ಪ್ರತಿಭಾವಂತ ನಟರಾದ ಕಿಶೋರ್ ರವರನ್ನು ಕನ್ನಡ ಚಿತ್ರರಂಗ ಮರೆತೆ ಹೋಯ್ತಾ ? ಕೃಷಿ ಬಿಟ್ಟು ಬರದ ಈ ಕಿಶೋರ್ ಎಂತವರು ಗೊತ್ತಾ ? - Karnataka's Best News Portal

ಪ್ರತಿಭಾವಂತ ನಟರಾದ ಕಿಶೋರ್ ಅವರನ್ನು ಕನ್ನಡ ಚಿತ್ರರಂಗ ಮರೆತೇ ಹೋಯ್ತಾ||ವಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನದ ಕಾಂತಾರ ಚಿತ್ರವು ರಾಜ್ಯಾದ್ಯಂತ ಹೆಚ್ಚಿನ ಯಶಸ್ಸನ್ನು ಗಳಿಸಿದೆ ಈ ಚಿತ್ರದಲ್ಲಿ ನಟ ರಿಷಬ್ ಅವರ ನಟನೆಯ ಜೊತೆ ಚಿತ್ರದ ಯಶಸ್ಸಿಗೆ ನಟ ಕಿಶೋರ್ ಅವರ ಅರಣ್ಯ ಅಧಿಕಾರಿಯ ಪಾತ್ರವೂ ಸಹ ಇಂಬು ಕೊಟ್ಟಿದೆ ಅದೇ ಖಡಕ್ ಧ್ವನಿ ಹಾಗೂ ಕಂಚಿನ ಕಂಠದ ನಟನೆ ಯಲ್ಲಿ ಕಿಶೋರ್ ತಮ್ಮ ಪಾತ್ರದಲ್ಲಿ ಅಕ್ಷರಶಃ ಇಲ್ಲಿ ಜೀವಿಸಿದ್ದಾರೆ ಹಾಗಾದರೆ ಇಲ್ಲಿ ನಾವು ಕಿಶೋರ್ ಅವರು ನಡೆದು ಬಂದಂತಹ ಹಿನ್ನೆಲೆಯನ್ನು ಈ ಕೆಳಗಿ ನಂತೆ ತಿಳಿದುಕೊಳ್ಳೋಣ. ಯಶಸ್ವಿ ಚತುರ್ಭಾಷಾ ನಟರಾದಂತಹ ಕಿಶೋರ್ ಅವರು ಸಿನಿಮಾದ ಜೊತೆ ಒಕ್ಕಲುತನವನ್ನು ಕೂಡ ಮೈಗೂಡಿಸಿಕೊಂಡವರು ಕೃಷಿಯ ಬಗ್ಗೆ ಹಾಗೂ ಬೇಸಾಯದ ಬಗ್ಗೆ ಅವರ ಬದುಕಿನಲ್ಲಿ ಇರುವ ಕಾಳಜಿ ಹಾಗೂ ವಿಶ್ವಾಸ ನಿಜಕ್ಕೂ ಶ್ಲಾಘನೀಯವಾದದ್ದು.

