ಈ ಅದ್ಬುತ ಹೊಸ ರುಚಿ ಕಾಯಿ ಚಿಪ್ಪಿನ ಮಸಾಲೆ ಟೀ ಮಾಡಿ‌ ದಿನಕ್ಕೆ 10 ಸಲ ಬೇಕಾದರು ಕುಡಿತೀರಾ..ಸೂಪರ್ ಚಿಪ್ಪಿನ ಮಸಾಲೆ ಟೀ.. » Karnataka's Best News Portal

ಈ ಅದ್ಬುತ ಹೊಸ ರುಚಿ ಕಾಯಿ ಚಿಪ್ಪಿನ ಮಸಾಲೆ ಟೀ ಮಾಡಿ‌ ದಿನಕ್ಕೆ 10 ಸಲ ಬೇಕಾದರು ಕುಡಿತೀರಾ..ಸೂಪರ್ ಚಿಪ್ಪಿನ ಮಸಾಲೆ ಟೀ..

ಚಿಪ್ಪಿನಲ್ಲಿ ಮಾಡುವಂತ ಅದ್ಬುತವಾದ ಹೊಸ ರುಚಿಯಿರುವಂತಹ ಟೀ.ಟೀ… ಚಹಾ… ಚಾಯ್​… ಹೀಗೆ  ಇದನ್ನು ನಾನಾ ಹೆಸರಿನಿಂದ ಕರೆಯಲಾಗುತ್ತದೆ. ಪ್ರಪಂಚದ ಹಲವು ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯುವ ಚಹಾ ಎಂದರೆ ತುಂಬಾ ಜನರಿಗೆ ಇಷ್ಟ. ಬೆಳಿಗ್ಗೆ ಎದ್ದ ಕೂಡಲೇ, ಊಟ, ತಿಂಡಿ ತಿಂದ ಕೂಡಲೇ ಟೀ ಕುಡಿಯುವ ಅಭ್ಯಾಸ ತುಂಬಾ ಜನರಿಗುತ್ತದೆ. ಅದರಲ್ಲೂ ಕೆಲಸ ಮಾಡುವಾಗ  ಆಗಾಗ ಟೀ ಕುಡಿಯುತ್ತಾರೆ. ಟೀ ಕುಡಿಯುವುದರಿಂದ ಸಾಕಷ್ಟು ಲಾಭಗಳಿವೆ. ಹಾಗೆಂದು ಯಾವುದನ್ನೂ ಅತಿ ಮಾಡಬಾರದು. ನಿಯಮಿತವಾಗಿ ಟೀ ಕುಡಿದರೆ ಹೃದಯದ ಆರೋಗ್ಯ, ಜೀರ್ಣಕ್ರಿಯೆ ಮತ್ತು ರಕ್ತ ಸಕ್ಕರೆ ಮಟ್ಟ ನಿಯಂತ್ರಣ ಸೇರಿದಂತೆ ಅನೇಕ ಆರೋಗ್ಯಕ್ಕೆ ಸಂಬಂಧಿಸಿದ ಲಾಭಗಳಿವೆ ಎನ್ನಲಾಗುತ್ತದೆ. ಆಯಾ ಪ್ರದೇಶಗಳಿಗೆ ತಕ್ಕಂತೆ ಟೀ ತಯಾರಿಸುವ ವಿಧಾನವೂ ಬದಲಾಗುತ್ತದೆ.

ನೀವು ಎಲ್ಲಿಯವರು ಎಂಬ ಆಧಾರದ ಮೇಲೆ ನೀವು ಯಾವ ರೀತಿಯ ಚಹಾ ಇಷ್ಟಪಡುತ್ತೀರಿ ಎನ್ನುವುದು ತಿಳಿಯುತ್ತದೆ. ಆದರೆ ಸ್ಪಷ್ಟತೆಯ ಉದ್ದೇಶಕ್ಕಾಗಿ ಈ ಇಡೀ ಲೇಖನದಲ್ಲಿ “ಚಾಯ್ ಟೀ” ಎಂಬ ಪದವನ್ನು ಬಳಸಲಾಗುತ್ತದೆ. ಟೀ ಹೃದಯದ ಆರೋಗ್ಯಕ್ಕೆ ಸಹಕಾರಿ. ಚಾಯ್ ಟೀ ಸೇವನೆಯಿಂದ ರಕ್ತದೊತ್ತಡ ನಿಯಂತ್ರಣ ಸಾಧ್ಯವಾಗಬಹುದು. ವಾಕರಿಕೆ ಕಡಿಮೆ ಮಾಡಬಹುದು. ಅಕಾಲಿಕ ನೆರಿಗೆ ಉಂಟಾಗುವುದಿಲ್ಲ. ತೂಕ ಕಡಿಮೆ ಮಾಡಲು ಸಹಾಯ ಮಾಡಬಲ್ಲದು. ಇಷ್ಟೆಲ್ಲಾ ಪ್ರಯೋಜನಕರವಾದ ಟೀಯನ್ನು ನಾವು ಹೊಸದಾದ ರೀತಿಯಲ್ಲಿ ಮಾಡೋಣ. ನಾವು ಮೊದಲಿಗೆ ಒಂದು ಚಿಪ್ಪನ್ನು ತೆಗೆದುಕೊಂಡು ಅದರ ಗುಂಜು ಹಾಗೂ ನಾರನ್ನು ಶುದ್ಧಪಡಿಸಿಕೊಳ್ಳೋಣ, ನಂತರ ಅದನ್ನು ಹೊಡೆದು ಹೋಗಿದ್ಯೋ ಇಲ್ಲಾವೋ ಅಂತ ಪರಿಶೀಲಿಸಿಕೊಳ್ಳೋಣ.

WhatsApp Group Join Now
Telegram Group Join Now

ಮೊದಲಿಗೆ ಚಿಪ್ಪನ್ನು ಸಣ್ಣ ಒಲೆಯ ಮೇಲೆ ಸಣ್ಣ ಉರಿಯಲ್ಲಿ ಇಟ್ಟು ಅದಕ್ಕೆ ಒಂದು ಸಣ್ಣ ಗ್ಲಾಸಿನಲ್ಲಿ ನೀರನ್ನು ಹಾಕೋಣ. ಇನ್ನೊಂದೆಡೆ ಎರಡು ಏಲಕ್ಕಿ ಮತ್ತು ಸ್ವಲ್ಪ ಶುಂಠಿಯನ್ನು ಚಚ್ಚಿ ಕೊಳ್ಳೋಣ. ಕಾಯುತ್ತಿರುವ ನೀರಿಗೆ ಒಂದು ಚಮಚ ಟೀ ಪುಡಿಯನ್ನು ಹಾಕಿ ಅದಕ್ಕೆ ಚಚ್ಚಿಕೊಂಡಿರುವ ಏಲಕ್ಕಿ ಮತ್ತು ಶುಂಠಿಯನ್ನು ಹಾಕೋಣ. ಒಲೆಯನ್ನು ಸಣ್ಣ ಉರಿಯಲ್ಲಿ ಇಟ್ಟುಕೊಂಡು ಅದನ್ನು ಚೆನ್ನಾಗಿ ಕುದಿಸಬೇಕು ಚೆನ್ನಾಗಿ ಕುದಿಸುವುದರಿಂದ ಶುಂಠಿ ಮತ್ತು ಏಲಕ್ಕಿಯು ತನ್ನ ಸ್ವಾದವನ್ನು ಚೆನ್ನಾಗಿ ಬಿಡುತ್ತದೆ. ಇದಕ್ಕೆ ಎರಡು ಗ್ಲಾಸ್ ಹಾಲನ್ನು ಬೆರೆಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸೋಣ, ಕುದಿಸಿದ ನಂತರ ನಾವು ಟೀಯನ್ನು ಒಂದು ಲೋಟಕ್ಕೆ ಸೋಸಿಕೊಳ್ಳಬೇಕು. ಕೊನೆಗೆ ನಮ್ಮ ಚಿಪ್ಪಿನಲ್ಲಿ ಮಾಡಿರುವಂತಹ ಟೀ ತಯಾರಾಗಿದೆ. ದಿನನಿತ್ಯ ಮಾಡುವ ಟೀ ಗಿಂತ ಇದು ಭಿನ್ನವಾಗಿದ್ದು, ರುಚಿಯಲ್ಲಿ ಸ್ವಲ್ಪ ಭಿನ್ನವಾಗಿ ಕುಡಿಯಲು ಬಲು ರುಚಿಯಾಗಿದೆ.



crossorigin="anonymous">