ಕನ್ನಡ ಸಿನಿಮಾಗಳು ಅಂದ್ರೆ ಮೂಗು ಮುರಿಯುತ್ತಿದ್ದ ಜನಗಳ ಎದುರು ಭಾರತ ಮಾತ್ರವಲ್ಲದೆ ಜಗತ್ತಿನ ಎದುರು ಕನ್ನಡ ಚಿತ್ರಗಳ ತಾಕತ್ ತೋರಿಸಿದ ಹೊಂಬಾಳೆ ಫಿಲಂಸ್ ನ ಮಾಲೀಕ ಯಾರು ಗೊತ್ತಾ ? » Karnataka's Best News Portal

ಕನ್ನಡ ಸಿನಿಮಾಗಳು ಅಂದ್ರೆ ಮೂಗು ಮುರಿಯುತ್ತಿದ್ದ ಜನಗಳ ಎದುರು ಭಾರತ ಮಾತ್ರವಲ್ಲದೆ ಜಗತ್ತಿನ ಎದುರು ಕನ್ನಡ ಚಿತ್ರಗಳ ತಾಕತ್ ತೋರಿಸಿದ ಹೊಂಬಾಳೆ ಫಿಲಂಸ್ ನ ಮಾಲೀಕ ಯಾರು ಗೊತ್ತಾ ?

ಕನ್ನಡ ಸಿನಿಮಾ ತಾಖತ್ ಅನ್ನು ಈ ಜಗತ್ತಿಗೆ ಹರಡಿದ ಆ ವ್ಯಕ್ತಿ ಯಾರು??ಸಿನಿಮಾ ಒಂದು ಮಗು ನಿರ್ಮಾಣ ಮತ್ತು ನಿರ್ಮಾಣ ಸಂಸ್ಥೆ ಅದರ ಪೋಷಕರಿದ್ದ ಹಾಗೆ ಯಾವುದೇ ಸಿನಿಮಾ ಜನಿಸುವುದಕ್ಕೆ ಅದರ ಕಥೆಗಾರ ಕಲಾವಿದರು ನಿರ್ದೇಶಕನಷ್ಟೇ ಒಬ್ಬ ನಿರ್ಮಾಪಕನೂ ಕೂಡ ಕಾರಣ ನಾಗುತ್ತಾನೆ ಒಂದು ಸಿನಿಮಾ ವೈಭವದಿಂದ ತಯಾರಾಗಬೇಕು ಎಂದರೆ ಅದರ ನಿರ್ಮಾಪಕರ ಉದಾರತೆ ಕಾರಣವಾಗಿ ನಿಲ್ಲುತ್ತದೆ ಕನ್ನಡದ ಮಾರ್ಕೆಟ್ ಚಿಕ್ಕದು ಬೇರೆ ಭಾಷೆಯ ಚಿತ್ರೋದ್ಯಮಕ್ಕೆ ಹೋಲಿಸಿದರೆ ಕನ್ನಡದ ವ್ಯಾಪ್ತಿ ಅಷ್ಟು ವಿಶಾಲವಾಗಿ ಇಲ್ಲ ಎಂಬ ವಾಡಿಕೆ ಈ ಹಿಂದಿನಿಂದಲೂ ರೂಢಿಯಲ್ಲಿ ಇತ್ತು ಹಾಗಾಗಿಯೇ ಕನ್ನಡ ಚಿತ್ರಗಳು ಹೆಚ್ಚಾಗಿ ಪರ ಭಾಷೆಯವರಿಗೆ ತಲುಪುವುದು ಕಷ್ಟವಾಗಿತ್ತು ಆದರೆ ಈ ಎಲ್ಲಾ ಅಡೆತಡೆಗಳನ್ನು ದಾಟಿ ಇವತ್ತು ಕನ್ನಡ ಚಿತ್ರಗಳನ್ನು ರಾಜ್ಯ ದೇಶ ಮಾತ್ರವಲ್ಲದೆ ಖಂಡಗಳ ಆಚೆಯೂ ಕೂಡ ವಿಸ್ತಾರ ಮಾಡಿದಂತಹ ಖ್ಯಾತಿ ನಮ್ಮ ಕನ್ನಡದ ಟಾಪ್ ಟ್ರೆಂಡಿಂಗ್ ನಿರ್ಮಾಣ ಸಂಸ್ಥೆ ಆದಂತಹ ಹೊಂಬಾಳೆ ಫಿಲಂಸ್ ಗೆ ಸಲ್ಲುತ್ತದೆ.

ಕೆಜಿಎಫ್ ಕಾಂತಾರದಂತಹ ಚಿತ್ರಗಳನ್ನು ಪ್ರೊಡ್ಯೂಸ್ ಮಾಡಿ ಇವತ್ತು ಕನ್ನಡ ಮಾತ್ರವಲ್ಲದೆ ಸುತ್ತ ಇರುವಂತ ಹ ಚಿತ್ರೋದ್ಯಮಗಳನ್ನು ಕೂಡ ಸೆಳೆಯುತ್ತಿರುವಂತಹ ಬಹು ಬೇಡಿಕೆ ನಿರ್ಮಾಣ ಸಂಸ್ಥೆ ಆದಂತಹ ಹೊಂಬಾಳೆ ಫಿಲಂಸ್ ನ ರೋಚಕ ಹಿನ್ನೆಲೆ ಹಾಗೂ ಅದರ ಸಾಧನೆಯ ಬಗ್ಗೆ ಈ ದಿನ ನಾವು ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ ಹಲವು ಚಿತ್ರಗಳನ್ನು ಇವರು ನಿರ್ಮಿಸಿ ಇವರು ಕೆಜಿಎಫ್ ಚಿತ್ರದ ಮೂಲಕ ಜಗತ್ ವಿಕ್ಯಾತಿಯನ್ನು ಪಡೆದಂತಹ ಹೊಂಬಾಳೆ ಫಿಲಂಸ್ ಅನ್ನು ಬೆಂಗಳೂರಿನ ಉದ್ಯಮಿ ಆದಂತಹ ಶ್ರೀ ವಿಜಯ್ ಕಿರಂಗದೂರು ಅವರು 2012ರಲ್ಲಿ ಮೊದಲ ಬಾರಿಗೆ ಸ್ಥಾಪನೆ ಮಾಡಿದರು ಈ ಹೊಂಬಾಳೆ ಫಿಲಂಸ್ ನ ಅಡಿಯಲ್ಲಿ ಮೊಟ್ಟಮೊದಲ ಬಾರಿಗೆ ನಿರ್ಮಾಣ ಆದ ಸಿನಿಮಾ ಯಾವುದು ಎಂದರೆ ಅದು 2014ರಲ್ಲಿ ನಮ್ಮ ಪುನೀತ್ ರಾಜಕುಮಾರ್ ಅವರ ಅಭಿನಯದ ನಿನ್ನಿಂದಲೇ ಸಿನಿಮಾದಿಂದ ಪ್ರಾರಂಭವಾಗುತ್ತದೆ.

WhatsApp Group Join Now
Telegram Group Join Now
See also  ಇದನ್ನು ಕೇವಲ 7% ಜನರಿಂದ ಮಾತ್ರ ಮಾಡಲು ಸಾಧ್ಯ..ಕೇವಲ 25 ಸೆಕೆಂಡ್ ನ ಈ ಮೆದುಳು ಪರೀಕ್ಷೆ ತೆಗೆದುಕೊಳ್ಳಿ..ನಿಮ್ಮ ಬುದ್ದಿವಂತಿಕೆ ಪರೀಕ್ಷಿಸಿ..

ಅವರ ಮುಂದಿನ ಸಾಹಸ 2015ರಲ್ಲಿ ಯಶ್ ಅವರ ನಟಿಸಿದ ಮಾಸ್ಟರ್ ಪೀಸ್ ಸಿನಿಮಾ ಇನ್ನು ಅವರ ಮೂರನೇ ಸಿನಿಮಾವೇ ರಾಜಕುಮಾರ ಸಿನಿಮಾ ಈ ಒಂದು ಸಿನಿಮಾವನ್ನು ಸಂತೋಷ್ ಆನಂದ್ ರಾಮ್ ಎನ್ನುವವರು ನಿರ್ದೇಶನ ಮಾಡಿದ್ದು ಆವತ್ತು ಆ ಸಮಯದಲ್ಲಿ ಹೆಚ್ಚು ಗಳಿಕೆಯನ್ನು ಮಾಡಿದಂತಹ ಕನ್ನಡ ಚಲನಚಿತ್ರ ಎಂಬ ಖ್ಯಾತಿ ಕೂಡ ಈ ಒಂದು ಚಿತ್ರಕ್ಕೆ ಸಿಗುತ್ತದೆ ಈ ಸಿನಿಮಾ ಸುಮಾರು 70 ಕೋಟಿ ಗಿಂತಲೂ ಹೆಚ್ಚು ಗಳಿಸಿದಂತಹ ಚಿತ್ರ ಎಂದು ವರದಿ ಯಾಗಿತ್ತು ಹಾಗೂ ಕರ್ನಾಟಕ ಬಾಕ್ಸ್ ಆಫೀಸ್ ನಲ್ಲಿ 75 ಕೋಟಿ ರೂಪಾಯಿಯನ್ನು ಗಳಿಸಿ ಇಂಡಸ್ಟ್ರಿಯಲ್ಲಿ ಹಿಟ್ ಆದಂತಹ ಮೊದಲ ಚಿತ್ರ ಎಂಬ ಹೆಗ್ಗಳಿಕೆ ಕೂಡ ಇದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">