ನಿದ್ದೆ ಬರಲು ಹೀಗೆ ಮಾಡಿ ಸಾಕು ||ಇವತ್ತಿನ ವಿಷಯ ನಿದ್ದೆ ಸಂಸ್ಕೃತದಲ್ಲಿ ನಿದ್ದೆಯನ್ನು ಸ್ವಪ್ನ ಅಂದರೆ ಸ್ವಯಂ ಅಪ್ನ ಎಂಬ ಹೆಸರಿನಿಂದ ಕರೆಯುತ್ತಾರೆ ಭೂಮಿಯ ಮೇಲೆ ಮನುಷ್ಯನಿಗೆ ಅವನದ್ದು ಏನಾದರು ಇದೆ ಎಂದರೆ ಅದು ಸ್ವಪ್ನ ಇದನ್ನು ಯಾರು ಕೂಡ ಕದಿಯಲು ಆಗುವುದಿಲ್ಲ ಯಾರೂ ಕೂಡ ಇದನ್ನು ನಿಮ್ಮ ಬದಲಾಗಿ ಅವರು ಮಾಡುತ್ತೇವೆ ಎನ್ನುವುದಿಲ್ಲ ಇಲ್ಲಿ ನಾವು ನಿದ್ದೆಯ ಬಗ್ಗೆ ಕೆಲವೊಂದು ವಿಷಯವನ್ನು ಗಮನದಲ್ಲಿಟ್ಟು ಕೊಳ್ಳಬೇಕು ನಿದ್ದೆಯನ್ನು ಯಾರು ಕೂಡ ಕಸಿದು ಕೊಳ್ಳಲು ಆಗುವುದಿಲ್ಲ ಹಾಗೆ ಏನಾದರೂ ನಿಮ್ಮ ನಿದ್ದೆಯನ್ನು ಯಾರಾದರೂ ಕಸಿದುಕೊಂಡಿದ್ದಾರೆ ಎಂದರೆ ನಿಮ್ಮ ಹತ್ತಿರ ನಿಮ್ಮ ಜೀವನದಲ್ಲಿ ಯಾವುದೂ ಕೂಡ ನಿಮ್ಮ ಬಳಿ ಇಲ್ಲ ಎಂದೇ ಅರ್ಥ ಅಂದರೆ ನೀವು ಖುಷಿಯಾಗಿದ್ದಾಗ ಮತ್ತು ನೀವು ದುಃಖದಲ್ಲಿದ್ದಾಗ ನಿಮಗೆ ಮುಖ್ಯವಾಗಿ ಬರುವುದು ನಿಮ್ಮ ಜೀವನದಲ್ಲಿ ನೀವು ಸುಖವಾಗಿ ನೆಮ್ಮದಿಯಿಂದ ನಿದ್ರಿಸುತ್ತಾ ಇದ್ದೀರಾ ಎಂಬ ಮಾತು ಮುಖ್ಯವಾಗಿ ಕಂಡು ಬರುತ್ತದೆ.

ಅದರಂತೆ ನಿಮ್ಮ ನಿದ್ದೆಯನ್ನು ಯಾರಾದರೂ ಕಸಿದು ಕೊಂಡಿದ್ದರೆ ಅಂದರೆ ನೀವು ಸದಾ ಕಾಲ ಯಾರ ಯೋಚನೆದಲ್ಲಿ ನಿಮ್ಮ ನಿದ್ದೆಯನ್ನೇ ಹಾಳು ಮಾಡಿ ಕೊಳ್ಳುತ್ತಿದ್ದೀರಾ ಎಂದರೆ ನಿಮ್ಮ ನಿದ್ದೆಯನ್ನು ಯಾರೋ ಒಬ್ಬರು ಕಿತ್ತುಕೊಂಡಿದ್ದಾರೆ ಎಂದರ್ಥ ಅಂದರೆ ನೀವು ಅವರ ಯೋಚನೆಯಲ್ಲಿಯೇ ಅವರ ಬಗ್ಗೆ ಚಿಂತಿಸುತ್ತಿರುತ್ತೀರಾ ಆದ್ದರಿಂದ ಯಾವುದೇ ಕಾರಣಕ್ಕೂ ನೀವು ಯಾರನ್ನು ಕೂಡ ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು ಅಂದರೆ ಅವರು ನನಗೆ ಮೋಸ ಮಾಡಿದರು ಅವರು ನನ್ನ ಕಷ್ಟಕ್ಕೆ ಕಾರಣರು ಎಂದು ದೂಷಿಸುತ್ತಿರಬಾರದು ಬದಲಾಗಿ ಅದಕ್ಕೆ ಪರಿಹಾರ ವನ್ನು ಹುಡುಕಿಕೊಳ್ಳುವುದು ಮುಖ್ಯ ಇದರಿಂದ ನಿಮಗೆ ನಿಮ್ಮ ಆರೋಗ್ಯವೇ ಹಾಳಾಗುತ್ತದೆ ಆದ್ದರಿಂದ ಯಾರೂ ಕೂಡ ಎಷ್ಟೇ ದ್ವೇಷ ಅಸೂಯೆ ಇದ್ದರೂ ಕೂಡ ಮೊದಲು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳ ಬೇಕು ನಂತರ ಎಲ್ಲಾ ಸಮಸ್ಯೆಗೂ ಕೂಡ ಉತ್ತರ ನಿಮಗೆ ಸಿಗುತ್ತದೆ.

ಅದೇ ರೀತಿ ಚಿಂತೆ ಇಲ್ಲದವನಿಗೆ ಸಂತಿಯಲ್ಲೂ ನಿದ್ದೆ ಬಂದಂತೆ ಸರ್ವಜ್ಞ ಎಂಬ ಮಾತನ್ನು ಎಲ್ಲರೂ ಕೇಳಿಯೇ ಇರುತ್ತೀರ ಹಾಗೆ ಯಾವ ಮನುಷ್ಯ ನೆಮ್ಮದಿಯಿಂದ ಜೀವಿಸುತ್ತಿರುತ್ತಾನೋ ಅವನೇ ಶ್ರೀಮಂತ ಅವನೇ ಎಲ್ಲಾ ಸುಖವನ್ನು ಅನುಭವಿಸು ತ್ತಿರುವವನು ಎಂಬ ಅರ್ಥವನ್ನು ಇದು ಕೊಡುತ್ತದೆ ಹಾಗೆ ಸರ್ವಜ್ಞನ ವಚನದಲ್ಲಿ ಮನೆ ಮದ್ದು ಕೂಡ ಇದೇ ಔಷಧಿಯು ಇದೇ ಪರಿಹಾರವೂ ಇದೇ ಹಾಗೂ ಚಿಕಿತ್ಸೆಯೂ ಕೂಡ ಇದೇ ಆಗಿದೆ ಸರ್ವಜ್ಞನ ಪ್ರತಿಷ್ಠೆಯಿಂದ ಆದವನಲ್ಲ ಎಲ್ಲರ ಒಂದೊಂದು ಮಾತುಗಳಲ್ಲಿಯೂ ಕೂಡ ಸೇರಿ ಆದವನೇ ಸರ್ವಜ್ಞ ಅಂದರೆ ಒಂದೊಂದು ಮಾತುಗಳನ್ನು ಎಲ್ಲರಿಂದ ತಿಳಿದವನೇ ಸರ್ವಜ್ಞ ಇವನು ತನ್ನ ಸ್ವಂತ ಪ್ರತಿಷ್ಠೆ ಯಿಂದ ಆದವನಲ್ಲ ಎಂದು ಸರ್ವಜ್ಞರು ತಮ್ಮಲ್ಲಿ ತಾವೇ ಹೇಳಿಕೊಳ್ಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *