ಸಣ್ಣ ಆಗಿರುವ ಬ್ರಹ್ಮಗಂಟು ಗೀತಾ ಈಗ ಎಷ್ಟು ಮುದ್ದಾಗಿ ಕಾಣಿಸುತ್ತಿದ್ದಾರೆ ನೀವೇ ನೋಡಿ ?ಗೀತಾ ಭಾರತಿ ಭಟ್ ಅವರು ಕನ್ನಡ ದೂರದರ್ಶನ ಮತ್ತು ಚಲನಚಿತ್ರೋದ್ಯಮದ ಭಾರತೀಯ ನಟಿಯಾಗಿದ್ದು, ಬ್ರಹ್ಮಗಂಟು ಧಾರಾವಾಹಿ ಯಲ್ಲಿನ ಪಾತ್ರಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಕನ್ನಡ ಚಿತ್ರರಂಗದ ನಟಿಯ ಜೊತೆಗೆ, ಗೀತಾ ಅವರು ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಉದ್ಯಮದಲ್ಲಿ ಹಾಡು ಗಳನ್ನು ಹಾಡಿರುವ ಗಾಯಕಿ ಕೂಡ ಆಗಿದ್ದಾರೆ.ಬ್ರಹ್ಮ ಗಂಟು ಖ್ಯಾತಿಯ ಗೀತಾ ಭಾರತಿ ಭಟ್ ಅವರು ಕರ್ನಾಟಕದಲ್ಲಿ ಚಿರಪರಿಚಿತ. ಸೀರಿಯಲ್‌ ವೀಕ್ಷಕರಿಗೆ ಮಾತ್ರವಲ್ಲ ಸಿನಿ ಪ್ರಿಯರಿಗೂ ಇವರ ಪರಿಚಯ ಇದೆ. ಲವ್‌ ಮಾಕ್ಟೇಲ್‌ನಲ್ಲಿ ಅಭಿನಯಿಸಿದ್ದಾರೆ, ಇನ್ನು ಕನ್ನಡ ಬಿಗ್‌ಬಾಸ್‌ 8 ರ ಸ್ಪರ್ಧಿಯಾಗಿದ್ದು. ಆಲ್ಬಂನಲ್ಲೂ ಕಾಣಿಸಿ ಕೊಂಡಿದ್ದಾರೆ.ಇವರು ಗುಂಡಮ್ಮ ಎಂದೇ ಖ್ಯಾತ ರಾಗಿದ್ದಾರೆ. ಅವರ ಮೈ ತೂಕ ತಕ್ಕ ಹಾಗೆಯೇ ಸೀರಿಯಲ್‌ನಲ್ಲಿ ಪಾತ್ರವಿರುವುದರಿಂದ ಜನರು ಕೂಡ ಅವರನ್ನು ಗುಂಡಮ್ಮ ಹಾಗೆಯೇ ಇಷ್ಟಪಟ್ಟಿದ್ದಾರೆ. ಆದರೆ ಅವರು ತಮ್ಮ ಅತೀ ಹೆಚ್ಚಿನ ಮೈ ತೂಕ ದಿಂದಾಗಿ ಸಾಕಷ್ಟು ಅವಮಾನ, ನೋವು ಕೂಡ ಅನುಭಿಸಿದ್ದಾರೆ.

ಈಗ ತೂಕ ಇಳಿಕೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ ಬಿಗ್‌ಬಾಸ್‌ನಲ್ಲೂ ಅವರ ಮೈ ತೂಕ ಹೆಚ್ಚಿರುವುದರಿಂದ ಟಾಸ್ಕ್‌ಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಿಲ್ಲ ಎಂದು ಇತರ ಕೆಲ ಸ್ಪರ್ಧಿ ಗಳು ಹೇಳಿ ನೋವುಂಟು ಮಾಡಿದ್ದನ್ನೂ ವೀಕ್ಷಕರು ನೋಡಿದ್ದಾರೆ. ಅವರು ಕೂಡ ತಮ್ಮ ಸ್ಥೂಲ ಕಾಯದ ಬಗ್ಗೆ ತುಂಬಾ ಚಿಂತೆ ಮಾಡದೆ ನಗು ನಗುತ್ತಾ ಇದ್ದರು ಆದರೆ ಬಿಗ್‌ಬಾಸ್‌ನಿಂದ ಬಂದ ಮೇಲೆ ಅವರು ತೂಕ ಕಡಿಮೆ ಮಾಡಲು ನಿರ್ಧಾರ ತೆಗೆದುಕೊಂಡರು. ತೂಕ ಇಳಿಕೆ ಗಾಗಿ ಟ್ರೈನರ್‌ನಿಂದ ಟ್ರೈನಿಂಗ್‌ ತೆಗೆದು ಕೊಳ್ಳುತ್ತಿದ್ದು ಅದನ್ನು ತಮ್ಮ ಸಾಮಾಜಿಕ ತಾಣದಲ್ಲಿ ಹಾಕುತ್ತಿರುತ್ತಾರೆ.

ಈಗ ಅವರ ಪ್ರಯತ್ನಕ್ಕೆ ಫಲಸಿಕ್ಕಿದೆ ಇದೀಗ ಸುಮಾರು 17ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅವರು ಇನ್ನೂ ತೂಕ ಇಳಿಸಿ ಕೊಳ್ಳಬೇಕು, ಅದಕ್ಕೆ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.ಅವರ ಜಿಮ್‌ ಟ್ರೈನರ್‌ ಹೇಳುವಂತೆ ಅವರಿಗೆ ಫುಲ್‌ ಬಾಡಿ ವರ್ಕೌಟ್‌ ಹೆಚ್ಚಾಗಿ ಮಾಡಿಸುತ್ತಿದ್ದಾರೆ. ಗೀತಾ ಭಾರತಿ ಭಟ್‌ ಕೂಡ ತುಂಬಾ ಖುಷಿ ಖುಷಿ ಯಾಗಿ ವೇಯ್ಟ್ ಲಾಸ್‌ ಜರ್ನಿ ಮುಂದುವರೆಸಿದ್ದಾರೆ ಮೈ ತೂಕ ಹೆಚ್ಚಾದರೆ ಒಂದು ರೀತಿ ಆತ್ಮ ವಿಶ್ವಾಸ ಕುಗ್ಗುವುದು, ಆದರೆ ಸರಿಯಾದ ಮೈಕಟ್ಟು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತೆ. ಗೀತಾ ಅವರಿಗೆ ಕಡಿಮೆ ಯಾಗುತ್ತಿರುವ ಮೈ ತೂಕ ಖುಷಿ ತಂದಿದೆ. ಪ್ರಯತ್ನ ಪಟ್ಟರೆ ಮೈ ತೂಕ ಕರಗಿಸಲು ಸಾಧ್ಯ ಎಂದು ಇತರರಿಗೆ ಸ್ಪೂರ್ತಿಯಾಗಿದ್ದಾರೆ ಗೀತಾ ಭಾರತಿ ಭಟ್. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *