ಮಕರ ರಾಶಿ ಶ್ರವಣ ನಕ್ಷತ್ರ ಸ್ವಭಾವ ||ಶ್ರವಣ ನಕ್ಷತ್ರದಲ್ಲಿ ಹುಟ್ಟಿದಂತಹ ಜನರ ಸ್ವಭಾವ ಗುಣಲಕ್ಷಣ ಹಾಗೂ ಇವರ ಜೀವನ ಶೈಲಿ ಇವರ ವೃತ್ತಿ ಪ್ರವೃತ್ತಿ ಹೇಗೆ ಇರುತ್ತದೆ ಎಂಬುದನ್ನು ಹಾಗೂ ಇವರಿಗೆ ಯಾವ ವರ್ಷ ಒಳ್ಳೆಯ ಸಮಯವಾಗಿರುತ್ತದೆ ಹಾಗೂ ಇವರು ಯಾವ ಕಷ್ಟ ಬಂದರೆ ಯಾವ ದೇವಿಯ ಆರಾಧನೆಯನ್ನು ಮಾಡಿ ತಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳಬೇಕುಹೀಗೆ ಹಲವಾರು ರೀತಿಯಾದಂತಹ ಎಲ್ಲಾ ವಿಷಯಗಳ ಬಗ್ಗೆ ಈ ಕೆಳಗಿನಂತೆ ತಿಳಿದು ಕೊಳ್ಳುತ್ತಾ ಹೋಗೋಣ ಹಾಗಾದರೆ ಇಂದಿನ ವಿಶೇಷವಾದಂತಹ ಶ್ರವಣ ನಕ್ಷತ್ರವು ಅಶ್ವಿನಿ ಯಾದಿ 27 ನಕ್ಷತ್ರಗಳಲ್ಲಿ 22ನೇಯ ನಕ್ಷತ್ರವಾಗಿದ್ದು ಹಾಗೂ ಇದು ವಿಶೇಷವಾದಂತಹ ನಕ್ಷತ್ರವೆನಿಸಿದ್ದು ಸರ್ವೋತ್ತಮನಾದ ಜಗತ್ ಪಾಲಕ ಭಗವಾನ್ ಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದಂತ ನಕ್ಷತ್ರವಾಗಿದೆ ಹಾಗೂ ಅಕ್ಷರಾಭ್ಯಾಸಕ್ಕೂ ಕೂಡ ಈ ನಕ್ಷತ್ರ ಶ್ರೇಷ್ಠ ಎಂದೇ ಹೇಳಲಾಗುತ್ತದೆ.
ಹಾಗಾಗಿ ಈ ನಕ್ಷತ್ರವು ವಿವಾಹ ಗೃಹಪ್ರವೇಶ ಉಪನಯನ ಹೀಗೆ ಶುಭ ಕಾರ್ಯಕ್ರಮಗಳಿಗೆ ಪ್ರಶಸ್ತವಾದಂತಹ ನಕ್ಷತ್ರ ಎಂದು ಮುಹೂರ್ತಶಾಸ್ತ್ರ ದಲ್ಲಿ ಮಾನ್ಯತೆಯನ್ನು ಪಡೆದಿದೆ ನಮ್ಮ ಭಾರತೀಯ ಪುರಾಣ ಗ್ರಂಥಗಳು ಈ ನಕ್ಷತ್ರದ ಬಗ್ಗೆ ಏನು ಹೇಳುತ್ತದೆ ಎಂದರೆ ಈ ನಕ್ಷತ್ರವನ್ನು ಹೊಂದಿರುವವರು ಬಹಳ ಉದಾರ ಮನಸ್ಸಿನವರು ದುಃಖಿತರನ್ನು ರೋಗಿಗಳನ್ನು ಅಸಹಾಯಕರನ್ನು ಕಂಡು ಆರ್ಥಿಕ ವಾಗಿ ಇವರು ತಮ್ಮಿಂದ ಆಗುವಂತಹ ಸಹಾಯವನ್ನು ಮಾಡಲು ಮುಂದಾಗುತ್ತಾರೆ ಹಾಗೂ ಇವರ ಉತ್ತಮವಾದಂತಹ ಪತಿಯನ್ನು ಮತ್ತು ಪತ್ನಿಯನ್ನು ಕೂಡ ಪಡೆಯುವಂತಹ ಮನಸ್ಸನ್ನು ಉಳ್ಳವರು ಎಂದು ಹೇಳಲಾಗುತ್ತದೆ ಇವರು ಹೆಚ್ಚಾಗಿ ಕುಟುಂಬ ದಲ್ಲಿ ಸಂತೋಷವಾಗಿ ನಿಮ್ಮದಿ ಇಂದ ಜೀವಿಸಲು ಬಯಸುವವರಾಗಿದ್ದು ಮತ್ತೊಬ್ಬರಿಗೆ ಯಾವುದೇ ರೀತಿಯಾದಂತಹ ಹಿಂಸೆಗಳನ್ನು ಕೊಡಲು ಇಚ್ಚಿಸುವು ದಿಲ್ಲ ಇವರು ಅಷ್ಟಾಗಿ ಮಾತನಾಡದೆ ಇದ್ದರೂ ಕೂಡ ಇವರ ಮಾತಿಗೆ ಒಂದು ಗಾಂಭೀರ್ಯ ಹಾಗೂ ಇವರು ನೂರು ಮಾತಿಗೆ ಒಂದು ಮಾತನ್ನು ಆಡಿ ಸೈ ಎನಿಸಿ ಕೊಳ್ಳುವವರಾಗಿರುತ್ತಾರೆ.
ಇವರು ಉತ್ತಮ ಮಾತುಗಳನ್ನು ಸರಿಯಾಗಿ ಕೇಳಿ ಶಾಸ್ತ್ರೀಯ ಆಚರಣೆ ಸಂಪ್ರದಾಯ ಸಂಸ್ಕೃತಿ ಪರಂಪರೆಗಳಲ್ಲಿ ವಿಶೇಷವಾದಂತಹ ಶ್ರದ್ಧೆಯನ್ನು ಬೆಳೆಸಿಕೊಂಡವರು. ದೇವಗಣ ಕಪಿ ಮೃಗ ಮಹಾ ವಿಷ್ಣು ದೇವರು ಆಗಿರುತ್ತಾರೆ ಈ ನಕ್ಷತ್ರದ ನಾಲ್ಕು ಪಾದಗಳಿಗೆ ಮಕರ ರಾಶಿಯಾಗಿದ್ದು ಮಹಾವಿಷ್ಣುವಿನ ಅವತಾರ ರೂಪವಾದ ವೆಂಕಟೇಶ ಸ್ವಾಮಿ ಲಕ್ಷ್ಮೀ ನರಸಿಂಹ ವಾಮನ ಭೂವರಹ ಇತ್ಯಾದಿ ಭಗವತ್ ರೂಪಗಣ ಆರಾಧನೆ ಚಿಂತನೆಗಳು ಇವರಿಗೆ ವಿಶೇಷ ವಾದಂತಹ ಶ್ರೇಯಸ್ಸನ್ನು ದೊರಕಿಸಿ ಕೊಡುತ್ತದೆ ಶ್ರವಣ ಎಂದರೆ ಕಿವಿ ಎಂದು ಅರ್ಥ ಶ್ರವಣ ನಕ್ಷತ್ರವು ಹೆಸರಿಗೆ ಹೇಳುವಂತೆ ಈ ನಕ್ಷತ್ರದಲ್ಲಿ ಹೆಚ್ಚು ಉತ್ತಮವಾದಂತಹ ಗೀತೋಪದೇಶದ ಮಾತುಗಳನ್ನು ಕೇಳುವವರು ಹೆಚ್ಚಾಗಿ ಇರುತ್ತಾರೆ ಹಾಗಾಗಿ ಎಲ್ಲಾ ಇಂದ್ರಿಯಗಳಲ್ಲಿಯೂ ಕೂಡ ವಿಶೇಷವಾದಂತಹ ಇಂದ್ರಿಯ ಎಂದರೆ ಅದು ಶ್ರವಣ ಏಕೆಂದರೆ ಪ್ರತಿ ಯೊಂದು ಒಳ್ಳೆಯ ಮಾತುಗಳನ್ನು ಕೇಳಿಸಿ ಅದನ್ನು ಅರ್ಥ ಮಾಡಿಕೊಳ್ಳಲು ಇರುವಂತಹ ಅಂಗವಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.