ಕೇವಲ ಒಂದು ಬೆಂಕಿ ಕಡ್ಡಿ ಸಾಕು ಇಡ್ಲಿ ಹಿಟ್ಟು ಉಬ್ಬಿ ಬರುವುದಕ್ಕೆ||ನಮ್ಮ ದಕ್ಷಿಣ ಭಾರತದಲ್ಲಿ ಹಲವಾರು ತಿಂಡಿಗಳನ್ನು ಮಾಡುತ್ತಾರೆ ಅದರಲ್ಲಿ ಒಂದಾಗಿರುವಂತಹ ತಿಂಡಿ ಇಡ್ಲಿ ಹಾಗೂ ಇಡ್ಲಿಯನ್ನು ನಾನಾ ರೀತಿಯಲ್ಲಿ ತಯಾರಿಸುತ್ತಾರೆ ಒಬ್ಬೊಬ್ಬರದ್ದು ಒಂದೊಂದು ವಿಧಾನ ಮತ್ತು ಒಬ್ಬರು ಮಾಡಿದ ರುಚಿ ಇನ್ನೊಬ್ಬರು ಮಾಡಿದ ರುಚಿ ಗಿಂಥ ವಿಭಿನ್ನವಾಗಿರುತ್ತದೆ ಇಡ್ಲಿಯಲ್ಲಿ ನಾನಾ ರೀತಿಯಾದಂತಹ ಇಡ್ಲಿ ಇದೆ ಅದು ಯಾವುವು ಎಂದರೆ ರವೆ ಇಡ್ಲಿ ಮಲ್ಲಿಗೆ ಇಡ್ಲಿ ತಟ್ಟೆ ಇಡ್ಲಿ, ಮೈಸೂರು ಇಡ್ಲಿ ಮಸಾಲೆ ಇಡ್ಲಿ ಹೀಗೆ ಯಾವುದೇ ವಿಧದ ಇಡ್ಲಿ ಇದ್ದರೂ ಕೂಡ ಅವು ಮೃದುವಾಗಿದ್ದರೆ ಮಾತ್ರ ತಿನ್ನಲು ಇಷ್ಟವಾಗುತ್ತದೆ ಕೆಲವರು ಮಾಡಿದ ಇಡ್ಲಿ ಗಟ್ಟಿಯಾಗಿ ದ್ದರೆ ಇನ್ನೂ ಕೆಲವರು ಮಾಡುವ ಇಡ್ಲಿ ಹೂವಿನಂತೆ ಮೃದುವಾಗಿರುತ್ತದೆ ಮೃದುವಾಗಿರುವುದು ಮತ್ತು ಗಟ್ಟಿಯಾಗುವುದು ನಾವು ತಯಾರಿಸುವಂತಹ ಹಿಟ್ಟಿನ ಮೇಲೆ ಅವಲಂಬಿಸಿರುತ್ತದೆ.

ಕೆಲವರು ಇಡ್ಲಿ ಬೇಸಿಗೆ ಕಾಲದಲ್ಲಿ ಚೆನ್ನಾಗಿ ಬರುತ್ತದೆ ಆದರೆ ಚಳಿಗಾಲದಲ್ಲಿ ಬರುವುದಿಲ್ಲ ಎಂದು ಕಾರಣ ಗಳನ್ನು ಹೇಳುತ್ತಾರೆ ಏಕೆಂದರೆ ಬೇಸಿಗೆಯಲ್ಲಿ ಬಿಸಿಲು ಇರುತ್ತದೆ ಇಡ್ಲಿ ಹಿಟ್ಟು ಚೆನ್ನಾಗಿ ಉಬ್ಬಿ ಬರುತ್ತದೆ ಹುಳಿ ಅಂಶ ಹೆಚ್ಚಾಗಿ ಬರುತ್ತದೆ ಆದ್ದರಿಂದ ಇಡ್ಲಿ ಮೃದುವಾಗಿರುತ್ತದೆ ಎಂದು ಹೇಳುತ್ತಾರೆ ಆದರೆ ಚಳಿಗಾಲದಲ್ಲಿ ಹೆಚ್ಚಾಗಿ ತಣ್ಣನೆಯ ವಾತಾವರಣವಿದ್ದು ಇಡ್ಲಿಯ ಹಿಟ್ಟು ಉಬ್ಬುವುದಿಲ್ಲ ಹುಳಿ ಬರುವುದಿಲ್ಲ ಆದ್ದರಿಂದ ಇಡ್ಲಿ ಮೃದುವಾಗಿ ಬರುವುದಿಲ್ಲ ಎಂದು ಎಲ್ಲರೂ ಕಾರಣಗಳನ್ನು ಹೇಳುತ್ತಾರೆ ಹಾಗೂ ಇನ್ನೂ ಕೆಲವರು ಇಡ್ಲಿ ಉಬ್ಬಿ ಬರಬೇಕು ಎಂದು ಸೋಡವನ್ನು ಹಾಕಿ ಬೇಯಿಸುತ್ತಾರೆ ಆದರೆ ಹೀಗೆ ಮಾಡೋದು ಬಹಳ ಅನಾರೋಗ್ಯ ಕಾರಿ ಏಕೆಂದರೆ ಸೋಡವನ್ನು ತಿಂದರೆ ಹೊಟ್ಟೆ ಉರಿ ಹೊಟ್ಟೆ ಉಬ್ಬರ ಕಾಣಿಸಿ ಕೊಳ್ಳುತ್ತದೆ ಹಾಗಾಗಿ ಯಾವುದೇ ರೀತಿಯಾದಂತಹ ಪದಾರ್ಥಗಳನ್ನು ಹಾಕದೆ ಇಡ್ಲಿ ಯಾವ ರೀತಿ ಉಬ್ಬಿ ಬರಬೇಕು ಎಂಬುದಕ್ಕೆ ಒಂದು ವಿಧಾನವನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ.

ನಾವು ಹೇಳುತ್ತಿರುವಂತಹ ಒಂದು ವಿಧಾನವನ್ನು ಬಹಳ ಹಿಂದಿನ ಕಾಲದಿಂದಲೂ ಅನುಸರಿಸಿಕೊಂಡು ಬಂದಂತಹ ವಿಧಾನ ವಾಗಿದ್ದು ಈ ಒಂದು ವಿಧಾನವನ್ನು ಮಾಡುವುದರಿಂದ ಇಡ್ಲಿ ಹಿಟ್ಟು ಚೆನ್ನಾಗಿ ಉಬ್ಬಿ ಬರುತ್ತದೆ ಮತ್ತು ಇಡ್ಲಿ ಮೃದುವಾಗಿ ಬರುತ್ತದೆ ಹಾಗಾದರೆ ಯಾವ ವಿಧಾನವನ್ನು ಅನುಸರಿಸಬೇಕು ಎಂದರೆ ಇಡ್ಲಿ ಹಿಟ್ಟನ್ನು ರುಬ್ಬಿಕೊಂಡು ಒಂದು ಪಾತ್ರೆಯಲ್ಲಿ ಇಟ್ಟುಕೊಂಡಿರುತ್ತೀರ ಅದರ ಮೇಲೆ ಬಾಳೆ ಎಲೆಯನ್ನು ಹಾಕಿ ಒಂದು ದೀಪದ ಬತ್ತಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಅದನ್ನು ಆ ಬಾಳೆ ಎಲೆಯ ಮೇಲೆ ಇಟ್ಟು ದೀಪ ಅರ್ಧದಷ್ಟು ಉರಿಯುವ ತನಕ ಯಾವುದೇ ಪಾತ್ರೆಯನ್ನು ಮುಚ್ಚಬಾರದು ಹಾಗೆ ಉರಿದರೆ ಇಡ್ಲಿ ಹಿಟ್ಟಿನ ಪಾತ್ರೆ ಸ್ವಲ್ಪ ಬಿಸಿ ಅಂಶಕ್ಕೆ ತಿರುಗುತ್ತದೆ ಆನಂತರ ಬೆಳಗಿನ ಸಮಯ ಆ ಹಿಟ್ಟಿನಿಂದ ಇಡ್ಲಿಯನ್ನು ಮಾಡಿದರೆ ಇಡ್ಲಿ ತುಂಬಾ ಮೃದುವಾಗಿ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *