ಒಂದೇ ಜಾಗದಲ್ಲಿ ಎಷ್ಟೊಂದು ಫಿಲಂ ಶೂಟಿಂಗ್ ನೋಡಿ...ಜಂಗ್ಲಿ,ರಾಮಚಾರಿ,ಉಗ್ರಂ ಹೀಗೆ ಹಲವಾರು ಚಿತ್ರಗಳು ತೆಗೆದಿರುವ ಈ ಸ್ಥಳ ಹೇಗಿದೆ ಹೇಗೆ ತಿರುಗಾ ಮುರುಗಾ ಒಂದೇ ಜಾಗ ತೋರಿಸ್ತಾರೆ ನೋಡಿ » Karnataka's Best News Portal

ಒಂದೇ ಜಾಗದಲ್ಲಿ ಎಷ್ಟೊಂದು ಫಿಲಂ ಶೂಟಿಂಗ್ ನೋಡಿ…ಜಂಗ್ಲಿ,ರಾಮಚಾರಿ,ಉಗ್ರಂ ಹೀಗೆ ಹಲವಾರು ಚಿತ್ರಗಳು ತೆಗೆದಿರುವ ಈ ಸ್ಥಳ ಹೇಗಿದೆ ಹೇಗೆ ತಿರುಗಾ ಮುರುಗಾ ಒಂದೇ ಜಾಗ ತೋರಿಸ್ತಾರೆ ನೋಡಿ

ಕನ್ನಡದ ಬಹುತೇಕ ಚಿತ್ರಗಳು ಇಲ್ಲಿಯೇ ಚಿತ್ರೀಕರಣಗೊಂಡಿವೆ
ಸಾಮಾನ್ಯವಾಗಿ ಒಂದು ಸಿನಿಮಾ ಶೂಟಿಂಗ್ ಎಂದರೆ ಸಿನಿಮಾದಲ್ಲಿನ ಫೈಟ್ ಸೀನ್, ಸಾಂಗ್ ಸೂಟಿಂಗ್ ಲೊಕೇಶನ್ ಗಳನ್ನು ಕಡಿಮೆ ಖರ್ಚಿನಲ್ಲಿ ಮಾಡಲು ಸಾಧ್ಯವೇ ಇಲ್ಲ. ಈ ಕಾರಣಕ್ಕಾಗಿ ಒಂದೇ ಸ್ಥಳದಲ್ಲಿ ತಮಗೆ ಬೇಕಾದ ರೀತಿ ಗ್ರಾಫಿಕ್ಸ್ ಡಿಸೈನ್ ಮೂಲಕ ಡೆಕೋರೇಷನ್ ಮಾಡಿ ಸಿನಿಮಾದಲ್ಲಿ ಅದ್ಭುತವಾದ ದೃಶ್ಯಗಳು ಮೂಡಿ ಬರುವಂತೆ ಮಾಡುತ್ತಾರೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಸಿನಿಮಾಗಳ ಶೂಟಿಂಗ್ ನಡೆಯುತ್ತದೆ ಅಲ್ಲದೇ ಗ್ರಾಫಿಕ್ಸ್ ಬ್ಯಾಕ್ ರೌಂಡ್ ಸಹಾಯದಿಂದ ಸೀನ್ ಗಳನ್ನು ಕ್ರಿಯೇಟ್ ಮಾಡುತ್ತಾರೆ.
ಸಾಮಾನ್ಯವಾಗಿ ಬೆಂಗಳೂರಿನ ಬಿನ್ನಿಪೇಟೆಯಲ್ಲಿರುವ ಮಿನೆರ್ವ ಮಿಲ್ಸ್ ನಲ್ಲಿ ಅತೀ ಹೆಚ್ಚಾಗಿ ಸಿನಿಮಾಗಳ ಶೂಟಿಂಗ್ ನಡೆಯುವುದಲ್ಲದೆ ಇಲ್ಲಿ ಪ್ರತಿಯೊಂದು ಸೀನ್ ಕೂಡ ಶೂಟ್ ಮಾಡಲಾಗುತ್ತದೆ.

ಈ ಮಿನೆರ್ವ ಮಿಲ್ ಅನ್ನು ವರ್ಷಗಳ ಹಿಂದೆಯೇ ಸ್ಥಗಿತಗೊಳಿಸಿದ್ದು ಇಂದು ಸಿನಿಮಾ ಶೂಟಿಂಗ್ ಗೆ ಆಗರವಾಗಿದೆ. ಈ ಮಿನೆರ್ವ ಮಿಲ್ಸ್ ಲೊಕೇಶನ್ ಒಂದು ಗೋಡೌನ್ ತರಹ ಅತಿ ದೊಡ್ಡದಾದ ಸ್ಥಳವಾಗಿದ್ದು ಈ ಸ್ಥಳದಲ್ಲಿ ಕಾರಾಗೃಹದ ಚಿತ್ರೀಕರಣ ಫೈಟ್ ಸೀನ್ ನಂತಹ ಶೂಟಿಂಗ್ ನಡೆಯುತ್ತದೆ. ಇದೆ ಸ್ಥಳದಲ್ಲಿ ದುನಿಯಾ ವಿಜಯ್ ನಟನೆಯ ಹಳೆ ಪಾತ್ರೆ ಹಳೆ ಕಬ್ಬಿಣ ಹಾಡಿನ ಚಿತ್ರೀಕರಣ ಮಾಡಿದ್ದು ಕನ್ನಡದಲ್ಲಿನ ಇನ್ನೂ ಅನೇಕ ಚಿತ್ರಗಳು ಇಲ್ಲಿಯೇ ಚಿತ್ರೀಕರಣಗೊಂಡಿವೆ. ಹೀರೋ ಎಂಟ್ರಿ ಸೀನ್, ಆಲ್ಬಮ್ ಸಾಂಗ್ ಶೂಟಿಂಗ್ ಹಾಗೂ ಪ್ರತಿಯೊಂದು ಜೈಲ್ ಸೀನ್ ಗಳೂ ಸಹ ಇಲ್ಲಿಯೇ ನಡೆಯುತ್ತದೆ.

WhatsApp Group Join Now
Telegram Group Join Now

ಜೈಲ್ ಸೀನ್ ಗಳಲ್ಲಿ ಬರುವ ಜೈಲಿನಲ್ಲಿನ ಹಿಂಭಾಗದಲ್ಲಿ ಖೈದಿಗಳು ತೊಟ್ಟಿಗಳಲ್ಲಿ ಸ್ನಾನ ಮಾಡಲು ತೊಟ್ಟಿಗಳನ್ನು ನಿರ್ಮಿಸಿದ್ದು ಜೈಲಿನ ದೊಡ್ಡ ಹೆಬ್ಬಾಗಿಲಿಗೆ ತಮಗೆ ಬೇಕಾದರೆ ಕಾರಾಗೃಹದ ಹೆಸರನ್ನು ಬದಲಿಸಿಕೊಳ್ಳಬಹುದು. ಈ ಮಿನೆರ್ವ ಮಿಲ್ಸ್ ಒಳಗಿನ ಚಿತ್ರಣವನ್ನು ಒಮ್ಮೆ ಒಳಗೆ ಹೋಗಿ ನೋಡಿದರೆ ಮೈ ಜುಮ್ಮೆನಿಸುತ್ತದೆ ಅಷ್ಟೊಂದು ಉದ್ದನೆಯ ಹಾಲ್, ಭಯವಾಗುವ ದೃಶ್ಯ ಸೆರೆ ಹಿಡಿಯಲು ತಕ್ಕಂತೆ ಇರುವ ಈ ಮಿನೆರ್ವ ಮಿಲ್ಸ್ ನಲ್ಲಿ ತಮಗೆ ಬೇಕಾದ ರೀತಿಯಲ್ಲಿ ಸಿನಿಮಾದವರು ಸಿದ್ದಪಡಿಸಿಕೊಂಡು ತಮ್ಮ ಸಿನಿಮಾ ಚಿತ್ರೀಕರಣದ ಸಣ್ಣ ಪುಟ್ಟ ಸೀನ್ ಗಳನ್ನು ಶೂಟ್ ಮಾಡಿಕೊಂಡು ತಮಗೆ ಬೇಕಾದ ರೀತಿಯಲ್ಲಿ ಗ್ರಾಫಿಕ್ಸ್ ಮೂಲಕ ಸಿನಿಮಾದಲ್ಲಿ ತೋರಿಸುತ್ತಾರೆ. ಇದೆ ಸ್ಥಳದಲ್ಲಿ ಯಶ್ ಅವರ ಒಂದು ಚಿತ್ರದ ಫೈಟ್ ಸೀನ್ ಹಾಗೂ ಸುದೀಪ್ ಅವರ ದಿ ವಿಲನ್ ಚಿತ್ರದ ಫೈಟ್ ಸೀನ್ ನಡೆದಿದ್ದು ಬೆಂಗಳೂರಿನ ಅತಿ ದೊಡ್ಡ ಫೇಮಸ್ ಶೂಟಿಂಗ್ ಪ್ಲೇಸ್ ಎನಿಸಿಕೊಂಡಿದೆ.



crossorigin="anonymous">