ಈ 15 ಕಾರಣಕ್ಕೆ ಹಲಸಿನ ಹಣ್ಣು ತಿನ್ನಲೆಬೇಕು..ದೊಡ್ಡ ರೋಗಗಳಿಗೆ ಸಂಜೀವಿನಿ ಇದು..ಇದರ ಲಾಭ ನೋಡಿ » Karnataka's Best News Portal

ಈ 15 ಕಾರಣಕ್ಕೆ ಹಲಸಿನ ಹಣ್ಣು ತಿನ್ನಲೆಬೇಕು..ದೊಡ್ಡ ರೋಗಗಳಿಗೆ ಸಂಜೀವಿನಿ ಇದು..ಇದರ ಲಾಭ ನೋಡಿ

ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಉಪಯೋಗಗಳುಹಸಿದು ಹಲಸು ತಿನ್ನು ಉಂಡು ಮಾವು ತಿನ್ನು ಎನ್ನುವ ಗಾದೆ ಮಾತಿನಂತೆ ಹಲಸು ಮಾವು ಹಣ್ಣುಗಳ ರಾಜನಂತೆ. ಹಲಸಿನ ಹಣ್ಣು ಬಹಳ ಶಕ್ತಿಯುತ ಹಾಗೂ ಬಲಿಷ್ಠ ಆಹಾರ ಆಗಿದ್ದು ಈ ಹಲಸಿನ ಹಣ್ಣಿನಲ್ಲಿ ಪಾಯಸ, ಪಲ್ಯ, ಸಾಂಬಾರ್ ಮುಂತಾದ ವಿಧವಾದ ಅಡುಗೆಗಳನ್ನು ತಯಾರಿಸುತ್ತಾರೆ. ಹಲಸಿನ ಸೀಸನ್ ನಲ್ಲಿ ಹಲಸಿನ ಹಣ್ಣನ್ನು ತಿಂದರೆ ಇದರ ಅಧಿಕ ಆರೋಗ್ಯದ ಲಾಭವನ್ನು ನಾವು ಪಡೆಯಬಹುದು. ಇದರಲ್ಲಿ ವಿಟಮಿನ್ b6 ವಿಟಮಿನ್ a1 ವಿಟಮಿನ್ ಸಿ, ಐರನ್, ಕ್ಯಾಲ್ಸಿಯಂ, ಫೈಬರ್ ಅಂಶಗಳು ಹೇರಳವಾಗಿ ದೊರೆಯುತ್ತದೆ. ಹಲಸಿನ ಹಣ್ಣನ್ನು ಸೇವನೆ ಮಾಡುವುದರಿಂದ ಲೈಂಗಿಕ ಸಮಸ್ಯೆಗಳಾದ ನಪುಂಸಕತ್ವ, ನಿಶಕ್ತಿ ಮುಂತಾದ ಸಮಸ್ಯೆಗಳು ದೂರಗುತ್ತದೆ. ಹೃದಯ ಸಂಬಂಧಿ ಖಾಯಿಲೆಗಳು, ಹೃದಯ ಬಲ ಹೀನತೆ ಹೀಗೆ ಇನ್ನು ಅನೇಕ ರೋಗಗಳಿಗೆ ರಾಮಬಾಣ ಈ ಹಲಸು.


ಇದು ಹೃದಯದ ಪಂಪಿಂಗ್ ಕೆಪ್ಯಾಸಿಟಿ ಹೆಚ್ಚು ಮಾಡುವುದಲ್ಲದೆ ಬೋನ್ಸ್ ಗಳಿಗೆ ಹೆಚ್ಚಿನ ಶಕ್ತಿ ಒದಗಿಸಿ ಕ್ಯಾಲ್ಸಿಯಂ ಕೊರತೆ ನೀಗಿಸುತ್ತದೆ. ರಕ್ತ ಹೀನತೆ ಸಮಸ್ಯೆ, ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳಾದ ಅಸ್ತಮಾ ಸಮಸ್ಯೆಗೆ ಇದು ಮದ್ದು. ಹಲಸಿನ ಹಣ್ಣಿನ ಸೇವನೆಯಿಂದ ಕಣ್ಣಿನ ಅರೋಗ್ಯ ಹಾಗೂ ಚರ್ಮದ ಅರೋಗ್ಯ ಉತ್ತಮ ಆಗುವುದಲ್ಲದೆ ಚರ್ಮದ ಕಾಂತಿ ಹೆಚ್ಚುತ್ತದೆ. ಸಾಮಾನ್ಯವಾಗಿ ಇತ್ತೀಚೆಗೆ ಚಿಕ್ಕ ವಯಸ್ಸಿಗೆ ಕೂದಲು ನರೆತು ಬೆಳ್ಳಗೆ ಆಗುವುದು, ಚಿಕ್ಕ ವಯಸ್ಸಿಗೆ ಕಣ್ಣಿನ ತೊಂದರೆ ಇಂದ ಕನ್ನಡಕ ಹಾಕಿಕೊಳ್ಳುವುದು ಹೆಚ್ಚಾಗಿದ್ದು ಇಂತಹ ಸಮಸ್ಯೆಗಳಿಂದ ಮಕ್ಕಳನ್ನು ಕಾಪಾಡಲು ಹಲಸಿನ ಹಣ್ಣನ್ನು ನಿಯಮಿತವಾಗಿ ಕೊಡುವುದು ಅವಶ್ಯಕ ಆಗಿದೆ ಇದರ ಸೇವನೆಯಿಂದ ಬೋನ್ ಡೆಂನ್ಸಿಟಿ ಹೆಚ್ಚಾಗುವುದಲ್ಲದೆ ಬೋನ್ ಹಾಗೂ ಬೋನ್ ಮ್ಯಾರೋ ನಲ್ಲಿ ಶಕ್ತಿ ಸಂಚಲನ ಆಗಿ ಕ್ರಿಯಾಶೀಲವಾಗಿ ರಕ್ತ ಹೀನತೆಯನ್ನು ನೀಗಿಸುತ್ತದೆ.

WhatsApp Group Join Now
Telegram Group Join Now

ಇದು ಎನರ್ಜಿಟಿಕ್ ಫುಡ್ ಆಗಿರುವುದರಿಂದ ಇದನ್ನು ನಿಯಮಿತವಾಗಿ ಸೇವಿಸಬೇಕು. ಒಂದು ಹೊತ್ತಿಗೆ ದೊಡ್ಡವರಾದರೆ 4-5 ತೊಳೆ ಮಕ್ಕಳಾದರೆ 2 ತೊಳೆ ತಿನ್ನಬೇಕು ಹೆಚ್ಚಿಗೆ ತಿಂದರೆ ಅಜೀರ್ಣದ ಸಮಸ್ಯೆ ಎದುರಾಗಬಹುದು. ಶಕ್ತಿ ಹೀನತೆಯ ಸಮಸ್ಯೆ ದೂರಾಗುವುದರ ಜೊತೆಗೆ ಶರೀರಕ್ಕೆ ಚೈತನ್ಯ ನೀಡಿ ನಿದ್ರಾ ಹೀನತೆಯ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ ಈ ಹಲಸು. ಶರೀರದ ಬೆಳವಣಿಗೆ ಹಾಗೂ ಬಲ ವರ್ಧನೆ ಕೂಡ ವೃದ್ಧಿ ಆಗುವುದರ ಜೊತೆಗೆ ಇನ್ನೂ ಹತ್ತು ಹಲವು ಆರೋಗ್ಯದ ಲಾಭವನ್ನು ಈ ಹಲಸಿನ ಹಣ್ಣು ನೀಡುತ್ತದೆ. ಕಿಡ್ನಿ ಸಮಸ್ಯೆ, ತೀವ್ರ ಹೃದಯ ಖಾಯಿಲೆ ಹಾಗೂ ಗರ್ಭಿಣಿ ಸ್ತ್ರೀಯರು ವೈದ್ಯರ ಸಲಹೆ ಮೇರೆಗೆ ಈ ಹಲಸಿನ ಹಣ್ಣನ್ನು ತಿನ್ನುವುದು ಉತ್ತಮ.



crossorigin="anonymous">