶ್ ಅವರ ವಿರುದ್ಧ ಬಾರಿ ಅಂತರದಲ್ಲಿ ಸೋಲು ಕಂಡರು. ಇದರ ಜೊತೆಗೆ ಇವರು ಕನ್ನಡ ಸಿನಿಮಾಗಳಲ್ಲಿ ಹೀರೋ ಆಗಿ ಕೂಡ ಮಿಂಚುತ್ತಿದ್ದಾರೆ ಇದುವರೆಗೆ ನಾಲ್ಕೈದು ಸಿನಿಮಾಗಳಲ್ಲಿ ನಾಯಕ ನಟ ಆಗಿದ್ದಾರೆ. ಜಾಗ್ವಾರ್, ಸೀತಾರಾಮ ಕಲ್ಯಾಣ, ರೈಡರ್ ಮತ್ತು ಕುರುಕ್ಷೇತ್ರ ಸಿನಿಮಾಗಳಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಅದ್ಭುತವಾಗಿ ಅಭಿನಯ ಮಾಡಿದ್ದಾರೆ.

2014ರ ಲೋಕಸಭಾ ಚುನಾವಣೆ ವೇಳೆ ಇವರು ತಮ್ಮ ಆಸ್ತಿಯನ್ನು 74 ಕೋಟಿ ರೂ ಎಂದು ಘೋಷಿಸಿಕೊಂಡಿದ್ದಿರೆ. ಇವರು ಪೆರಿಯಾರ್ ಯುನಿವರ್ಸಿಟಿಯಿಂದ ಪದವಿ ಪಡೆದುಕೊಂಡಿದ್ದಾರೆ. ಸಿನಿಮಾ ಪ್ರೊಡ್ಯೂಸರ್ ಕೆ ಸಿ ಎನ್ ಮೋಹನ್ ಅವರ ಮಗಳು ಸ್ವಾತಿ ಅವರೊಂದಿಗೆ 2015ರಲ್ಲಿ ನಿಖಿಲ್ ಅವರ ಎಂಗೇಜ್ಮೆಂಟ್ ಆಗಿತ್ತು. ಆದರೆ ನಂತರದಲ್ಲಿ ಹಲವು ಮಿಸ್ ಅಂಡರ್ಸ್ಟ್ಯಾಂಡಿಂಗ್ ಉಂಟಾದ ಕಾರಣ ಈ ಎಂಗೇಜ್ಮೆಂಟ್ ಮುರಿದು ಬಿತ್ತು. ನಂತರ 2020ರಲ್ಲಿ ಮಾಜಿ ಸಚಿವ ಕೃಷ್ಣಪ್ಪ ಅವರ ಮೊಮ್ಮಗಳು ರೇವತಿ ಅವರೊಂದಿಗೆ ನಿಖಿಲ್ ಕುಮಾರಸ್ವಾಮಿ ಅವರ ವಿವಾಹವಾಯಿತು. ಈಗ ಈ ಮುದ್ದಾದ ಜೋಡಿಗೆ ಗಂಡು ಮಗು ಕೂಡ ಇದೆ. ಮುಂದಿನ ವಿಧಾನಸಭೆ ಎಲೆಕ್ಷನ್ ಅಲ್ಲಿ ಕೂಡ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಹಿಡಿತ ಇರುವ ಕ್ಷೇತ್ರದಿಂದ ಸ್ಪರ್ಧಿಸುವ ಎಲ್ಲಾ ಸಾಧ್ಯತೆಗಳು ಕೂಡ ಇವೆ.

ಬಿ ವೈ ವಿಜಯೇಂದ್ರ ಅವರು ಬಿ ಎಸ್ ಯಡಿಯೂರಪ್ಪ ಅವರ ಕಿರಿಯ ಪುತ್ರ. 47 ವರ್ಷದ ಇವರು ಈವರೆಗೆ ಚುನಾವಣೆಗೆ ನಿಂತಿಲ್ಲ. 2018ರ ವಿಧಾನಸಭೆ ಚುನಾವಣೆ ತನಕ ಇವರ ಬಗ್ಗೆ ಯಾರಿಗೂ ಹೆಚ್ಚಾಗಿ ತಿಳಿದೇ ಇರಲಿಲ್ಲ. ಆದರೆ 2018ರಲ್ಲಿ ವರುಣಾ ಕ್ಷೇತ್ರದಿಂದ ಇವರನ್ನು ಕಣಕ್ಕೆ ಇಳಿಸಲಾಗುತ್ತದೆ ಎಂದು ಹೇಳಲಾಗಿತ್ತು. ಇವರು ಅದೇ ಗಡಿಬಿಡಿಯಲ್ಲಿ ವರುಣ ಕ್ಷೇತ್ರಕ್ಕೆ ಹೋಗಿ ಪ್ರಚಾರವನ್ನು ಕೂಡ ಮಾಡಿದ್ದರು. ಆದರೆ ನಂತರ ಬಿಜೆಪಿ ಹೈಕಮಾಂಡ್ ವಿಜಯೇಂದ್ರ ಅವರಿಗೆ ಟಿಕೆಟ್ ಕೊಡಲಿಲ್ಲ. ಇದರಿಂದ ವರುಣ ಕ್ಷೇತ್ರದ ಕಾರ್ಯಕರ್ತರು ಗಲಾಟೆ ಕೂಡ ಮಾಡಿದ್ದರು. ಕಡಿಮೆ ಅವಧಿಯಲ್ಲಿ ಎಲ್ಲರ ಮನೆ ಗೆಲುವಲ್ಲಿ ವಿಜಯಂತ ಅವರು ಯಶಸ್ವಿ ಆಗಿದ್ದರು ಎಂದೇ ಹೇಳಬಹುದು. ಈ ವಿಷಯದ ಕುರಿತಾದ ಮತ್ತಷ್ಟು ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Reply

Your email address will not be published. Required fields are marked *