ಮನೆಯ ಅಭಿವೃದ್ದಿಗೆ ಗೃಹಿಣಿಯರು ಈ ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ಮನೆಯಲ್ಲಿ ನೆಮ್ಮದಿ ಸ್ಥಿರವಾಗಿರುತ್ತೆ.. - Karnataka's Best News Portal

ಮನೆಯ ಅಭಿವೃದ್ದಿಗೆ ಗೃಹಿಣಿಯರು ಈ ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ಮನೆಯಲ್ಲಿ ನೆಮ್ಮದಿ ಸ್ಥಿರವಾಗಿರುತ್ತೆ..

ಮನೆಯ ಅಭಿವೃದ್ಧಿಗೆ ಗೃಹಿಣಿಯರು ಈ ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ಮನೆಯಲ್ಲಿ ನೆಮ್ಮದಿ ಸ್ಥಿರವಾಗಿರುತ್ತೆ //ಮನೆಯಲ್ಲಿ ಯಾವುದೇ ರೀತಿಯಾಗಿ ಅಭಿವೃದ್ಧಿಯನ್ನು ಹೊಂದಬೇಕಾದರೆ ಹಿಂದಿನ ಕಾಲದವರು ಕೆಲವೊಂದ ಷ್ಟು ರೀತಿ ನೀತಿ ನಿಯಮಗಳನ್ನು ಹಾಕಿಕೊಂಡಿದ್ದರು ಹಾಗಾದರೆ ಅವು ಯಾವುವು ಅವರು ಅನುಸರಿಸುತ್ತಿದ್ದ ನಿಯಮಗಳು ಹಾಗೂ ಪದ್ಧತಿಗಳು ಯಾವುವು ಅವುಗಳಿಂದ ಯಾವುದೆಲ್ಲ ಅಭಿವೃದ್ಧಿಯಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ. ಈ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸಿದರೆ ನಾವು ಮನೆಯಲ್ಲಿ ನೆಮ್ಮದಿಯಿಂದ ಇರಬಹುದು ಎಂದೇ ಹೇಳಬಹುದಾ ಗಿದೆ ಮುಖ್ಯವಾಗಿ ಹೇಳಬೇಕು ಎಂದರೆ ಮನೆ ಎಷ್ಟೇ ದೊಡ್ಡದಾಗಲಿ ಅಥವಾ ಚಿಕ್ಕದಾಗಿರಲಿ ಅದನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬ ಮನೆಯ ಹೆಣ್ಣು ಮಗಳ ಕರ್ತವ್ಯವಾಗಿರುತ್ತದೆ ಇದೇ ಮುಖ್ಯ ಕಾರಣ ಮನೆಯಲ್ಲಿ ಶಾಂತಿ ನೆಮ್ಮದಿ ಮತ್ತು ಆರೋಗ್ಯ ದಿಂದ ಇರಲು ಎಂದೇ ಹೇಳುತ್ತಾರೆ.

ಮೊದಲನೆಯದಾಗಿ ಅಡುಗೆ ಮನೆಯನ್ನು ಯಾವ ರೀತಿ ಇಟ್ಟುಕೊಳ್ಳಬೇಕು ಹಾಗೆ ಇಡುವುದರಿಂದ ಯಾವುದೆಲ್ಲ ಲಾಭಗಳು ದೊರೆಯುತ್ತದೆ ಎಂದು ನೋಡುವುದಾದರೆ ಮನೆ ಅಭಿವೃದ್ಧಿಯಾಗಬೇಕು ಎಂದರೆ ಮುಖ್ಯ ಕಾರಣವೇ ಆ ಮನೆಯಲ್ಲಿರುವಂತಹ ಅಡುಗೆಮನೆ ,ಮನೆಯಲ್ಲಿ ಗಂಡಸರು ಹೊರಗಡೆ ಹೋಗಿ ಎಷ್ಟೇ ಸಂಪಾದನೆ ಮಾಡಿಕೊಂಡು ಬಂದರೂ ಸಹ ಅವರಿಗೆ ನೆಮ್ಮದಿ ದೊರೆಯುವಂತಹ ಸ್ಥಾಳವೇ ಮನೆ ಆದ್ದರಿಂದ ಅವರು ಆರೋಗ್ಯವಾಗಿರಬೇಕು ಮತ್ತು ಆರೋಗ್ಯವಾಗಿರುವಂತೆ ಆಹಾರ ಪದಾರ್ಥ ವನ್ನು ತಯಾರು ಮಾಡುವುದು ಈ ಅಡುಗೆ ಮನೆಯಲ್ಲಿ ಆದ್ದರಿಂದ ಆ ಮನೆಯ ಅಭಿವೃದ್ಧಿಯಾಗು ತ್ತದೆ ಎಂದು ಹೇಳುತ್ತಾರೆ ಆದ್ದರಿಂದ ಅಡುಗೆ ಮನೆಯಲ್ಲಿ ಯಾವುದೇ ಪದಾರ್ಥವನ್ನು ಮಾಡಿದರೆ ಅದನ್ನು ಪೂರ್ತಿಯಾಗಿ ಖಾಲಿ ಮಾಡಿ ಇಡಬಾರದು ಯಾಕೆ ಎಂದರೆ ಲಕ್ಷ್ಮಿ ಸ್ವರೂಪವಾದಂತಹ ಆಹಾರವು ಪೂರ್ತಿಯಾಗಿ ಖಾಲಿ ಆಗಬಾರದು ಬದಲಾಗಿ ಸ್ವಲ್ಪವಾದರೂ ಆಹಾರವನ್ನು ಪಾತ್ರೆಯಲ್ಲಿಯೇ ಉಳಿಸುವುದು ಶ್ರೇಯಸ್ಸು.

ಮತ್ತು ಮನೆಯಲ್ಲಿ ಅತಿಯಾಗಿ ನೀರನ್ನು ಬಳಸಬಾರದೆ ಅಂದರೆ ಅವಶ್ಯಕತೆಗೂ ಮೀರಿ ಹೆಚ್ಚಿನ ನೀರನ್ನು ಬಳಸಬಾರದು ಇದರಿಂದ ಹಣಕಾಸಿನಲ್ಲಿ ನಷ್ಟವಾಗುವ ಸಂಭವ ಇರುತ್ತದೆ ಮತ್ತು ದುಂದು ವೆಚ್ಚಗಳು ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಮನೆಯ ಆಗ್ನೇಯ ಮೂಲೆಯಲ್ಲಿ ಒಂದು ಮನಿ ಪ್ಲಾಂಟ್ ಗಿಡವನ್ನು ಇಟ್ಟರೆ ಹಣಕಾಸಿನ ಸಮಸ್ಯೆ ಆಗುವುದಿಲ್ಲ ಎಂದು ತಿಳಿದವರು ಹೇಳುತ್ತಾರೆ ಆದ್ದರಿಂದ ಆಗ್ನೇಯ ಮೂಲೆಯಲ್ಲಿ ಅಂದರೆ ಅಡುಗೆ ಮನೆಯಲ್ಲಿ ಯಾವುದೇ ಮೂಲೆಯಲ್ಲಾದರು ಸರಿ ಮನಿ ಪ್ಲಾಂಟ್ ಗಿಡವನ್ನು ಇಡುವುದು ಉತ್ತಮ ಮುಖ್ಯವಾಗಿ ತಿಳಿದಿರ ಬೇಕಾದಂತ ವಿಷಯ ಏನು ಎಂದರೆ ಅಡುಗೆ ಮನೆಯಲ್ಲಿ ಉಪ್ಪಿನ ಡಬ್ಬಿಯನ್ನು ಮತ್ತು ಅರಿಶಿಣದ ಡಬ್ಬಿಯನ್ನು ಅಕ್ಕಪಕ್ಕ ಇಡಬಾರದು ಈ ರೀತಿ ಇಟ್ಟರೆ ಮನೆಯಲ್ಲಿ ಹಣಕಾಸಿನ ತೊಂದರೆಗಳು ಉಂಟಾಗು ತ್ತದೆ ಆದ್ದರಿಂದ ಬೇರೆ ಬೇರೆ ಸ್ಥಳಗಳಲ್ಲಿ ಇಡುವುದು ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.