ಮಕರ ರಾಶಿಯ ಅಕ್ಟೋಬರ್ 2022 ರ ಮಾಸ ಭವಿಷ್ಯದ ಎಚ್ಚರಿಕೆಗಳು !!ಮೊದಲನೆಯದಾಗಿ ಮಕರ ರಾಶಿಯ ಗ್ರಹ ಸ್ಥಿತಿಗಳನ್ನು ನೋಡುವುದಾದರೆ ಅಕ್ಟೋಬರ್ 15ನೇ ತಾರೀಖಿನ ತನಕ ಐದನೇ ಮನೆಯಲ್ಲಿ ಕುಜ ಗ್ರಹ ಇರುತ್ತಾನೆ 15ನೇ ತಾರೀಖಿನ ನಂತರ ಆರನೇ ಮನೆಗೆ ಕುಜ ಹೋಗುತ್ತಾನೆ ಅಂದರೆ ವೃಷಭದಲ್ಲಿ ಇರುತ್ತಾನೆ ನಂತರ ಮಿಥುನ ರಾಶಿಗೆ ಹೋಗುತ್ತಾನೆ ಎಂದರ್ಥ ಅಕ್ಟೋಬರ್ 17 ನೇ ತಾರೀಖಿನವರೆಗೆ 9ನೇ ಮನೆಯಲ್ಲಿ ಇದ್ದಂತಹ ರವಿ ನಂತರ 10ನೇ ಮನೆಗೆ ಅಂದರೆ ನೀಚ ಸ್ಥಿತಿಗೆ ರವಿ ಬರುತ್ತಾನೆ ಮತ್ತು ಅಕ್ಟೋಬರ್ 18 ನೇ ತಾರೀಖಿನ ತನಕ ಅಂದರೆ 17ನೇ ತಾರೀಖಿನವರೆಗೂ ತುಲಾ ರಾಶಿಯಲ್ಲಿ ಇದ್ದಂತಹ ಶುಕ್ರ 18ನೇ ತಾರೀಕು ಶುಕ್ರ ತನ್ನ ಕರ್ಮಸ್ಥಾನಕ್ಕೆ ಬರುತ್ತಾನೆ ಅಂದರೆ ಸ್ವಂತ ಮನೆಗೆ ಬರುತ್ತಾನೆ ಅಕ್ಟೋಬರ್ 26 ನೇ ತಾರೀಖಿನ ತನಕ ಕನ್ಯಾ ರಾಶಿಯಲ್ಲಿ ಇದ್ದಂತಹ ಬುಧ 26 ನೇ ತಾರೀಖಿನ ಮೇಲೆ ತುಲಾ ರಾಶಿಗೆ ತನ್ನ ಕರ್ಮಸ್ಥಾನಕ್ಕೆ ಬರುತ್ತಾನೆ.

ನಿಮ್ಮ ಕರ್ಮಸ್ಥಾನದಲ್ಲಿ ರವಿ ಶುಕ್ರ ಬುಧ ಕೇತು ಈ ನಾಲ್ಕು ಗ್ರಹಗಳು ನಿಮ್ಮ ಹತ್ತನೇ ಮನೆಯಲ್ಲಿ ಇರುತ್ತದೆ ಹಾಗಾಗಿ ಇದು ವಿಶೇಷವಾಗಿ ಇರುವಂತಹ ಗ್ರಹ ಸ್ಥಿತಿಯಾಗಿದೆ ಹಾಗಾದರೆ ಮಕರ ರಾಶಿಯಲ್ಲಿ ಈ ಒಂದು ತಿಂಗಳಿನಲ್ಲಿ ಅವರು ಯಾವ ರೀತಿಯಾದಂತಹ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಬೇಕು ಎಂದು ನೋಡುವುದಾದರೆ ಅಕ್ಟೋಬರ್ 1 ನೇ ತಾರೀಖಿನಿಂದ 14ನೇ ತಾರೀಖಿನವರೆಗೆ ಐದನೇ ಮನೆಯಲ್ಲಿ ಕುಜ ಗ್ರಹ ನಿದ್ದು ಇದರಿಂದ ಮಕರ ರಾಶಿಯವರಿಗೆ ಲಾಭಾಧಿಪತಿ ಕುಜ ಎಂದು ಹೇಳುತ್ತಾರೆ ಆದರೆ ಇದರಲ್ಲಿ ಒಂದು ರೀತಿಯ ದೋಷ ಕಂಡುಬರುತ್ತದೆ .ಹಾಗಾದರೆ ಏನು ದೋಷ ಎಂದರೆ ನೀವು ಯಾವುದೇ ಕೆಲಸ ಕಾರ್ಯಗಳಲ್ಲಿ ಕೈ ಹಾಕಿದರು ಅದರಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆ ಎದುರಾಗುತ್ತದೆ ಹೋದಲ್ಲೆಲ್ಲ ಹೆಚ್ಚಿನ ಜಗಳಗಳು ಸಂಭವಿಸುವಂತಹ ಸಮಸ್ಯೆ ಎದುರಾಗುತ್ತಿರುತ್ತದೆ.

ನಂತರದ ದಿನಗಳಲ್ಲಿ ಅಂದರೆ 15ನೇ ತಾರೀಖಿನ ನಂತರ ನೀವು ಅಂದುಕೊಂಡಂತೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳು ತ್ತೀರಾ ಇದರ ಜೊತೆಗೆ ಮಕ್ಕಳೊಂದಿಗೆ ಕಲಹಗಳು ಉಂಟಾಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಅಂದರೆ ನಿಮ್ಮ ಮತ್ತು ನಿಮ್ಮ ಮಕ್ಕಳೊಂದಿಗೆ ಹೆಚ್ಚಿನ ಭಿನ್ನಾಭಿಪ್ರಾಯಗಳು ಉಂಟಾಗಿ ಮನಸ್ಸ್ತಾಪಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.ನಂತರ ಅಕ್ಟೋಬರ್ 17 ನೇ ತಾರೀಖಿನ ತನಕ ರವಿ ಗ್ರಹ ಕನ್ಯಾ ರಾಶಿಯಲ್ಲಿ ಇರುತ್ತಾನೆ ಅಂದರೆ ಒಂಬತ್ತನೇ ಮನೆಯಲ್ಲಿ ಇರುತ್ತಾನೆ ಇದರಿಂದ ನಿಮ್ಮ ಮತ್ತು ನಿಮ್ಮ ತಂದೆಯವರ ನಡುವೆ ಹೆಚ್ಚಿನ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಅಥವಾ ನಿಮ್ಮ ತಂದೆಯ ಆರೋಗ್ಯದಲ್ಲಿ ಹೆಚ್ಚು ಕಡಿಮೆ ಆಗುವ ಸಾಧ್ಯತೆಗಳು ಕೂಡ ಕಂಡು ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

Leave a Reply

Your email address will not be published. Required fields are marked *