ಕಪಾಲಭಾತಿ ಪ್ರಾಣಾಯಾಮ ಸಾವಿರ ಔಷಧಿಗಳಿಗೆ ಸಮ..ಈ ಮೂರು ಪ್ರಾಣಯಾಮಗಳು ನಿಮ್ಮ ಬದುಕನ್ನೇ ಬದುಕಿನ ಶೈಲಿಯನ್ನೇ ಬದಲಿಸುತ್ತೆ » Karnataka's Best News Portal

ಕಪಾಲಭಾತಿ ಪ್ರಾಣಾಯಾಮ ಸಾವಿರ ಔಷಧಿಗಳಿಗೆ ಸಮ..ಈ ಮೂರು ಪ್ರಾಣಯಾಮಗಳು ನಿಮ್ಮ ಬದುಕನ್ನೇ ಬದುಕಿನ ಶೈಲಿಯನ್ನೇ ಬದಲಿಸುತ್ತೆ

ಕಪಾಲಭಾತಿ ಪ್ರಾಣಯಾಮದ ಬಗ್ಗೆ ಪ್ರಮುಖ ಮಾಹಿತಿಗಳು…
ಕಪಾಲ ಭಾತಿ ಎನ್ನುವುದರ ಅರ್ಥ ಈ ರೀತಿ ಇದೆ. ಕಪಾಲ ಎಂದರೆ ಮೆದುಳು ಭಾತಿ ಎಂದರೆ ಬೆಳಕು ಎನ್ನುವುದಾಗಿದೆ. ಪ್ರಾಣಾಯಾಮದ ಅರ್ಥದಲ್ಲಿ ಕಪಾಲಭಾತಿ ಎಂದರೆ ಮೆದುಳಿಗೆ ಬೆಳಕನ್ನು ನೀಡುವ ಪ್ರಾಣ ದೀಪ ಎಂದು ಹೇಳಬಹುದು. ಈ ಕಪಾಲಭಾತಿ ಪ್ರಾಣಾಯಾಮವನ್ನು ಹೇಗೆ ಅಭ್ಯಾಸ ಮಾಡಬೇಕು ಯಾವಾಗ ಅಭ್ಯಾಸ ಮಾಡಬೇಕು ಎನ್ನುವುದು ಬಹಳ ಮುಖ್ಯವಾದ ಅಂಶವಾಗಿದೆ. ಯಾವಾಗಲೂ ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆ ಇರುವಾಗ ಅಭ್ಯಾಸ ಮಾಡಬೇಕು ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿದಾಗ ಮಾತ್ರ ಇದರ ಸಂಪೂರ್ಣ ಫಲ ಅಥವಾ ಲಾಭ ಸಿಗುತ್ತದೆ. ಹೊಟ್ಟೆಯಲ್ಲಿ ಆಹಾರ ಇರುವಾಗ ಕಪಾಲಭಾತಿ ಪ್ರಾಣಾಯಾಮ ಮಾಡುವುದು ನಿಷಿದ್ಧವಾಗಿದೆ. ಹೊಟ್ಟೆಯಲ್ಲಿ ಆಹಾರ ಇದ್ದಾಗ ಮಾಡಿದರೆ ಇದು ಬಹಳ ಅಪಾಯಕಾರಿ ಮತ್ತು ಮಲಶುದ್ಧಿ ಆಗದೆ ಅಂದರೆ ಸರಿಯಾಗಿ ಮಲ ವಿಸರ್ಜನೆ ಮಾಡದೇ ಇದನ್ನು ಮಾಡುವುದು ಕೂಡ ಅತ್ಯಂತ ಅಪಾಯ ಆಗಿರುತ್ತದೆ.

ಯಾಕೆಂದರೆ ಕಪಾಲಭಾತಿ ಪ್ರಾಣಯಾಮ ಮಾಡಿದಾಗ ಮಲ ಹೊಟ್ಟೆಯಲ್ಲಿ ಇದ್ದರೆ ಅದು ಊರ್ದ್ವ ಮುಖವಾಗಿ ಸಂಚಾರ ಮಾಡುತ್ತದೆ. ಕಪಾಲಭಾತಿ ಮಾಡುವುದರಿಂದ ಪ್ರಾಣಶಕ್ತಿ ಊರ್ದ್ವ ಮುಖವಾಗಿ ಕ್ರಿಯಾಶೀಲತೆಗೆ ಬರುತ್ತದೆ. ಹಾಗಾಗಿ ಈ ಸಮಯದಲ್ಲಿ ಮಲ ವಿಸರ್ಜನೆ ಆಗದೆ ಇದ್ದರೆ ಹೊಟ್ಟೆಯಲ್ಲಿರುವ ಟ್ಯಾಕ್ಸಿಕ್ ಮೇಲ್ಮುಖವಾಗಿ ಬಂದರೆ ಅದು ಆರೋಗ್ಯಕ್ಕೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಷಟ್ ಕ್ರಿಯೆಗಳಲ್ಲಿ ಧೌತಿ, ನೇತಿ ಕ್ರಿಯೆಗಳನ್ನು ಮಾಡಿದ ಮೇಲೆ ಕಪಾಲಭಾತಿ ಮಾಡಬೇಕು ಎಂದು ಹೇಳುತ್ತಾರೆ. ಧೌತಿ ಎಂದರೆ ನೀರನ್ನು ಕುಡಿದು ನಾಲಿಗೆ ಮೇಲೆ ಬೆರಳಿಟ್ಟು ವಾಂತಿ ಮಾಡುವುದು. ಇದರಿಂದ ಪಿತ್ತ ಮತ್ತು ವಾತ ಶುದ್ದಿಯಾಗುತ್ತದೆ. ನೇತಿ ಎಂದರೆ ಜಲನೀತಿ, ದುಗ್ಧ ನೀತಿ, ಗ್ರಥ ನೀತಿ, ರಬ್ಬರ್ ನೀತಿ ಮತ್ತು ಸೂತ್ರ ನೀತಿ ಈ ರೀತಿ ಅನೇಕ ನೀತಿಗಳು ಬರುತ್ತದೆ. ಇದು ಹೇಗೆಂದರೆ ಒಂದು ಮೂಗಿನಲ್ಲಿ ನೀರು ಹಾಕಿ ಅದನ್ನು ಇನ್ನೊಂದು ಮೂಗಿನಿಂದ ತೆಗೆಯುವುದು.

WhatsApp Group Join Now
Telegram Group Join Now
See also  ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ

ಇದನ್ನೇ ಜಲ ನೀತಿ ಎಂದು ಕರೆಯುತ್ತಾರೆ. ಇಷ್ಟೆಲ್ಲಾ ಮಾಡಿದಾಗ ಮೂಗಿನ ಭಾಗವೂ ಕೂಡ ಶುದ್ಧಿಯಾಗಿರುತ್ತದೆ. ಕರುಳಿನ ಭಾಗ ಹಾಗೂ ಲಿವರ್ ಬಾಗ ಕೂಡ ಶುದ್ಧಿಯಾಗಿರುತ್ತದೆ. ಇದೆಲ್ಲ ಆದ ಬಳಿಕ ಪ್ರಾಣಯಾಮದ ಷಟ್ ಕ್ರಿಯ ಮುಂದಿನ ಭಾಗವಾದ ಕಪಾಲಭಾತಿಯನ್ನು ಪ್ರಾರಂಭ ಮಾಡಬೇಕು. ಈ ರೀತಿ ಆರಂಭಿಸದೆ ಸರಿಯಾದ ಮಾಹಿತಿ ತಿಳಿದುಕೊಳ್ಳದೆ ಅರ್ಧಂಬರ್ಧ ಮಾಹಿತಿ ತಿಳಿದು ಕಪಾಲಭಾತಿ ಪ್ರಾಣಾಯಾಮ ಮಾಡುವುದರಿಂದ ಯಾವುದೇ ರೀತಿಯ ಫಲಿತಾಂಶಗಳು ಕೂಡ ಸಿಗುವುದಿಲ್ಲ. ಅದಕ್ಕೆ ಹೇಳುವುದು ಪ್ರಾಣಾಯಾಮವನ್ನು ಸರಿಯಾಗಿ ತಿಳಿದು ಮಾಡಿದರೆ ಅದು ಪ್ರಾಣಾಯಾಮ ಆಗುತ್ತದೆ. ಇಲ್ಲವಾದಲ್ಲಿ ಕೊಂಚ ಹೆಚ್ಚು ಕಮ್ಮಿ ಆದರೂ ಕೂಡ ಈ ಪ್ರಾಣಾಯಾಮ ಕ್ರಿಯೆಯಲ್ಲಿ ಆಗುವ ತಪ್ಪಿನಿಂದ ಪ್ರಾಣಕ್ಕೆ ಯಮ ಅಂದರೆ ಸಂಚಕಾರ ತಂದುಕೊಳ್ಳಬೇಕಾಗುತ್ತದೆ. ಹೀಗಾಗಿ ಸಾವಿರ ರೋಗಗಳಿಗೆ ಔಷಧಿ ಆಗಿರುವ ಈ ಕಪಾಲಭಾತಿಯನ್ನು ಸರಿಯಾಗಿ ಮಾಡುವ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋ ಪೂರ್ತಿಯಾಗಿ ನೋಡಿ.

[irp]


crossorigin="anonymous">