ಬಿಗ್ ಬಾಸ್ ಮನೆಯ ಕ್ಯಾಮೆರಾಗಳ ಬಗ್ಗೆ ನೀವು ಅರಿಯದ ಎಷ್ಟೋ ವಿಷಯಗಳು.ಈ ಸೋನಿ ಕ್ಯಾಮೆರಾಗಳು ಮಾಡೋ ಅದ್ಬುತ ಕೆಲಸ ನೋಡಿ » Karnataka's Best News Portal

ಬಿಗ್ ಬಾಸ್ ಮನೆಯ ಕ್ಯಾಮೆರಾಗಳ ಬಗ್ಗೆ ನೀವು ಅರಿಯದ ಎಷ್ಟೋ ವಿಷಯಗಳು.ಈ ಸೋನಿ ಕ್ಯಾಮೆರಾಗಳು ಮಾಡೋ ಅದ್ಬುತ ಕೆಲಸ ನೋಡಿ

ಬಿಗ್ ಬಾಸ್ ಮನೆಯ ಕ್ಯಾಮೆರಾಗಳ ಬಿಗ್ ಸೀಕ್ರೆಟ್ ನೋಡಿ…ಬಿಗ್ ಬಾಸ್ ಮನೆ ಮನೆ ತುಂಬಾ ಕ್ಯಾಮೆರಾ ತುಂಬಿರುವ ಮನೆಯಿಂದ ಹೇಳಬಹುದು. ಒಂದು ಕ್ಯಾಮೆರಾ ಎದುರಿಸಲು ಚಟಪಡಿಸುವ ಸಾಮಾನ್ಯರಿಗೆ ಈ ರೀತಿ ಸುತ್ತಲೂ ಕ್ಯಾಮೆರಾ ಇಟ್ಟು ಆಟ ಆಡಿಸುವ ಬಿಗ್ ಆಟವೇ ಬಿಗ್ ಬಾಸ್ ಆಟ. ಬಿಗ್ ಬಾಸ್ ಮನೆ ಅಲ್ಲಿರುವ ಕ್ಯಾಮೆರಾ ಗಳಿಂದಲೇ ಹೆಚ್ಚು ಖ್ಯಾತಿ ಆಗಿದೆ ಎಂದರೆ ತಪ್ಪಾಗಲಾರದು. ಈಗಾಗಲೇ ಕನ್ನಡದಲ್ಲಿ ಬಿಗ್ ಬಾಸ್ 9ನೇ ಆವತ್ತಿ ಅಲ್ಲಿದೆ ಈ ಬಾರಿಯ ಬಿಗ್ ಬಾಸ್ ಸೀಸನ್ ನ ಬಗ್ಗೆ ಹೇಳುವುದಾದರೆ ಈ ಸಲವು ಕೂಡ ಪ್ರತಿಬಾರಿಯಂತೆ ಮನೆಯ ಗೋಡೆಗಳಲ್ಲೆಲ್ಲಾ ಕ್ಯಾಮರಾ ಮೌಂಟ್ ಮಾಡಲಾಗಿದೆ, ಕನ್ನಡಿಗಳಲ್ಲಿ ಹಾಗೂ ಟೇಬಲ್ ಮೇಲೆ ಇಡಲಾಗಿದೆ. ಕ್ಯಾಮೆರಾಗಳ ಬಗ್ಗೆ ಆಸಕ್ತಿ ಉಳ್ಳವರಿಗೆ ಇದು ಯಾವ ಮಾಡೆಲ್ ಕ್ಯಾಮೆರಾ ಇರಬಹುದು ಎನ್ನುವ ಕುತೂಹಲ ಉಂಟಾಗಿರುತ್ತದೆ. ಅದರ ಬೆಲೆಯು ಕೂಡ ಹೆಚ್ಚಿನ ಜನರ ತಲೆ ಕೆಡಿಸಿರಬಹುದು.

ಈ ಬಾರಿಯ ಬಿಗ್ ಬಾಸ್ ಸೀಸನ್ ಸೂಕ್ಷ್ಮವಾಗಿ ನೋಡಿದರೆ ಇದರಲ್ಲಿರುವ ಹಲವು ಕ್ಯಾಮರಾ ಗಳನ್ನು ಕಳೆದ ಬಾರಿಯ ಸೀಸನ್ ಅಲ್ಲೂ ಕೂಡ ಬಳಸಿದ್ದಾರೆ ಎನ್ನುವುದು ಅರಿವಿಗೆ ಬರುತ್ತದೆ. ಇದರ ಬಗ್ಗೆ ಆಸಕ್ತಿ ಹೊಂದಿ ಅದನ್ನು ಗಮನಿಸಿರುವವರ ಹೇಳಿಕೆ ಪ್ರಕಾರ ಬಿಗ್ ಬಾಸ್ ಅಲ್ಲಿ ಬಳಸುವ ಎಲ್ಲಾ ಕ್ಯಾಮರಗಳು ಕೂಡ ಸೋನಿ ಕ್ಯಾಮರಾ ಮಾಡೆಲ್ ರೀತಿಯೇ ಇದೆ. ಆದರೆ ಮನೆಯಲ್ಲಿರುವ ಯಾವುದೇ ಕ್ಯಾಮೆರಾ ನೋಡಿದರೂ ಕೂಡ ಯಾವ ಕ್ಯಾಮರ ಮೇಲು ಬ್ರಾಂಡಿನ ಹೆಸರು ಇರುವುದಿಲ್ಲ ಅದರ ಹೆಸರನ್ನು ತೆಗೆದು ಕ್ಯಾಮೆರಾ ಗಳನ್ನು ಜೋಡಿಸಲಾಗಿದೆ. ಸೋನಿ ಬಿ ಆರ್ ಸಿ ಎಚ್ 800 ಎನ್ನುವ ಕ್ಯಾಮರಾವನ್ನು ಬಿಗ್ ಬಾಸ್ ಮನೆಯ ಡೈನಿಂಗ್ ಟೇಬಲ್ ಮೇಲೆ ಇಟ್ಟಿದ್ದಾರೆ. ಅದರ ಸ್ಟ್ರಕ್ಚರ್ ಗಮನಿಸಿದರೆ ಇದು ಸೋನಿ ಮಾಡೆಲ್ ಕ್ಯಾಮರವೇ ಎನ್ನುವುದು ಪಕ್ಕ ಆಗುತ್ತದೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ಕಳೆದ ಬಾರಿಯ ಸೀಸನ್ ಅಲ್ಲಿ ಕೂಡ ಇದೆ ಕ್ಯಾಮೆರಾ ಅನ್ನು ಟೇಬಲ್ ಮೇಲೆ ಇಟ್ಟಿದ್ದರು. ಇದನ್ನು ಸೀಮೋ ಸೆನ್ಸರ್ ಎಂದು ಕೂಡ ಕರೆಯುತ್ತಾರೆ ಅಂದರೆ ಅರ್ಧ ಇಂಚು ಸೆನ್ಸರ್ ಅನ್ನು ಈ ಕ್ಯಾಮೆರಾ ಹೊಂದಿದೆ. ಫುಲ್ ಎಚ್ ಡಿ ಅಲ್ಲಿ ವಿಡಿಯೋ ರೆಕಾರ್ಡ್ ಮಾಡಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಅವರು ಉಪಯೋಗಿಸುತ್ತಿರುವುದು ಕೂಡ ಫುಲ್ ಎಚ್ ಡಿ ವೇರಿಯಂಟ್, 4K ವೇರಿಯಂಟ್ ಕೂಡ ಇದರಲ್ಲಿ ಬರುತ್ತದೆ. ಈ ಮನೆ ಇರುವ ಎಲ್ಲಾ ಕ್ಯಾಮರಗಳು ಕೇವಲ ಎರಡೇ ಎರಡು ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ಬಳಸುವ ಮೊಬೈಲ್ ಫೋನ್ ಗಳೇ 108 ಎಂಪಿ ಮತ್ತು 200 ಎಂಪಿ ಗಳಷ್ಟು ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಫೋನ್ ಗಳಾಗಿವೆ. ಆದರೆ ಈ ಎರಡು ಎಂಪಿ ಕ್ಯಾಮೆರಾ ಇವರೇಕೆ ಬಳಸುತ್ತಿದ್ದಾರೆ ಎನ್ನುವುದೇ ಆಶ್ಚರ್ಯ ಆಗಿದೆ. ಅದರ ಬಗ್ಗೆ ಪೂರ್ತಿ ಮಾಹಿತಿ ಹಾಗೂ ಬಿಗ್ ಬಾಸ್ ಮನೆಯ ಕ್ಯಾಮೆರಾ ಕುರಿತು ಇನ್ನಷ್ಟು ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

[irp]


crossorigin="anonymous">