ಕಾಂತಾರ ಸಿನಿಮಾದಲ್ಲಿ ಬರುವ ಈ ಪಂಜುರ್ಲಿ ಯಾರು ಗೊತ್ತಾ ? ಧರ್ಮಸ್ಥಳದ ಹುಟ್ಟಿಗೆ ಕಾರಣವಾದ ಈ ದೈವದ ಶಕ್ತಿ ಎಂತದ್ದು ನೋಡಿ. - Karnataka's Best News Portal

ಕಾಂತಾರಾ ಸಿನಿಮಾದಲ್ಲಿ ಬರುವ ಪಂಜುರ್ಲಿಯ ಅಸಲಿ ಕಥೆ ಗೊತ್ತಾ ? ಶಿವನೇ ಕೊಂದು ಮರು ಜೀವ ಕೊಟ್ಟಿದ್ದೇಕೆ ?
ಕಾಂತಾರ ಈ ಹೆಸರು ಕೇಳಿದ ಕೂಡಲೇ ಅದೇನೋ ಭಕ್ತಿ ಭಾವ ಮೂಡುತ್ತದೆ ಕಾಂತಾರ ಅನ್ನುವುದು ಈಗ ಕೇವಲ ಸಿನಿಮಾ ಆಗಿ ಉಳಿದಿಲ್ಲ ಅದು ಸಿನಿ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ ಚಿತ್ರರಂಗದ ಇತಿಹಾಸದಲ್ಲಿಯೇ ಶೇಕಡ 99 ರಷ್ಟು ಮಂದಿ ಇಷ್ಟ ಪಟ್ಟ ಸಿನಿಮಾವೇ ಇರಲಿಲ್ಲ ಆದರೆ ಕಾಂತಾರ ಈ ವಿಚಾರದಲ್ಲಿ ಚರಿತ್ರೆಯನ್ನು ಸೃಷ್ಟಿಸಿದೆ ಈ ಸಿನಿಮಾ ವನ್ನು ನೋಡಿಕೊಂಡು ಬಂದಂತಹ 99 ರಷ್ಟು ಮಂದಿಗೆ ಸಿನಿಮಾ ಇಷ್ಟ ಆಗಿದೆ ಈ ಸಿನಿಮಾ ದೊಡ್ಡ ಮಟ್ಟಕ್ಕೆ ಗೆದ್ದಿದೆ ಅಂದರೆ ಇದೇ ಸಾಕ್ಷಿ ಕಾಂತಾರಾ ಅನ್ನುವ ಸಿನಿಮಾ ಚಿತ್ರರಂಗದ ಇತಿಹಾಸದಲ್ಲಿಯೇ ಎಂದಿಗೂ ನೆನಪಿಡುವ ಸಿನಿಮಾ 200 300 ವರ್ಷ ಕಳೆದರೂ ಇತಿಹಾಸವನ್ನು ಒಮ್ಮೆ ತೆಗೆದು ನೋಡಿದಾಗ ಅಲ್ಲಿ ಕಾಂತರಾ ಎನ್ನುವ ಹೆಸರು ಮೊದಲ ಸ್ಥಾನದಲ್ಲಿ ಇರುತ್ತದೆ.

