ವಿನೋದ್ ಹೆಸರಿಗೆ ರಾಜ್ ಎಂಬ ಹೆಸರು ಸೇರಿಸಿದ್ದು ಯಾಕೆ ಗೊತ್ತಾ? ದ್ವಾರಕೀಶ್ ಕೊಟ್ಟ ಈ ಉತ್ತರ ಕೇಳಿದ್ರೆ ನಿಜಕ್ಕೂ ಬೆರಗಾಗಿ ಹೋಗ್ತಿರಾ..! » Karnataka's Best News Portal

ವಿನೋದ್ ಹೆಸರಿಗೆ ರಾಜ್ ಎಂಬ ಹೆಸರು ಸೇರಿಸಿದ್ದು ಯಾಕೆ ಗೊತ್ತಾ? ದ್ವಾರಕೀಶ್ ಕೊಟ್ಟ ಈ ಉತ್ತರ ಕೇಳಿದ್ರೆ ನಿಜಕ್ಕೂ ಬೆರಗಾಗಿ ಹೋಗ್ತಿರಾ..!

ವಿನೋದ್ ಹೆಸರಿಗೆ ರಾಜ್ ಎಂಬ ಹೆಸರು ಸೇರಿಸಿದ್ದು ಯಾಕೆ ಗೊತ್ತ.? ದ್ವಾರಕೀಶ್ ಕೊಟ್ಟ ಈ ಉತ್ತರ ಕೇಳಿದ್ರೆ ನಿಜಕ್ಕೂ ಬೆರಗಾಗಿ ಹೊಗ್ತೀರಾ.ಕನ್ನಡದ ಕುಳ್ಳ ನಾಗಿ ಜನರನ್ನು ಮನೋರಂಜಸಿರುವ ದ್ವಾರಕೀಶ್ ಅವರು ನಮ್ಮ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಅಂದಿನ ಸಮಯದಿಂದಲೂ ದುಡಿದಿರುವ ಕಲಾವಿದ. ಅವರು ಹಾಸ್ಯ ನಟನಾಗಿ ಮಾತ್ರವಲ್ಲದೆ ನಿರ್ಮಾಪಕನಾಗಿ ಮತ್ತು ನಿರ್ದೇಶನಕ್ಕಾಗಿ ಕೂಡ ಕನ್ನಡ ಚಿತ್ರರಂಗ ಕಟ್ಟುವಲ್ಲಿ ತಮ್ಮ ಸೇವೆ ಮಾಡಿದ್ದಾರೆ. ಕನ್ನಡದಲ್ಲಿ ಪುಟ್ಟಣ್ಣ ಕಣಗಾಲ್ ಅವರನ್ನು ಬಿಟ್ಟರೆ ಹೊಸ ಪ್ರತಿಭೆಗಳನ್ನು ತಂದು ಪರಿಚಿಸುವುದರಲ್ಲಿ ದ್ವಾರಕೀಶ್ ಅವರು ಹೆಸರುವಾಸಿ. ಇವರಿಂದಲೇ ಸುನಿಲ್ ಶೃತಿ ವಿನೋದ್ ರಾಜ್ ಇನ್ನೂ ಮುಂತಾದ ಅನೇಕ ಕಲಾವಿದರು ಇಷ್ಟು ಬೆಳೆಯಲು ಸಾಧ್ಯವಾಯಿತು. ಪುಟ್ಟಣ್ಣ ಕಣಗಾಲ್ ಅವರು ಕಲ್ಪನಾ ಆರತಿ ವಿಷ್ಣುವರ್ಧನ್ ಅಂಬರೀಶ್ ಪದ್ಮವಸಂತಿ ಶ್ರೀನಾಥ್ ಮುಂತಾದ ಪ್ರತಿಭೆಗಳನ್ನು ಗುರುತಿಸಿದ ನಿರ್ದೇಶಕ. ಪುಟ್ಟಣ್ಣ ಕಣಗಾಲ್ ಅವರಿಗೆ ಬಹಳ ಆತ್ಮೀಯರಾಗಿದ್ದ ದ್ವಾರಕೀಶ್ ಅವರು ಸಿನಿಮಾ ಸಂಬಂಧಪಟ್ಟ ಹಾಗೆ ಹಲವು ವಿಷಯಗಳನ್ನು ಅವರಿಂದ ಕಲಿತ್ತಿದ್ದಾರಂತೆ.

ಅದೇ ಫಾರ್ಮುಲಾ ಉಪಯೋಗಿಸಿಕೊಂಡು ದ್ವಾರಕೀಶ್ ಅವರು ಶ್ರುತಿ ಸಿನಿಮಾದಲ್ಲಿ ಸುನಿಲ್ ಹಾಗೂ ಶೃತಿ ಅವರನ್ನು ಪರಿಚಯಿಸಿದರಂತೆ, ಆ ಸಿನಿಮಾ ದೊಡ್ಡಮಟ್ಟದ ಹಿಟ್ ಕೂಡ ಆಯಿತು. ಹಾಡುಗಳು ಸೂಪರ್ ಆಗಿ ಹೆಸರು ಮಾಡಿದವು ಮದ್ರಾಸಿನಲ್ಲಿ ದ್ವಾರಕೀಶ್ ಅವರ ನಿವಾಸದ ಬಳಿಗೆ ವಾಸಿಸುತ್ತಿದ್ದ ಲೀಲಾವತಿ ಅವರು ದ್ವಾರಕೀಶ್ ಅವರ ಮನೆಯ ಸಮಾರಂಭಗಳಿಗೆ ಬರುವಾಗ ವಿನೋದ್ ರಾಜ್ ಅವರನ್ನು ಸಹ ಜೊತೆಯಲ್ಲಿ ಕರೆ ತರುತ್ತಿದ್ದರಂತೆ. ಆ ಸಮಯದಲ್ಲಿ ಹುಡುಗನಾಗಿದ್ದ ವಿನೋದ್ ರಾಜ್ ಅವರು ಎಲ್ಲರ ಜೊತೆ ಸೇರಿ ಹಾಡಿ ಕುಣಿಯುತ್ತಿದ್ದರಂತೆ. ಇವರ ಡ್ಯಾನ್ಸ್ ಮೋಡಿಗೆ ಬೆರಗಾದ ದ್ವಾರಕೀಶ್ ಅವರ ತಲೆಯಲ್ಲಿ ಡ್ಯಾನ್ಸಿಗೆ ಸಂಬಂಧಪಟ್ಟ ಸ್ಕ್ರಿಪ್ಟ್ ಒಂದು ಓಡುತ್ತಿತ್ತಂತೆ. ಅವರು ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿಮಾಗೆ ವಿನೋದ್ ರಾಜ್ ಅವರನ್ನೇ ಹಾಕಿಕೊಳ್ಳುವ ನಿರ್ಧಾರ ಮಾಡಿದರಂತೆ. ಅಲ್ಲದೆ ಅವರು ಆ ಸಿನಿಮಾ ಮಾಡುವಾಗಲೇ ವಿನೋದ್ ರಾಜ್ ಅವರ ಹೆಸರು ಅದೇ ರೀತಿ ಇತ್ತಂತೆ.

WhatsApp Group Join Now
Telegram Group Join Now
See also  ನೀವು ಕೋಟ್ಯಾಧಿಪತಿಗಳಾಗುವುದು ಗ್ಯಾರೆಂಟಿ ಅಂಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಹೇಳಿಕೊಳ್ಳಿ...ಚಮತ್ಕಾರ ನಡೆಯುತ್ತದೆ..

ಈ ಬಗ್ಗೆ ಇತ್ತೀಚಿಗೆ ಸಂದರ್ಶನ ಒಂದರಲ್ಲಿ ವಿಷಯ ಹಂಚಿಕೊಂಡ ದ್ವಾರಕೀಶ್ ಅವರು ಯಾರು ನನ್ನ ಮೇಲೆ ಏನು ಬೇಕಾದರೂ ಆರೋಪ ಮಾಡಲಿ ಅಥವಾ ಏನಾದರೂ ಹೇಳಲಿ ನಾನು ಮಾಡಿದ್ದು ಇಷ್ಟೇ ಅದು ಹೇಗಿತ್ತು ಹಾಗೆ ನಾನು ಹೆಸರು ಕೊಟ್ಟಿದ್ದೇನೆ ಅಷ್ಟೇ ಎಂದು ಉತ್ತರಿಸಿದ್ದಾರೆ. ಹಾಗೂ ಸಂದರ್ಶನಕಾರರು ಲೀಲಾವತಿ ಅವರ ಪತಿ ಅಂದರೆ ವಿನೋದ್ ರಾಜ್ ಅವರ ತಂದೆಯ ಬಗ್ಗೆ ನಿಮಗೆ ಪರಿಚಯ ಇದೆ ಎಂದು ಕೇಳಿದಾಗ ಭಾಗವತ ಅವರನ್ನು ಹರಿಶ್ಚಂದ್ರ ಸಮಯದಲ್ಲಿ ನಾನು ನೋಡಿದ್ದೆ ಆಗ ನಾನು ಇನ್ನು ಬಹಳ ಚಿಕ್ಕವ ಹಾಗೂ ಅಷ್ಟೇನೂ ಹೆಸರು ಮಾಡಿರಲಿಲ್ಲ ಹಾಗಾಗಿ ದೂರದಿಂದ ನೋಡಿದ ನೆನಪು ಇದೆ ಅಷ್ಟೇ ಅವರನ್ನು ನಡುವೆ ಯಾವುದೇ ರೀತಿ ಸಣ್ಣ ಮಾತಿಕತೆಯು ಸಹ ನಡೆದಿಲ್ಲ ಎಂದಿದ್ದಾರೆ.

[irp]


crossorigin="anonymous">