ಮೂಲತಹ ಬೆಂಗಳೂರಿನವರೇ ಆದಂತಹ ಕಿಶೋರ್ ಜನಿಸಿದ್ದು ಚನ್ನಪಟ್ಟಣದಲ್ಲಿ 1974ರ ಆಗಸ್ಟ್ 14ರಂದು ಅಲ್ಲಿನ ಅನುಕೂಲಸ್ತ ಮನೆತನದಲ್ಲಿ ಜನಿಸಿದಂತಹ ಇವರ ತಂದೆ ಕಾಲೇಜ್ ಶಿಕ್ಷಕರಾಗಿದ್ದವರು ಚನ್ನಪಟ್ಟಣ ದಿಂದ ಮುಂದೆ ಕಾರಣಾಂತರಗಳಿಂದ ಕಿಶೋರ್ ಅವರ ಪರಿವಾರ ಸ್ಥಳಾಂತರ ವಾಗುತ್ತದೆ ಅವರ ಆರಂಭಿಕ ಜೀವನ ಹಾಗೂ ಬಾಲ್ಯ ಶಿಕ್ಷಣವೆಲ್ಲ ನೆರವೇರಿದ್ದು ಕುಣಿಗಲ್ ನಲ್ಲಿ ಸಿನಿಮಾದಲ್ಲಿ ಗಟ್ಟಿ ದ್ವನಿಯಲ್ಲಿ ಕ್ರೂರ ನೋಟದಲ್ಲಿ ನಟಿಸಿ ಅಬ್ಬರಿಸಿದ ಕಿಶೋರ್ ಚಿಕ್ಕ ವಯಸ್ಸಿನಲ್ಲಿ ಬಹಳ ಸಂಕೋಚ ಸ್ವಭಾವದ ಹುಡುಗ ರಾಗಿದ್ದವರು ಮಿತ ಭಾಷೆಯಾದ ಅವರಿಗೆ ಕಲಿಕೆಯಲ್ಲಿ ಬಹಳ ಆಸಕ್ತಿ ಇತ್ತು ಅವರ ನಂತರದ ವಿದ್ಯಾಭ್ಯಾಸ ವೆಲ್ಲ ಕುಣಿಗಲ್ ಹಾಗೂ ನಾಗಮಂಗಲದಲ್ಲಿ ಮುಗಿಯುತ್ತದೆ ತದನಂತರ ಬೆಂಗಳೂರಿಗೆ ಅವರು ಬಂದ ಮೇಲೆ ಇಲ್ಲಿ ಎ ಯು ನ್ಯಾಷನಲ್ ಕಾಲೇಜ್ ನಲ್ಲಿ ಕಿಶೋರ್ ಅವರು ತಮ್ಮ ಪದವಿಯನ್ನುಮುಗಿಸುತ್ತಾರೆ.

ಅವರ ಪದವಿಯ ಹೊಸ್ತಿಲಲ್ಲಿ ಇದ್ದಾಗಲೇ ಅವರಿಗೆ ನಟನೆಯ ಗೀಳು ಶುರುವಾಗುತ್ತದೆ ಇಲ್ಲಿ ನಡೆಯುತ್ತಿದ್ದಂತಹ ರಂಗ ತಂಡಗಳ ಜೊತೆ ಸೇರಿ ಇಲ್ಲಿ ಸಣ್ಣ ಪುಟ್ಟ ನಾಟಕಗಳಲ್ಲಿ ಅಭಿನಯ ಮಾಡಲು ಆರಂಭಿಸುತ್ತಾರೆ. ತೆರೆಗಳು ಸಾಮ್ರಾಟ ಅಶೋಕ ಮುಂತಾದವು ಅವರು ಮಾಡಿದ ಪ್ರಮುಖ ನಾಟಕಗಳು ಇದರ ಜೊತೆ ಕನ್ನಡ ಸಾಹಿತ್ಯದಲ್ಲಿಯೂ ಸಹ ಹೆಚ್ಚಿನ ಅಭಿರುಚಿ ಇದ್ದಿದ್ದರಿಂದ ಬೆಂಗಳೂರು ವಿವಿಯಲ್ಲಿ ಅವರು ಕನ್ನಡ ಸಾಹಿತ್ಯದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಸಹ ಪೂರೈಸುತ್ತಾರೆ ಕಿಶೋರ್ ತಮ್ಮ ಕಾಲೇಜು ದಿನಗಳಲ್ಲಿಯೇ ತಮ್ಮ ಜೂನಿಯರ್ ವಿದ್ಯಾರ್ಥಿನಿಯಾಗಿದ್ದಂತಹ ವಿಶಾಲಾಕ್ಷಿ ಎಂಬುವವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಕಿಶೋರ್ ಅವರು ತಮ್ಮ ನಟನೆಯ ಜೊತೆ ತಾವು ನಂಬಿರುವಂತಹ ಭೂಮಿಯನ್ನು ಯಾವುದೇ ಕಾರಣ ಕ್ಕೂ ಬಿಟ್ಟಿಲ್ಲ ಬದಲಾಗಿ ವ್ಯವಸಾಯ ಮಾಡುವುದು ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *