ನಮ್ಮ ಗಂಡೈಕ್ಳು ಮತ್ತೆ 40 ಪ್ಲಸ್ ಅಂಕಲ್ಸ್ ಗೆ ಈ ವಿಡಿಯೋ ಅರ್ಪಣೆ..ನಿಮಗೆ ವಿಡಿಯೋ ಕಾಲ್ ಮಾಡಿ ಹೇಗೆ ಮೋಸ ಮಾಡ್ತಾರೆ ನೋಡಿ - Karnataka's Best News Portal

ವೀಡಿಯೊ ಕಾಲ್ ಹಗರಣದ ಬಗ್ಗೆ ||
ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ವಯಸ್ಸಾದವರು ಹುಡುಗಿಯರು ಪ್ರತಿಯೊಬ್ಬರು ಕೂಡ ಫೇಸ್ ಬುಕ್ ಅಕೌಂಟ್ ಅನ್ನು ಕ್ರಿಯೇಟ್ ಮಾಡುತ್ತಿದ್ದು ಇದರಲ್ಲಿ ತಮ್ಮ ಫೋಟೋಗಳನ್ನು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ ಆದರೆ ಕೆಲವೊಬ್ಬರು ಇಂತಹ ಫೇಸ್ ಬುಕ್ ಅಕೌಂಟ್ ಗಳನ್ನು ಬಹಳ ದುರ್ಬಳಕೆ ಮಾಡಿಕೊಂಡು ಎಲ್ಲರಿಗೂ ತೊಂದರೆಯನ್ನು ಕೊಡುತ್ತಿದ್ದಾರೆ ಅದು ಏನು ಎಂದರೆ ಫೇಸ್ ಬುಕ್ ನಲ್ಲಿ ವಿಡಿಯೋ ಕಾಲ್ ಗಳನ್ನು ಮಾಡುವಂತಹ ಕೆಲವೊಂದು ಗುಂಪೇ ಇದೆ ಇವರು ಯಾವುದಾದರೂ ಒಂದು ಫೇಸ್ ಬುಕ್ ಅಕೌಂಟ್ ಅಂದರೆ ಹುಡುಗಿಯರೇ ಆಗಲಿ ಹುಡುಗರೇ ಆಗಲಿ ಅವರು ವಿಡಿಯೋ ಕಾಲ್ ಅನ್ನು ಮಾಡುತ್ತಾರೆ ಇದರಿಂದ ಯಾವ ರೀತಿಯ ತೊಂದರೆ ಉಂಟಾಗುತ್ತದೆ ಎಂಬುವುದು ಕೆಲವೊಂದಷ್ಟು ಜನಕ್ಕೆ ತಿಳಿದಿರುವುದಿಲ್ಲ ಹಾಗೂ ಇನ್ನೂ ಕೆಲವರು ಓದದೆ ಇರುವಂತಹ ಅವಿದ್ಯಾವಂತರು ಕೂಡ ಈ ಒಂದು ಫೇಸ್ ಬುಕ್ ಅನ್ನು ಉಪಯೋಗಿಸುವುದಕ್ಕೆ ಪ್ರಾರಂಭ ಮಾಡಿದ್ದು.

ಇದರಿಂದ ಯಾವ ರೀತಿಯಾದಂತಹ ತೊಂದರೆಗಳು ಉಂಟಾಗುತ್ತದೆ ಎಂಬುವುದು ಅವರಿಗೆ ತಿಳಿದಿರುವುದಿಲ್ಲ ಬದಲಾಗಿ ಎಲ್ಲ ವಿಷಯಗಳನ್ನು ಹಾಗೂ ಕೆಲವೊಂದು ವಿಡಿಯೋಗಳನ್ನು ನೋಡುತ್ತಲೇ ಇರುತ್ತಾರೆ ಹೀಗೆ ಒಂದು ಉದಾಹರಣೆಗೆ ಹೇಳುವುದಾದರೆ ಯಾರೋ ಒಬ್ಬ ಹುಡುಗ ತನ್ನ ಫೇಸ್ ಬುಕ್ ನಲ್ಲಿ ಹುಡುಗಿಯ ಹೆಸರನ್ನು ಹಾಕಿ ಕ್ರೀಯೇಟ್ ಮಾಡಿರುತ್ತಾರೆ ಅಂತವರು ಕೆಲವೊಂದಷ್ಟು ಹುಡುಗಿ ಯರಿಗೆ ಫ್ರೆಂಡ್ ರಿಕ್ವೆಸ್ಟ್ ಅನ್ನು ಕಳಿಸುತ್ತಾರೆ ಆದರೆ ಕಳಿಸಿ ದಂತಹ ಹುಡುಗಿ ಹುಡುಗಿಯೇ ಎಂದು ತಿಳಿದು ಅವರಿಗೆ ಕೆಲವೊಂದಷ್ಟು ದಿನ ಮೆಸೇಜ್ ಗಳನ್ನು ಮಾಡಿ ಹೆಚ್ಚಿನ ಪರಿಚಯ ಮಾಡಿಕೊಳ್ಳುತ್ತಾರೆ ಹೀಗೆ ಒಂದು ದಿನ ವಿಡಿಯೋ ಕಾಲ್ ಮಾಡಿ ನಿಮ್ಮ ವಾಟ್ಸಪ್ ನಂಬರ್ ಕೊಡಿ ಅದರಲ್ಲಿ ನಾನು ನಿಮ್ಮ ಜೊತೆ ಕಾಂಟಾಕ್ಟ್ ನಲ್ಲಿ ಇರುತ್ತೇನೆ ಎಂದು ಆ ಹುಡುಗ ಕೇಳಿದಾಗ ಕೆಲವೊಂದಷ್ಟು ಜನ ನಂಬರ್ ಗಳನ್ನು ಕೊಡುತ್ತಾರೆ.

ಆದರೆ ನಂಬರ್ ಅನ್ನು ಕೊಟ್ಟಂತಹ ಹುಡುಗಿಯೂ ಅವಳು ಕೂಡ ಹುಡುಗಿ ಎಂದೇ ತಿಳಿದು ಕೊಟ್ಟಿರುತ್ತಾಳೆ ಆದರೆ ಅವರು ಹುಡುಗರು ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ಹೆಚ್ಚಾಗಿ ಸ್ನೇಹ ಬೆಳೆದು ವಿಡಿಯೋ ಕಾಲ್ ಮಾಡು ಅನ್ನುವಷ್ಟರ ಮಟ್ಟಿಗೆ ಬೆಳೆಯುತ್ತದೆ ಆನಂತರ ವಿಡಿಯೋ ಕಾಲ್ ಮಾಡಿದ ಸಂದರ್ಭದಲ್ಲಿ ಯಾ ಹುಡುಗನು ಹುಡುಗಿಗೆ ಕೆಲವೊಂದಷ್ಟು ವಿಷಯ ವಿಚಾರಗಳನ್ನು ಮಾತನಾಡುತ್ತಾ ಅವಳು ಮಾಡಿದಂತಹ ವಿಡಿಯೋ ಕಾಲ್ ಅನ್ನು ತನ್ನ ಫೋನ್ ನಲ್ಲಿ ಸ್ಕ್ರೀನ್ ರೆಕಾರ್ಡ್ ಮಾಡಿಕೊಳ್ಳುತ್ತಿರುತ್ತಾನೆ. ಆದರೆ ಸ್ಕ್ರೀನ್ ರೆಕಾರ್ಡ್ ಮಾಡಿಕೊಳ್ಳುವುದು ಆ ಹುಡುಗಿಗೆ ತಿಳಿದಿರುವುದಿಲ್ಲ ಬದಲಾಗಿ ಈ ಹುಡುಗ ಅದನ್ನು ರೆಕಾರ್ಡ್ ಮಾಡಿಕೊಳ್ಳುತ್ತಿರುತ್ತಾನೆ ನಂತರ ಕೆಲವೊಂದಷ್ಟು ದಿನ ಕಳೆದ ನಂತರ ಆ ವಿಡಿಯೋ ರೆಕಾರ್ಡ್ ಅನ್ನು ಹುಡುಗಿಗೆ ಕಳುಹಿಸಿ ನೀನು ಇಷ್ಟು ದುಡ್ಡು ಕೊಡದೆ ಹೋದರೆ ಈ ವಿಡಿಯೋವನ್ನು ನಿನ್ನ ಸ್ನೇಹಿತರಿಗೆ ಫೇಸ್ ಬುಕ್ ನಲ್ಲಿ ಹಾಕುತ್ತೇನೆ ಎಂದು ಹೆದರಿಸುತ್ತಾರೆ ಹೀಗೆ ನಾವು ಹೇಳಿದಂತಹ ಈ ವಿಷಯವು ಕೆಲವೊಂದಷ್ಟು ಜನಗಳಿಗೆ ತಿಳಿದಿರುವು ದಿಲ್ಲ ಆದರೆ ಇಂಥ ಪರಿಸ್ಥಿತಿಯಿಂದ ಹಲವಾರು ಜನ ನೊಂದಿರುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *