ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ ಎಸ್ ಎಸ್ ಎಲ್ ಸಿ ಪಿಯಿಸಿ ವಿದ್ಯಾರ್ಥಿಗಳಿಗೆ ಸುವರ್ಣವಕಾಶ.ಹದಿನೈದು ಸಾವಿರದ ತನಕ ಹಣ ಪಡೆಯಿರಿ

ಹಿಂದುಳಿದ ವರ್ಗಗಳ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆನ್ಲೈನ್ ಅರ್ಜಿ 2022 2023 ||ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ವರ್ಷ ಅಂದರೆ 2022 ರಲ್ಲಿ ಉತ್ತೀರ್ಣರಾದಂತಹ ವಿದ್ಯಾರ್ಥಿಗಳಿಗೆ ಅಂದರೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆನ್ ಲೈನ್ ಅರ್ಜಿಯನ್ನು ಆಹ್ವಾನಿಸಿದ್ದು ಅದರಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಪಾಸಾದವರಿಗೆ 10 ಸಾವಿರ ರೂಪಾಯಿ ಪ್ರತಿಭಾ ಪುರಸ್ಕಾರ ಹಣ ಸಿಗುತ್ತದೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಹದಿನೈದು ಸಾವಿರ ರೂಪಾಯಿ ಪ್ರತಿಭಾ ಪುರಸ್ಕಾರ ಹಣ ಸಿಗುತ್ತದೆ ಹಾಗಾದರೆ ಯಾವ ಯಾವ ವರ್ಗದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಅರ್ಜಿಯನ್ನು ಸಲ್ಲಿಸುವುದಕ್ಕೆ ಆರಂಭಿಕ ದಿನಾಂಕ ಹಾಗೂ ಕೊನೆಯ ದಿನಾಂಕ.

ಹಾಗೂ ಅರ್ಜಿಯನ್ನು ಹಾಕುವುದಕ್ಕೆ ಯಾವ ಯಾವ ದಾಖಲೆಗಳು ಬೇಕು ಎಂಬುದರ ಸಂಪೂರ್ಣ ಮಾಹಿತಿ ಯನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ ಹಾಗೂ ಈ ಅರ್ಜಿಯನ್ನು ಹಾಕುವುದಕ್ಕೆ ಅಭ್ಯರ್ಥಿಗಳು ಎಷ್ಟು ಪರ್ಸೆಂಟೇಜ್ ಅನ್ನು ತೆಗೆದುಕೊಂಡಿರಬೇಕು ಹೀಗೆ ಹಲವಾರು ವಿಷಯಗಳನ್ನು ಒಳಗೊಂಡಿದ್ದು ಇವೆಲ್ಲದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೋಡೋಣ ಹಾಗಾಗಿ ಯಾವ ಯಾವ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿರುತ್ತಾರೋ ಅವರೆಲ್ಲರೂ ಕೂಡ ಈ ಒಂದು ಅರ್ಜಿಯನ್ನು ಹಾಕಿ ಈ ಪ್ರತಿಭಾ ಪುರಸ್ಕಾರ ಹಣವನ್ನು ಪಡೆದುಕೊಳ್ಳ ಬಹುದಾಗಿದೆ. ಈ ಅರ್ಜಿಯನ್ನು ಹಾಕುವುದಕ್ಕೆ ಯಾವ ವೆಬ್ ಸೈಟ್ ನಲ್ಲಿ ಹೋಗಿ ಅರ್ಜಿಯನ್ನು ಹಾಕಬೇಕು ಎಂದರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯ ವೆಬ್ ಸೈಟ್ ಗೆ ಹೋಗಿ ಅಲ್ಲಿ ನೀವು ಅರ್ಜಿಯನ್ನು ಹಾಕಬೇಕಾಗಿರುತ್ತದೆ. ಹಾಗೂ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ವಿದ್ಯಾರ್ಥಿಗಳು ಶೇಕಡ 90ರಷ್ಟು ಅಂಕವನ್ನು ಪಡೆದಿರಬೇಕು.

WhatsApp Group Join Now
Telegram Group Join Now

ಹಾಗೂ ಹಿಂದುಳಿದ ವರ್ಗದವರು ಮಾತ್ರ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಅವಕಾಶವಿದ್ದು ಈ ಅರ್ಜಿಯನ್ನು ಹಾಕುವುದಕ್ಕೆ ಅವರು ತೇರ್ಗಡೆ ಗೊಂಡಂತಹ ಅಂಕಪಟ್ಟಿ ಹಾಗೂ ಅವರ ಫೋಟೋ ಮತ್ತು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಪಾಸ್ ಬುಕ್ ಪ್ರತಿ ಹಾಗೂ ಅದಕ್ಕೆ ನಿಮ್ಮ ಮೊಬೈಲ್ ನಂಬರ್ ಸೇರಿರಬೇಕು ಮತ್ತು ಹಾಗೂ ವಿಕಲಚೇತನ ಅಭ್ಯರ್ಥಿಗಳು ಈ ಒಂದು ಅರ್ಜಿಯನ್ನು ಸಲ್ಲಿಸಬೇಕಾ ದರೆ ಅವರ ವಿಕಲಚೇತನದ ಒಂದು ಪ್ರಮಾಣ ಪತ್ರವನ್ನು ಕೂಡ ಲಗತ್ತಿಸಬೇಕಾಗಿರುತ್ತದೆ ಹಾಗೂ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಪ್ರಾರಂಭ ದಿನಾಂಕ ಯಾವುದು ಎಂದು ನೋಡಿದರೆ 27/09/2022ಹಾಗು ಕೊನೆಯ ದಿನಾಂಕ ಯಾವುದು ಎಂದು ನೋಡುವುದಾದರೆ 21/10/2022 ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]