ಕಾಂತಾರ ಸಿನಿಮಾದಲ್ಲಿ ಕರಾವಳಿಯ ಸಂಸ್ಕೃತಿಯನ್ನು ಮತ್ತು ಅಲ್ಲಿಯ ದೈವಾರಾದನೆಯನ್ನು ತೋರಿಸಲಾಗಿದೆ ಅದರಲ್ಲೂ ಪಂಜುರ್ಲಿ ದೈವ ಈ ಸಿನಿಮಾವನ್ನೇ ಆವರಿಸಿದೆ ಕಾಂತಾರಾ ಸಿನಿಮಾದಲ್ಲಿ ಪಂಜುರ್ಲಿ ದೈವದ ಆಚರಣೆ ಮತ್ತು ಅದರ ಶಕ್ತಿ ಏನು ಎಂಬುದನ್ನು ತೋರಿಸಲಾಗಿದೆ ಈ ಪಂಜುರ್ಲಿ ದೈವದ ಹಿಂದೆಯೂ ಕೂಡ ಒಂದು ಕಥೆ ಇದೆ ಈ ಪಂಜುರ್ಲಿ ದೈವದ ಸ್ಥಾನವನ್ನು ಪಡೆದದ್ದು ಹೇಗೆ ಎಂಬುದನ್ನು ಈ ಕೆಳಗಿನಂತೆ ನೋಡೋಣ. ಕರಾವಳಿ ಕರ್ನಾಟಕವನ್ನು ತುಳುನಾಡು ಎಂದು ಕರೆಯುತ್ತಾರೆ ತುಳು ನಾಡು ತನ್ನ ವಿಶಿಷ್ಟ ಆಚರಣೆ ಸಂಸ್ಕೃತಿಗೆ ಹೆಸರುವಾಸಿ ಅದರಲ್ಲೂ ತುಳುನಾಡಿನಲ್ಲಿ ಇರುವ ದೈವರಾಧನೆ ಭಾರತೀಯ ಸಂಸ್ಕೃತಿಯಲ್ಲಿಯೇ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ ತುಳುನಾಡಿನಲ್ಲಿ ದೈವರಾಧನೆಗೆ ತನ್ನದೇ ಆದ ಮಹತ್ವ ಇದೆ.

ಅದರಲ್ಲಿ ಜನರ ನಂಬಿಕೆ ಅಡಗಿದೆ ಮತ್ತು ತುಳುನಾಡಿ ನಲ್ಲಿ 10 ಹಲವು ದೈವಗಳು ಇವೆ ಅದರಲ್ಲಿ ಕಾಂತಾರ ದಲ್ಲಿ ತೋರಿಸಿರುವಂತಹ ಪಂಜುರ್ಲಿ ಕೂಡ ಒಂದು ಪಂಜುರ್ಲಿ ತುಳುನಾಡಿನ ದೈವಗಳಲ್ಲಿ ಪ್ರಧಾನ ಸ್ಥಾನದಲ್ಲಿರುವ ದೈವ ತುಳುವಿನ ಈ ಪಂಜಿ ಎಂದರೆ ಕನ್ನಡದಲ್ಲಿ ಹಂದಿ ಎಂದರ್ಥ ಇದೇ ಹಂದಿ ಈಶ್ವರನ ಕೃಪೆಯಿಂದಾಗಿ ದೈವವಾಗಿ ತುಳುನಾಡಿಗೆ ಬರುತ್ತದೆ ಪಾರ್ವತಿ ದೇವಿಯ ಇಚ್ಛೆಯ ಅನುಸಾರವಾಗಿ ಈಶ್ವರ ದೇವರು ಒಂದು ಕಾಡನ್ನು ಕಟ್ಟುತ್ತಾರೆ ಇದನ್ನು ದೇವರ ಕಾಡು ಎಂದು ಕರೆಯಲಾಗುತ್ತದೆ ಇದೇ ಕಾಡಿನಲ್ಲಿ ಈಶ್ವರ ದೇವರು ಬೇಟೆಗೆ ಎಂದು ಹೋಗುತ್ತಾರೆ ಈ ರೀತಿ ಬೇಟೆಗೆ ಎಂದು ಹೋಗಿದ ಸಂದರ್ಭದಲ್ಲಿ ಹಂದಿ ಮತ್ತು ಹಂದಿಯ ಮರಿಗಳು ಕಾಣಿಸುತ್ತದೆ ದೊಡ್ಡ ದೊಡ್ಡ ಹಂದಿಗಳು ಪೊದೆಯನ್ನು ಸೇರಿಕೊಳ್ಳುತ್ತವೆ ಆದರೆ ಪುಟ್ಟ ಪುಟ್ಟ ಹಂದಿ ಮರಿಗಳು ಮಾತ್ರ ನಿಂತುಕೊಂಡು ನೋಡುತ್ತಿರುತ್ತವೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *