ಮುಧೋಳ ನಾಯಿಯ ವಿಚಿತ್ರ ಶಕ್ತಿ ಗೊತ್ತಾ ? ಶಿವಾಜಿ ಈ ನಾಯಿಗೆ ಫಿದಾ ಆಗಿದ್ರು...! ನರೇಂದ್ರ ಮೋದಿಯವರ ಸೆಕ್ಯೂರಿಟಿ ಟೀಂ ಗೆ ಈ ನಾಯಿ ಇತ್ತೀಚೆಗೆ ಸೇರ್ಪಡೆಯಾಗಲು ಕಾರಣ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮುಧೋಳ ನಾಯಿಯ ಈ ವಿಚಿತ್ರ ಶಕ್ತಿ ಗೊತ್ತಾ ? ಶಿವಾಜಿ ಈ ನಾಯಿಗೆ ಫಿದಾ ಆಗಿದ್ದರು !!ನಾಯಿ ಮನುಷ್ಯನಿಗೆ ಅತ್ಯಂತ ಪ್ರಿಯವಾದ ಪ್ರಾಣಿ ನಾಯಿ, ನಿಯತ್ತಿಗೆ ಮತ್ತೊಂದು ಹೆಸರು ಹೌದು ಇಂತಹ ನಾಯಿಗಳಲ್ಲಿ ಸಾಕಷ್ಟು ತಳಿಗಳು ಇವೆ ಕರ್ನಾಟಕದಲ್ಲಿ ತುಂಬಾ ಜನ ವಿದೇಶಿ ತಳಿಯ ನಾಯಿಗಳನ್ನು ಸಾಕುತ್ತಿದ್ದಾರೆ ಆದರೆ ನಮ್ಮ ಕರ್ನಾಟಕದ ಮುಧೋಳ ತಳಿ ನಾಯಿ ಇದೀಗ ತನ್ನದೇ ಆದ ಸಂಚಲನವನ್ನು ಸೃಷ್ಟಿಸಿದೆ ಮುಧೋಳದ ನಾಯಿಗಳು ಧೈರ್ಯ ನಿಷ್ಠೆ ಚುರುಕು ಶಕ್ತಿಗಳಲ್ಲಿ ಬೇರೆ ತಳಿಯ ನಾಯಿಗಳಿಗಿಂತ ಶ್ರೇಷ್ಠ ಅನ್ನುವುದು ಮತ್ತೊಮ್ಮೆಸಾಬೀತಾಗಿದೆ ಈಗಾಗಲೇ ಭಾರತೀಯ ಸೇನೆ ಸೇರಿ ಸೈ ಎನಿಸಿಕೊಂಡ ಮುಧೋಳ ನಾಯಿಗಳು ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಪಡೆಯಲ್ಲಿ ಸೇರುತ್ತಿದೆ ಪ್ರಧಾನಿ ಮೋದಿ ಅವರಿಗೆ ಭದ್ರತೆ ನೀಡುವ ಎಸ್ ಪಿ ಜಿ ತಂಡ ಮುಧೋಳ ನಾಯಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಹಾಗಾದರೆ ನಮ್ಮ ಮುಧೋಳ ನಾಯಿ ಯಾಕೆ ಇಷ್ಟೊಂದು ಬಲಿಷ್ಠವಾಗಿದೆ ಎಸ್ ಪಿ ಜಿ ತಂಡ ದೇಶದ ಎಲ್ಲಾ ತಳಿಯ ನಾಯಿಗಳನ್ನು ಬಿಟ್ಟು ಮುಧೋಳ ನಾಯಿಗಳನ್ನೇ ನರೇಂದ್ರ ಮೋದಿ ಅವರ ಭದ್ರತೆಗಾಗಿ ಆಯ್ಕೆ ಮಾಡಿದ್ದು ಯಾಕೆ ಹಾಗಾದರೆ ಮುಧೋಳ ನಾಯಿಗಳಲ್ಲಿ ಅಂತಹ ಶಕ್ತಿ ಏನಿದೆ ಹಾಗೂ ಇವುಗಳು ಎಲ್ಲಾ ನಾಯಿಗಳಿಗಿಂತ ಹೇಗೆ ಶ್ರೇಷ್ಠ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

