ನಟಿ ತಾರಾ 37 ವರ್ಷಕ್ಕೆ ಮದುವೆಯಾಗಿದ್ದು ಯಾಕೆ ಗೊತ್ತ.
ನಟಿ ತಾರಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕನ್ನಡ ಚಲನಚಿತ್ರರಂಗ ದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟನೆಯನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಡಾಕ್ಟರ್ ರಾಜ್‌ಕುಮಾರ್, ಅನಂತ್‌ನಾಗ್, ಶಂಕರ್ ನಾಗ್, ಅಂಬರೀಶ್, ವಿಷ್ಣುವರ್ಧನ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಇನ್ನು ಅನೇಕ ನಟರುಗಳ ಜೊತೆಯಲ್ಲಿ ತಾರಾ ಅವರು ತೆರೆ ಹಂಚಿಕೊಂಡಿದ್ದಾರೆ. ನಾಯಕ ನಟಿಯಾಗಿ ಹಾಗೆ ಪೋಷಕ ನಟಿಯಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವಂತಹ ಇವರು ನಟಿ ಅಷ್ಟೇ ಅಲ್ಲದೆ ರಾಜಕಾರಣಿಯೂ ಸಹ ಹೌದು. ಬಣ್ಣ ಹಚ್ಚಿದ ನಟ ನಟಿಯರ ಬದುಕು ಯಾವಾಗಲೂ ಸುಂದರವಾಗಿ ಇರುವುದಿಲ್ಲ ಅವರ ಜೀವನದಲ್ಲಿಯೂ ಸಹ ಕೆಲವೊಂದಷ್ಟು ಏರಿಳಿತಗಳು ಉಂಟಾಗುತ್ತದೆ. ಅಂತಹದೇ ಸಾಲಿನಲ್ಲಿ ನಟಿ ತಾರಾ ಅವರು ಸಹ ಬರುತ್ತಾರೆ. ತಾರಾ ಅವರ ವೈಯಕ್ತಿಕ ಜೀವನವು ಪ್ರಾರಂಭದಲ್ಲಿ ಅಷ್ಟೇನೂ ಚೆನ್ನಾಗಿರಲಿಲ್ಲ ತದನಂತರದಲ್ಲಿ ಅವರ ಜೀವನವು ಸುಖಮಯವಾಯಿತು ಎಂದು ಹೇಳಿದರೆ ತಪ್ಪಾಗಲಾರದು.

ತಾರಾ ಅವರು ಮೂಲತಃ ಶ್ರೀಮಂತ ಕುಟುಂಬದಿಂದ ಬಂದರು ಆದರು ಸಹ ಇವರು ನಟೆನೆಯನ್ನು ಬಿಡಲಿಲ್ಲ ಚಿತ್ರರಂಗದಲ್ಲಿ ತಮ್ಮ ನೆಲೆಯನ್ನು ಗಟ್ಟಿಯ ಮಾಡಿಕೊಂಡರು. ನಟಿ ತಾರಾ ಅವರು ಮದುವೆಯಾಗಿದ್ದು ಅವರ 37ನೇ ವಯಸ್ಸಿನಲ್ಲಿ ಇದಕ್ಕೆ ಕೆಲವೊಂದಷ್ಟು ಕಾರಣಗಳು ಸಹ ಇದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಾರಾ ಅವರು ಸಿನಿಮಾಟೋಗ್ರಾಫರ್ ಎಚ್ ಸಿ ವೇಣುಗೋಪಾಲ್ ಅವರ ಕೈಹಿಡಿದು ಸುಖ ವಾದಂತಹ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಇವರಿಗೆ ಒಬ್ಬ ಮುದ್ದಾದ ಗಂಡು ಮಗನು ಸಹ ಇದ್ದಾನೆ. ಆದರೆ ಇವರ ವಿವಾಹವು ಅಷ್ಟೊಂದು ಈಜಿಯಾಗಿ ಆಗಲಿಲ್ಲ. ತಾರ ಮತ್ತು ವೇಣು ಅವರ ಪ್ರೀತಿಯ ಕಥೆಯನ್ನು ಕೇಳಿದರೆ ಎಂತಹವರಿಗೂ ಸಹ ಅದು ಸ್ಪೂರ್ತಿದಾಯಕ, ನಿಜವಾದ ಪ್ರೀತಿ, ಪ್ರೇಮ ಎಂದರೆ ಇದೇನಾ ಎನ್ನುವಷ್ಟು ಮಟ್ಟಿಗೆ ನಮ್ಮೆಲ್ಲರಿಗೂ ಸಹ ಖುಷಿಯನ್ನು ನೀಡುತ್ತದೆ. ಇವರಿಬ್ಬರದ್ದು ಸುಮಾರು 17 ವರ್ಷಗಳ ಪ್ರೀತಿ 1889 ರಲ್ಲಿ ಇವರಿಬ್ಬರಿಗೂ ಸಹ ಪರಿಚಯ ಆಗಿ ಪ್ರೀತಿ ಆಗುತ್ತದೆ ಅಂತಹ ಸಂದರ್ಭದಲ್ಲಿ ತಾರಾ ಅವರಿಗೆ ಕೇವಲ 18 ವರ್ಷ ಆದ್ದರಿಂದ ತಾರಾ ಅವರು ತಮ್ಮ ಪ್ರೀತಿಯ ವಿಷಯವನ್ನು 5 ವರ್ಷಗಳ ಬಳಿಕ ತಮ್ಮ ಮನೆಯಲ್ಲಿ ಹೇಳಿಕೊಳ್ಳುತ್ತಾರೆ.

ಆದರೆ ತಾರ ಅವರ ಮನೆಯಲ್ಲಿ ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ ಕಾರಣ ವೇಣು ಅವರು ಕೇವಲ ಪ್ರೆಸ್ ಫೋಟೋಗ್ರಾಫರ್ ಆಗಿರುತ್ತಾರೆ ಆದ್ದರಿಂದ ನಟಿ ತಾರಾ ಅವರ ಮನೆಯಲ್ಲಿ ಮದುವೆಯನ್ನು ನಿರಾಕರಿಸುತ್ತಾರೆ. ಇರದ ಬಳಿಕ ಇವರಿಬ್ಬರ ನಡುವೆ ಯಾವುದೇ ರೀತಿಯಾದಂತಹ ಸಂಪರ್ಕಗಳು ಸಹ ಇರುವುದಿಲ್ಲ ಈ ಒಂದು ವಿಷಯವನ್ನು ಚಾಲೆಂಜ್ ಆಗಿ ತೆಗೆದುಕೊಂಡಂತಹ ವೇಣು ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರನ್ನು ಮಾಡಬೇಕು ಎನ್ನುವಂತಹ ಆಕಾಂಕ್ಷೆಯನ್ನು ಹೊಂದುತ್ತಾರೆ. ಹಲವು ವರ್ಷಗಳ ನಂತರ ವೇಣು ಅವರು ಸಿನಿಮಾ ಆಟೋಗ್ರಾಫರ್ ಆಗಿ ಹೊರಹೊಮ್ಮುತ್ತಾರೆ. ಅಂತಹ ಸಂದರ್ಭದಲ್ಲಿ ತಾರಾ ಅವರಿಗೆ 37 ವರ್ಷಗಳು ಆಗಿರುತ್ತದೆ ಆದರೂ ಸಹ ವೇಣು ಅವರು ತಾರಾ ಅವರ ಮನೆಗೆ ಹೋಗಿ ಮದುವೆಯ ಮಾತುಕತೆಯನ್ನು ಮಾಡುತ್ತಾರೆ ನಂತರ ಈ ಇಬ್ಬರು ಕುಟುಂಬದವರ ಒಪ್ಪಿಗೆಯ ಮೇರೆಗೆ ಮದುವೆಯನ್ನು ಮಾಡಿಕೊಳ್ಳುತ್ತಾರೆ ಈಗ ಈ ದಂಪತಿಗಳಿಗೆ ಒಬ್ಬ ಮುದ್ದಾದ ಗಂಡು ಮಗನು ಸಹ ಇದ್ದಾನೆ.

Leave a Reply

Your email address will not be published. Required fields are marked *