ಕನ್ಯಾ ರಾಶಿ ಅಕ್ಟೋಬರ್ ತಿಂಗಳ ಭವಿಷ್ಯ ಎಲ್ಲಿಲ್ಲದ ಅದೃಷ್ಟದಿಂದ ಧನಲಾಭಗಳ ಸುನಾಮಿ..ಹೇಗಿರಲಿದೆ ನೋಡಿ ಮುಂದಿನ ಜೀವನ » Karnataka's Best News Portal

ಕನ್ಯಾ ರಾಶಿ ಅಕ್ಟೋಬರ್ ತಿಂಗಳ ಭವಿಷ್ಯ ಎಲ್ಲಿಲ್ಲದ ಅದೃಷ್ಟದಿಂದ ಧನಲಾಭಗಳ ಸುನಾಮಿ..ಹೇಗಿರಲಿದೆ ನೋಡಿ ಮುಂದಿನ ಜೀವನ

ಕನ್ಯಾ ರಾಶಿಯವರ ಅಕ್ಟೋಬರ್ 2022ರ ಮಾಸಿಕ ಭವಿಷ್ಯ.
ಕನ್ಯಾ ರಾಶಿಯವರ ಅಕ್ಟೋಬರ್ 2022ರ ಭವಿಷ್ಯವನ್ನು ಗ್ರಹಗಳ ಸಂಚಾರ ಹಾಗೂ ನಕ್ಷತ್ರದ ಆಧಾರದ ಮೇಲೆ ಏನೇನು ಶುಭ ಅಥವಾ ಅಶುಭ ಫಲಗಳು ಎಂದು ತಿಳಿಯೋಣ. ರಾಶಿಯಲ್ಲಿ ನಾಲ್ಕು ಗ್ರಹಗಳು ಬಹಳ ಪ್ರಾಮುಖ್ಯದಿಂದ ಚಲನಗೊಂಡಿದೆ ಬುಧ, ಶುಕ್ರ, ರವಿ ಮತ್ತು ಮಂಗಳ ಗ್ರಹದಿಂದ ಆಗುವ ಬದಲಾವಣೆಯ ಬಗ್ಗೆ ನೋಡೋಣ. ಶುಕ್ರ ನಿಮ್ಮ ರಾಶಿಗೆ 2018 ಅಕ್ಟೋಬರ್ 18 ನೇ ತಾರೀಖಿನವರೆಗೂ ನಿಮ್ಮ ರಾಶಿಯಲ್ಲಿ ಮೊದಲನೆಯ ಸ್ಥಾನದಲ್ಲಿ ಇರುತ್ತಾನೆ. ಇನ್ನು ಕನ್ಯಾ ರಾಶಿಯವರ ನಕ್ಷತ್ರಗಳು ಯಾವುವು ಎಂದರೆ ಚಿತ್ತ 1, 2, ಹಸ್ತ 1, 2, 3, 4, ಉತ್ತರ ಪಾಲ್ಗುಣಿ 2, 3, 4. ನಿಮ್ಮ ರಾಶಿಗೆ ಶುಕ್ರನು ಅದೃಷ್ಟ ಕೊಡುವಂತಹ ಭಾಗ್ಯಾಧಿಪತಿ ಯಾಗಿ ಯೋಗವನ್ನು ತಂದುಕೊಡುತ್ತಾನೆ. ಶುಕ್ರ ಕೊಡುವ ಶುಭಫಲಗಳು ಆಸೆ ಹಾಗೂ ಆಕಾಂಕ್ಷೆಗಳನ್ನು ಈಡೇರಿಸುತ್ತದೆ. ಶುಕ್ರನು ಯಾವ ರಾಶಿಯಲ್ಲಿ ಚಲಿಸುತ್ತಾನೋ ಅವರು ಬಹಳ ಸುವಾಸನೆಯಿಂದ ಕೂಡಿರುತ್ತಾರೆ ಜೊತೆಗೆ ಆಕರ್ಷಣೆ ಬರಿತ ಬಟ್ಟೆ, ಸೆಂಟುಗಳನ್ನು ಹೆಚ್ಚಾಗಿ ಬಳಸುತ್ತಾರೆ.

ಶುಕ್ರನು ಅಕ್ಟೋಬರ್ 18 ನೇ ತಾರೀಕು ನಂತರ ತನ್ನ ಸ್ವಕ್ಷೇತ್ರವಾದ ತುಲಾ ರಾಶಿಗೆ ಚಲಿಸುತ್ತಾನೆ ಆದ್ದರಿಂದ ಕನ್ಯಾ ರಾಶಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಇರುತ್ತಾನೆ ಇದರಿಂದ ಕನ್ಯಾ ರಾಶಿಯವರಿಗೆ ಭಾಗ್ಯಾಧಿಪತಿಯಾಗಿ ಧನವು ಅದೃಷ್ಟದಿಂದ, ತಂದೆಯಿಂದ, ನೀವೇನಾದರೂ ದೇವಸ್ಥಾನಗಳಲ್ಲಿ ಜ್ಯೋತಿಷ್ಯರಾಗಿದ್ದರೆ, ಪುರೋಹಿತರಾಗಿದ್ದರೆ, ಟೀಚರ್, ಲೆಕ್ಚರರ್ ಆಗಿದ್ದರೆ ಹೆಚ್ಚು ಧನ ಲಾಭವಾಗುತ್ತದೆ. ಆದಾಯ, ದಾಂಪತ್ಯ ಸುಖ, ಕೌಟುಂಬಿಕ ಸುಖ, ರತ್ನ ಹಾಗೂ ಆಭರಣಗಳು, ಒಡವೆ, ವಸ್ತ್ರ, ಧನ ಆದಾಯವು ಹರಿದು ಬರುತ್ತದೆ. ಆರೋಗ್ಯ ಕೂಡ ತುಂಬಾ ಚೆನ್ನಾಗಿ ಇರುತ್ತದೆ ಹೊಸ ಹೊಸ ವಸ್ತ್ರಗಳನ್ನು ಹಾಕಿಕೊಳ್ಳುತ್ತಾರೆ ಜೊತೆಗೆ ಮಾತನಾಡುವ ಸಾಮರ್ಥ್ಯವು ಕೂಡ ನಮ್ಮಲ್ಲಿ ಹೆಚ್ಚಾಗುತ್ತದೆ. ನಿಮಗೆ ದೈಹಿಕ ಹಾಗೂ ಪ್ರಾಪಂಚಿಕ ಸುಖವು ಗಳಿಸುತ್ತದೆ ರಾಯಲ್ ಆಗಿ ಜೀವನ ಮಾಡುತ್ತೀರಾ.

WhatsApp Group Join Now
Telegram Group Join Now
See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಕುಟುಂಬ ಕೂಡ ಸುಖಮಯದಿಂದ ಕೂಡಿರುತ್ತದೆ ಹಾಗಾಗಿ ದಾಂಪತ್ಯ ಜೀವನವು ಉತ್ತಮವಾಗಿರುತ್ತದೆ. ಇಷ್ಟೆಲ್ಲ ಅದೃಷ್ಟವು ನಿಮಗೆ ನಿಮ್ಮ ರಾಶಿಯ ದ್ವಿತೀಯಾಧಿಪತಿಯಾದ ಶುಕ್ರನು ದ್ವಿತೀಯ ಸ್ಥಾನದಲ್ಲಿ ಇದ್ದಾಗ ಮಾತ್ರ ಸಾಧ್ಯ. ಬುದನು ನಿಮ್ಮ ರಾಶಿಯಲ್ಲಿ ಇರುವ ಕಾರಣ ನೀವು ಹೆಚ್ಚು ಬಲಿಷ್ಠರಾಗಿರುತ್ತೀರಾ. ಬುಧನು ಕನ್ಯಾ ರಾಶಿಯ ರಾಶ್ಯಾಧಿಪತಿ ಆದಕಾರಣ ಬುದ್ಧಿಯ ಬಲವನ್ನು ಹೆಚ್ಚಿಕೊಡುತ್ತಾನೆ. ನೀವು ನಿಮ್ಮ ಆರೋಗ್ಯದ ಹಾಗೂ ಶರೀರ ದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತೀರಾ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಯಶಸ್ವಿ ಕಾಣುತ್ತೀರ. ವೃತ್ತಿ ಜೀವನದಲ್ಲಿ ಹೆಚ್ಚು ಲಾಭ ಕಾಣುತ್ತೀರ. ಧನ ಮತ್ತು ಆಧ್ಯಾ ತ್ಮಿಕ ವಿಚಾರದಲ್ಲಿ ಸರಿಯಾಗಿ ಯೋಚನೆ ಮಾಡುತ್ತೀರಾ ಹಾಗೂ ವ್ಯಾಪಾರದಲ್ಲಿ ವೃದ್ಧಿಯಾಗುತ್ತದೆ. ಇನ್ನು ಮಂಗಳವು 10ನೆಯ ಸ್ಥಾನದಲ್ಲಿರುವ ಕಾರಣ ಅದು ಶುಭಫಲವಲ್ಲ. ಹಾಗಾಗಿ ನೀವು’ ಓಂ ಮಂಗಳಾಯ ನಮಃ’ ಅಥವಾ ‘ಓಂ ವೀರಭದ್ರಾಯ ನಮಃ’ ಎಂದು ಬೆಳಗ್ಗೆ ಮತ್ತು ಸಂಜೆ 108 ಬಾರಿ ಜಪಿಸಬೇಕು.

[irp]


crossorigin="anonymous">