ಹುಡುಗರ ಫೇವರೆಟ್ ತಮ್ಮನ್ನಾ ಎಲ್ಲಿ ಹೋದ್ರು..ಈಕೆಯ ಆಸ್ತಿ ಎಷ್ಟು ಕೋಟಿ ಗೊತ್ತಾ ? ಇಲ್ಲಿದೆ ನೋಡಿ ಈ ನಟಿಯ ದೊಡ್ಡ ರಹಸ್ಯ - Karnataka's Best News Portal

ಪಡ್ಡೆ ಹುಡುಗರ ನಿದ್ದೆ ಕತ್ತಿರುವ ತಮನ್ನ ಭಾಟಿಯ ಅವರ ಹಿನ್ನೆಲೆ ಏನು ಗೊತ್ತಾ? ಎಷ್ಟು ಕೋಟಿ ಒಡತಿ ಈಕೆ?
ಭಾರತದ ಸಿನಿಮಾ ಲೋಕದಲ್ಲಿ ಮಿಲ್ಕಿ ಬ್ಯೂಟಿ ಎಂದು ಹೆಸರಾದವರು ತಮನ್ನ ಭಾಟಿಯ ಅವರು. ಯಶಸ್ವಿ ತ್ರಿ ಭಾಷ ನಟಿ ಆದ ತಮನ್ನ ಅವರು ಈವರೆಗೂ ಒಟ್ಟು 65 ಸಿನಿಮಾಗಿಂತಲೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿ ಹಲವಾರು ಹಿಟ್ ಗಳನ್ನು ಕೊಟ್ಟಿದ್ದಾರೆ. ಅದೆಷ್ಟೋ ಯುವಕರ ನಿದ್ದೆಗೆಡಿಸಿದ ತಮನ್ನ ವೈಯಾರದಿಂದ ಬಂದು ನಿಂತರೆ ಸಾಕು ಪಡ್ಡೆ ಹೈಕಳು ಹುಚ್ಚೆದ್ದು ಕುಡಿದು ಕೇಕೆ ಹಾಕುತ್ತಿದ್ದರು. ಹಾಲಿನ ಕೆನ್ನೆ ಅಂತಹ ನುಣುಪಾದ ಚರ್ಮದಿಂದ ಯುವಕರ ಮನಸೂರೆ ಮಾಡಿರುವಂತಹ ನಟಿ ತಮನ್ನಾ ಅವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ. ತಮನ್ನಾ ಅವರ ಪೂರ್ತಿ ಹೆಸರು ತಮನ್ನಾ ಭಾಟಿಯಾ. ಇವರು 1989, ಡಿಸೆಂಬರ್ 21ರಂದು ಸಂತೋಷ್ ಮತ್ತು ರಜಿನಿ ಭಾಟಿಯ ಎನ್ನುವ ದಂಪತಿಗಳಿಗೆ ಮುಂಬೈನಲ್ಲಿ ಜನಿಸುತ್ತಾರೆ. ತಮ್ಮನ್ನ ಅವರ ತಂದೆ ವಜ್ರ ವ್ಯಾಪಾರಿ ಆಗಿದ್ದರು ಹೀಗಾಗಿ ಅವರದು ಸಿರಿವಂತ ಕುಟುಂಬವೇ ಆಗಿತ್ತು.

ಚಿಕ್ಕ ವಯಸ್ಸಿನಿಂದಲೂ ತಮ್ಮನ್ನ ಅವರಿಗೆ ತಾವೊಬ್ಬ ನಟಿಯಾಗಬೇಕು ಎನ್ನುವ ತೀವ್ರವಾದ ಬಯಕೆ ಇತ್ತು. ಇವರ ತಮ್ಮ 12ನೇ ವಯಸ್ಸಿನಿಂದಲೇ ಶಾಲಾ ಕಾರ್ಯಕ್ರಮಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ಡ್ರಾಮಾ ಸೇರಿದಂತೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಹೀಗೆ ಒಮ್ಮೆ ಇವರ ಕಾಲೇಜಿನ ಒಂದು ಸಮಾರಂಭದಲ್ಲಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ನಿರ್ದೇಶಕರೊಬ್ಬಳ ಕಣ್ಣಿಗೆ ತಮನ್ನ ಬೀಳುತ್ತಾರೆ. ತಮನ್ನ ಅವರನ್ನು ಗಮನಿಸಿದ್ದ ನಿರ್ದೇಶಕರಿಗೆ ಅವರ ಕಥೆಯ ಮುಖ್ಯ ಪಾತ್ರವೊಂದನ್ನು ತಮನ್ನ ಅವರಿಗೆ ಕೊಡಬೇಕು ಎಂದು ನಿರ್ಧರಿಸಿದರಂತೆ. 2005ರಲ್ಲಿ ಅಂದ್ರೆ ತಮ್ಮ 16ನೇ ವಯಸ್ಸಿಗೆ ತಮನ್ನ ಅವರು ಲೀಡ್ ರೋಲಲ್ಲಿ ನಟಿಸಿದ ಮೊದಲ ಚಿತ್ರ ಬಿಡುಗಡೆ ಆಗುತ್ತದೆ.

ಚಾಂದ್ ಸೆ ರೋಹನ್ ಚೆಹರಾ ಎನ್ನುವ ಹಿಂದಿ ಚಿತ್ರದಲ್ಲಿ ಮೊದಲಿಗೆ ತಮನ್ನ ಬಣ್ಣ ಹಚ್ಚಿದ್ದು. ಆದರೆ ಬಾಕ್ಸ್ ಆಫೀಸ್ ಅಲ್ಲಿ ಈ ಸಿನಿಮಾ ಸೋತು ಹೋಗಿತ್ತು ಮತ್ತೆ ಅವರು ಬಣ್ಣ ಹಚ್ಚಿದ ಎರಡನೇ ಸಿನಿಮಾ ಶ್ರೀ ಇದು ತೆಲುಗು ಸಿನಿಮಾ ವಾಗಿತ್ತು ಆದರೆ ಇದು ಕೂಡ ಫ್ಲಾಫ್ ಆಗಿ ಹೋಯಿತು. ನಂತರ ಕೇಡಿ ಎನ್ನುವ ತಮಿಳು ಸಿನಿಮಾದಲ್ಲಿ ನಟಿಸಿದ ಇವರಿಗೆ ಈ ಚಿತ್ರದ ಪವರ್ಫುಲ್ ಪಾತ್ರ ಕೈಹಿಡಿಯುತ್ತದೆ. ಸಿನಿಮಾದ ಬಗ್ಗೆ ಒಳ್ಳೆ ವಿಮರ್ಶೆಗಳು ಮೂಡಿಬಂದು ತಮನ್ನ ಅವರ ಪಾತ್ರದ ಬಗ್ಗೆ ಎಲ್ಲರೂ ಹಾಡಿ ಹೊಗಳಿದರು.

Leave a Reply

Your email address will not be published. Required fields are marked *