ಸಿಂಹ ರಾಶಿ 2022 ಅಕ್ಟೋಬರ್ ತಿಂಗಳ ಭವಿಷ್ಯ ||
ಸಿಂಹ ರಾಶಿಯ ಭವಿಷ್ಯವನ್ನು ನೋಡುವುದಕ್ಕೂ ಮೊದಲು ಈ ತಿಂಗಳ ವಿಶೇಷತೆಗಳನ್ನು ನೋಡುವುದಾದರೆ ಅಕ್ಟೋಬರ್ ತಿಂಗಳು 26 ನೇ ತಾರೀಖು ಆಶ್ವಯುಜ ಪ್ರಾರಂಭವಾಗುತ್ತದೆ ಹಾಗೂ 26ನೇ ತಾರೀಖು ನವರಾತ್ರಿ ಪ್ರಾರಂಭವಾಗುತ್ತದೆ ಮೂರನೇ ತಾರೀಖು ದುರ್ಗಾಷ್ಟಮಿ ಹಾಗೂ ನಾಲ್ಕನೇ ತಾರೀಖು ಮಹಾನವಮಿ ಹಾಗೂ 5 ನೇ ತಾರೀಖು ವಿಜಯದಶಮಿ ಹಾಗೂ ಹಾಸನಾಂಬೆಯ ದರ್ಶನ ಎನ್ನುವುದು 13ನೇ ತಾರೀಖಿನಿಂದ ಪ್ರಾರಂಭವಾಗಿ 27 ನೇ ತಾರೀಖಿನವರೆಗೂ ಹಾಸನಾಂಬೆಯ ದರ್ಶನ ಇರುವಂತದ್ದು ಇನ್ನು 25ನೇ ತಾರೀಖು ಅಕ್ಟೋಬರ್ ದೀಪಾವಳಿ ಅಮಾವಾಸ್ಯೆ ಇರುತ್ತದೆ ಇನ್ನು ಅಕ್ಟೋಬರ್ ಒಂಬತ್ತನೇ ತಾರೀಖು ಪೌರ್ಣಮಿ ಇರುತ್ತದೆ ಹಾಗೂ ಮುಖ್ಯವಾಗಿ ಇರುವಂತಹ ವಿಷಯ ಏನು ಎಂದರೆ 25 /10/2022 ಮಂಗಳವಾರ ಆಶ್ವಯುಜ ಬಹುಳ ಅಮಾವಾಸ್ಯೆ ಕೇತು ಗ್ರಸ್ತ ಸೂರ್ಯಗ್ರಹಣ ಇರುವಂತದ್ದು.

ಹೀಗೆ ಈ ತಿಂಗಳ ವಿಶೇಷತೆಗಳನ್ನು ತಿಳಿದುಕೊಂಡೆವು ಹಾಗಾದರೆ ಗ್ರಹಗಳ ಬದಲಾವಣೆಯನ್ನು ನೋಡುವುದಾದರೆ 15ನೇ ತಾರೀಖು ಕುಜ ಮಿಥುನ ರಾಶಿಗೆ ಪ್ರವೇಶ ಆಗುತ್ತಾನೆ ಈಗಾಗಲೇ ಶತ್ರು ಮನೆಯಲ್ಲಿಯೇ ಇದ್ದು ನಂತರದ ದಿನಗಳಲ್ಲಿಯೂ ಕೂಡ ಶತ್ರುವಿನ ಮನೆಗೆ ಹೋಗುತ್ತಾನೆ ಮತ್ತು ಸೂರ್ಯ ನು ತುಲಾ ರಾಶಿಗೆ ಪ್ರವೇಶ ಆಗುತ್ತಾನೆ ಹಾಗೂ 17ನೇ ತಾರೀಖು ತುಲಾ ರಾಶಿಗೆ ಶುಕ್ರ ತನ್ನ ಸ್ವಂತ ಮನೆಗೆ ಹೋಗುತ್ತಾನೆ ಮತ್ತು 26 ನೇ ತಾರೀಖು ಬುಧನು ತುಲಾ ರಾಶಿಗೆ ಹೋಗುತ್ತಾನೆ ಇದು ಈ ತಿಂಗಳ ಗ್ರಹಗಳ ಬದಲಾವಣೆಯಾದರೆ ಇನ್ನು ಅಕ್ಟೋಬರ್ ತಿಂಗಳ ಸಿಂಹ ರಾಶಿಯ ಭವಿಷ್ಯವನ್ನು ನೋಡುವುದಾದರೆ ರಾಶಿಯಿಂದ ದ್ವಿತೀಯಾಧಿಪತಿ ಮತ್ತು ಲಾಭಾಧಿಪತಿ ಅಂದರೆ ಬುಧ 26 ನೇ ತಾರೀಖಿನವರೆಗೂ ದುಸ್ಥಾನದಲ್ಲಿ ಉಚ್ಚ ಸ್ಥಾನದಲ್ಲಿ ಸುಕ್ಷೇತ್ರದಲ್ಲಿಯೇ ಬಲಿಷ್ಠನಾಗಿ ಇರುತ್ತಾನೆ.

ಹಾಗಾಗಿ ಸಿಂಹ ರಾಶಿಯವರಿಗೆ ದುಡ್ಡಿನ ಬಲ ಹಾಗೂ ಕುಟುಂಬಸ್ಥರ ಬಲ ಹೆಚ್ಚಾಗುತ್ತದೆ ದುಡ್ಡಿನ ಒಳಹರಿವು ಹೆಚ್ಚಾಗುತ್ತದೆ ಎಂದು ಹೇಳಬಹುದಾಗಿದೆ ಇದರ ಜೊತೆಗೆ ಓದುತ್ತಿರುವಂತಹ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿಯೂ ಕೂಡ ಯಾವುದೇ ರೀತಿಯ ತೊಂದರೆಗಳು ಎದುರಾಗುವುದಿಲ್ಲ ನೀವು ಎಲ್ಲೇ ಹೋಗಿ ಯಾವುದೇ ಮಾತುಗಳನ್ನು ಮಾತನಾಡಿದರೆ ನಿಮ್ಮ ಮಾತಿಗೆ ಎಲ್ಲರೂ ಬೆಲೆಯನ್ನು ಕೊಡುತ್ತಾರೆ ನಿಮ್ಮ ಮಾತಿಗೆ ಒಳ್ಳೆಯ ನಂಬಿಕೆಯನ್ನು ಇಡುತ್ತಾರೆ ಎಲ್ಲರೂ ನಿಮ್ಮ ಮಾತನ್ನು ಕೇಳುತ್ತಾರೆ ಇದರಿಂದ ನಿಮ್ಮ ಲಾಭಾoಶವೂ ಕೂಡ ಹೆಚ್ಚಾಗುತ್ತದೆ ಇನ್ನು ರಾಶಿಯಿಂದ 3 ಮತ್ತು 10ನೇ ಮನೆಯ ಅಧಿಪತಿ ಗಳಾಗಿರುವಂತಹ ಶುಕ್ರ 18ನೇ ತಾರೀಖಿನವರೆಗೂ ಚೆನ್ನಾಗಿಲ್ಲ ಆದ್ದರಿಂದ ನೀವು ಯಾವುದೇ ವಸ್ತುಗಳನ್ನಾ ಗಲಿ ವಾಹನಗಳ ಖರೀದಿಯನ್ನಾಗಿ ಮಾಡಬೇಡಿ ನಂತರದ ದಿನಗಳಲ್ಲಿ ನೀವು ತೆಗೆದುಕೊಂಡರೆ ಉತ್ತಮ ಹಾಗೂ ಮನೆಯಲ್ಲಿ ಹೆಚ್ಚಿನ ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ ಆದ್ದರಿಂದ ಅವೆಲ್ಲವನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *