100% ಈ ಟಿಪ್ಸ್ ಬಳಸಿ ತೆಂಗಿನಕಾಯಿ ತುರಿಯುವುದು ತುಂಬಾ ಸುಲಭ 6 ತಿಂಗಳವರೆಗೆ ಕೆಡುವುದಿಲ್ಲ...! - Karnataka's Best News Portal

ತೆಂಗಿನಕಾಯಿ ಅಡುಗೆಗೆ ಬಳಸುವವರು ತಿಳಿದುಕೊಳ್ಳಲೇಬೇಕಾದ ಉಪಾಯ ಇದು…ತೆಂಗಿನಕಾಯಿ ಎಲ್ಲಾ ಅಡಿಗೆಗೂ ಬೇಕಾದ ಪ್ರಮುಖ ಪದಾರ್ಥ. ಗಾದೆ ಮಾತು ಇರುವಂತೆ ಇಂಗು ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡಬಹುದು. ಯಾಕೆಂದರೆ ಊಟದ ರುಚಿ ಹೆಚ್ಚಿಸುವುದೇ ಈ ತೆಂಗಿನಕಾಯಿ. ಯಾವುದೇ ಟಿಫನ್ ಆಗಲಿ ಸಾಂಬಾರ್ ಆಗಲಿ ಸಿಹಿ ಪದಾರ್ಥವೆ ಆಗಲಿ ಅದಕ್ಕೆ ತೆಂಗಿನಕಾಯಿ ಬೇಕೇ ಬೇಕು. ಹೀಗಾಗಿ ಮಾರ್ಕೆಟ್ ಅಲ್ಲಿ ತೆಂಗಿನಕಾಯಿ ವಿಪರೀತ ಬೆಲೆ ಇರುತ್ತದೆ. ಅಲ್ಲದೆ ತೆಂಗಿನ ಕಾಯಿಯ ವಿಶೇಷತೆ ಏನೆಂದರೆ ಇದು ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು. ಅಡುಗೆ ಮಾಡುವಾಗ ತೆಂಗಿನಕಾಯಿಯನ್ನು ಬಳಸಲು ಮಾರ್ಕೆಟ್ ಇಂದ ತಂದು ಹೊಡೆಯುತ್ತೇವೆ ಆದರೆ ಸಂಪೂರ್ಣ ಕಾಯನ್ನು ಒಂದೇ ದಿನಕ್ಕೆ ಬಳಸುವುದು ತುಂಬಾ ಕಡಿಮೆ ಹಾಗಾಗಿ ಮತ್ತೊಂದು ದಿನಕ್ಕೆ ಆಗಲಿ ಎಂದು ಇದನ್ನು ಎತ್ತಿ ಇಡುತ್ತಾರೆ. ಫ್ರಿಡ್ಜ್ ಇರುವವರು ಯಾವುದೇ ತೊಂದರೆ ಇಲ್ಲದೆ ನಿಭಾಯಿಸುತ್ತಾರೆ.

ಆದರೆ ಇಲ್ಲದವರು ಕೂಡ ಇದನ್ನು ಕೆಡದಂತೆ ನೋಡಿಕೊಳ್ಳಬಹುದು ಅದಕ್ಕೆ ಮಾಡಬೇಕಾಗಿರುವುದು ಇಷ್ಟೇ, ತೆಂಗಿನಕಾಯಿ ಹೋಳನ್ನು ಒಂದು ಪಾತ್ರೆಯಲ್ಲಿ ಇಟ್ಟು ಅದರ ತುಂಬಾ ನೀರು ತುಂಬಿಸಿ ಹಾಗು ಪ್ರತಿದಿನ ಈ ನೀರನ್ನು ಬದಲಾಯಿಸುತ್ತಾ ಇರಿ ಈ ರೀತಿ ಮಾಡುವುದರಿಂದ ವಾರದವರೆಗೆ ಇದು ಕೆಡದಂತೆ ಹಾಗೂ ಫ್ರೆಶ್ ಆಗಿರುವಂತೆ ನೋಡಿಕೊಳ್ಳಬಹುದು. ಹಿಂದೆಲ್ಲ ಈ ರೀತಿ ತೆಂಗಿನಕಾಯಿ ಹಾಳಾಗಬಾರದು ಎಂದರೆ ಬಿಸಿಲಿನಲ್ಲಿ ಇಟ್ಟು ಒಣಗಿಸಿ ಅಥವಾ ಒಲೆ ಮೇಲೆ ಇಟ್ಟು ಒಣಗಿಸಿ ಶೇಖರಿಸಿ ಇಟ್ಟುಕೊಳ್ಳುತ್ತಿದ್ದರು. ಇದಕ್ಕಾಗಿ ಇರುವ ಇನ್ನೂ ಒಂದು ಅದ್ಭುತವಾದ ವಿಧಾನ ಏನೆಂದರೆ ತೆಂಗಿನ ಕಾಯಿ ಓಳನ್ನು ಪೂರ್ತಿಯಾಗಿ ಕಂಠದಿಂದ ಬೇರ್ಪಡಿಸಿ ಕಾಯಿಯ ಒಳಗೆ ಬಟ್ಟೆಯನ್ನು ಸುತ್ತಿ ನಂತರ ಮೇಲಿನಿಂದ ಕಲ್ಲಲ್ಲಿ ಮೆಲ್ಲಮೆಲ್ಲಗೆ ಏಟು ಕೊಡುವುದರಿಂದ ಅದು ಬಿಟ್ಟುಕೊಳ್ಳುತ್ತದೆ ಅಥವಾ ಚಾಕುವಿನ ಸಹಾಯದಿಂದ ಪೂರ್ತಿ ಹೊಳನ್ನು ಕಂಠದಿಂದ ಬೇರ್ಪಡಿಸಬಹುದು.

ಇದಾದ ನಂತರ ಕಂದು ಬಣ್ಣದಲ್ಲಿ ಇರುವ ಮೇಲ್ಪದರವನ್ನು ಸುಲಿದುಕೊಳ್ಳಿ. ಈಗ ಎಲ್ಲವನ್ನು ಸಣ್ಣ ಸಣ್ಣ ಪೀಸ್ ಗಳಾಗಿ ಮಾಡಿ ಮಿಕ್ಸಿ ಜಾರಿಗೆ ಹಾಕಿ ಈಗ ಗ್ರೈಂಡ್ ಮಾಡಿದರೆ ನೀವು ತುರಿಯುವ ರೀತಿಯಲ್ಲಿಯೇ ತೆಂಗಿನ ಕಾಯಿ ಪುಡಿಪುಡಿಯಾಗಿ ಬಂದಿರುತ್ತದೆ. ಇದನ್ನು ಹಲವು ದಿನಗಳವರೆಗೆ ಇಟ್ಟುಕೊಳ್ಳಬೇಕು ಎಂದರೆ ಕಡಿಮೆ ಉರಿಯಲ್ಲಿ ಸ್ವಲ್ಪ ಫ್ರೈ ಮಾಡಿ ಅದು ಬಣ್ಣ ಬದಲಾಗುತ್ತದೆ ಇಳಿಸಿಬಿಡಿ ಇದನ್ನು ನೀವು ಹಲವು ದಿನಗಳವರೆಗೆ ಕೊಬ್ಬರಿ ತುರಿಯ ರೀತಿಯಲ್ಲಿ ಸಿಹಿ ತಿನಿಸುಗಳಿಗೆ ಆಗಲಿ ದಿನನಿತ್ಯ ಬಳಸುವ ಸಾಂಬಾರ್ ಚಟ್ನಿ ಇನ್ ಯಾವುದೇ ಆಹಾರ ಪದಾರ್ಥಗಳ ತಯಾರಿಕೆಗೆ ಆಗಲಿ ನಿಶ್ಚಿಂತೆಯಾಗಿ ಬಳಸಬಹುದು.

Leave a Reply

Your email address will not be published. Required fields are marked *