ಮನುಷ್ಯರಿಗೆ 100 ಮೀಟರ್ ದೂರದಲ್ಲಿ ಇರುವಂತಹ ವಸ್ತುಗಳು ಸರಿಯಾಗಿ ಕಾಣಿಸುವುದಿಲ್ಲ ಆದರೆ ಮುಧೋಳ ನಾಯಿಗೆ ಎರಡು ಕಿಲೋಮೀಟರ್ ದೂರದ ವಸ್ತುಗಳು ಸ್ಪಷ್ಟವಾಗಿ ಕಾಣಿಸುತ್ತದೆ ಮನುಷ್ಯರಿಗೆ ನಮ್ಮ ಎದುರುಗಡೆ ಇರುವಂತಹ ವಸ್ತುಗಳ ಮಾತ್ರ ಕಾಣಿಸುತ್ತವೆ ಆದರೆ ಮುಧೋಳ ನಾಯಿಗೆ ಅದರ ಹಿಂದಿನ ವಸ್ತುಗಳು ಕೂಡ ಕಾಣಿಸುತ್ತವೆ. ಎಷ್ಟೋ ಜನರಿಗೆ ತಮ್ಮ ಮನೆಯಲ್ಲಿ ಮಾಡುವಂತಹ ಅಡುಗೆಗಳ ವಾಸನೆಯೂ ಕೂಡ ಗೊತ್ತಾಗುವುದಿಲ್ಲ ಆದರೆ ಮುಧೋಳ ನಾಯಿ 3 ಕಿ.ಮೀ ದೂರದ ವಾಸನೆಯನ್ನು ಕಂಡು ಹಿಡಿಯುತ್ತದೆ ಇಂತಹ ಅಪರೂಪದ ಶಕ್ತಿಯನ್ನು ಹೊಂದಿರುವ ಮುಧೋಳ ನಾಯಿ ಕರ್ನಾಟಕದಲ್ಲಿ ಸೃಷ್ಟಿಯಾಗಿದ್ದೇ ರೋಚಕ.

ಮುಧೋಳ ನಾಯಿಗಳ ಹಿಂದೆ ದೊಡ್ಡ ಇತಿಹಾಸವೇ ಇದೆ ಕ್ರಿಸ್ತಪೂರ್ವ 500 ರ ಬಳಿಕ ವಿದೇಶಿಗರು ಭಾರತಕ್ಕೆ ಬರುತ್ತಿದ್ದರು ಹೀಗೆ ಭಾರತಕ್ಕೆ ಬಂದಂತಹ ವಿದೇಶಿಗರು ತಮ್ಮೊಟ್ಟಿಗೆ ಹಲವಾರು ರೀತಿಯಾದಂತಹ ನಾಯಿಗಳನ್ನು ತೆಗೆದುಕೊಂಡು ಬರುತ್ತಿದ್ದರು ಇವರು ತಮ್ಮ ಆಸ್ತಿಪಾಸ್ತಿಗಳನ್ನು ರಕ್ಷಿಸಲು ಮತ್ತು ಶತ್ರುಗಳಿಂದ ರಕ್ಷಿಸಿಕೊಳ್ಳಲು ನಾಯಿಗಳನ್ನು ಸಾಕುತ್ತಿದ್ದರು ಹೀಗೆ ವಿದೇಶಿಗರು ತರುತ್ತಿದ್ದ ನಾಯಿಗಳಿಗೂ ಭಾರತದಲ್ಲಿ ಇದ್ದ ಸ್ಥಳೀಯ ನಾಯಿಗಳಿಗೂ ಸಂಪರ್ಕ ಬೆಳೆಯಿತು ಎತ್ತರ ಮತ್ತು ಬಲಿಷ್ಠವಾದ ಗ್ರೇಹೌಂಡ್ ನಾಯಿಗಳಿಗೂ ಮತ್ತು ಸ್ಥಳೀಯ ನಾಯಿಗಳಿಗೂ ಸಂಪರ್ಕವಾಗಿ ಒಂದು ಹೊಸ ತಳಿ ಸೃಷ್ಟಿಯಾಯಿತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *