ಕಾಂತಾರ ದೈವ ಪರೀಕ್ಷೆ ಮಾಡಲು ಹೋಗಿ ರಕ್ತ ಕಕ್ಕಿ ಸತ್ತ ಯುವಕ.ಕೊರಗಜ್ಜ ಮಾಡಿದ ನೈಜ ಪವಾಡವೇನು... - Karnataka's Best News Portal

ಕಾಂತಾರ ದೈವ ಪರೀಕ್ಷೆ ಮಾಡಲು ಹೋಗಿ ರಕ್ತ ಕಕ್ಕಿ ಸತ್ತ ಯುವಕ.ಕೊರಗಜ್ಜ ಮಾಡಿದ ನೈಜ ಪವಾಡವೇನು…

ಕಾಂತಾರದ ದೈವ ಪರೀಕ್ಷೆ ಮಾಡಲು ಹೋಗಿ ರಕ್ತ ಕಕ್ಕಿ ಸತ್ತ ಯುವಕ!!ಕಾಂತಾರ ಚಿತ್ರಕ್ಕೆ ಸಿನಿ ಪ್ರೇಮಿಗಳು ಮನಸ್ಸು ಸೋತಿದ್ದಾರೆ ರಿಷಬ್ ಶೆಟ್ಟಿ ಅವರ ಅಮೋಘ ನಿರ್ದೇಶನ ಮತ್ತು ನಟನೆಗೆ ಜನ ಬಹುಪರಾಕ್ ಎಂದು ಶ್ಲಾಘಿಸುತ್ತಿದ್ದಾರೆ ಈ ಚಿತ್ರ ಕೇವಲ ಚಿತ್ರ ಅಲ್ಲ ಅದೊಂದು ವಿಶಿಷ್ಟವಾದ ಅನುಭವ ಎಂದು ಈ ಚಿತ್ರವನ್ನು ನೋಡಿದಂತಹ ಪ್ರೇಕ್ಷಕರು ಬಹಳ ಉದ್ಘಾರ ವೆದ್ದಿದ್ದಾರೆ ಕಾಂತಾರ ಚಿತ್ರದಲ್ಲಿ ತುಳುನಾಡಿನ ಜನತೆ ಯ ನಂಬಿಕೆಯ ಪಂಜುರ್ಲಿ ದೈವ ಮತ್ತು ಗುಳಿಗ ದೈವದ ಕಾರ್ಣಿಕವನ್ನು ಬಿಂಬಿಸಲಾಗಿದೆ ಕಾಂತಾರ ಚಿತ್ರವು ದೈವಾರಾದನೆಯನ್ನು ಮಾಡುವ ಪ್ರತಿಯೊಬ್ಬ ನಲ್ಲಿಯೂ ಭಯ ಭಕ್ತಿಯನ್ನು ಉದ್ದಿಪನಗೊಳಿಸುತ್ತದೆ ತುಳುನಾಡಿನ ಭಾಗಶಹ ಎಲ್ಲಾ ಮನೆ ಮನಗಳಲ್ಲೂ ಆವರಿಸಿರುವಂತಹ ಪಂಜುರ್ಲಿ ಗುಳಿಗ ದೇವದ ದೈವಾನ್ವಿತ ಶಕ್ತಿ ಯನ್ನು ಕಾಂತಾರ ಚಿತ್ರದಲ್ಲಿ ಅದ್ಭುತ ವಾಗಿ ತಿಳಿಸಲಾಗಿದೆ. ನಂಬಿದವರನ್ನು ಬಿಡದೆ ಮತ್ತು ಅವರ ಇಷ್ಟಗಳನ್ನು ಪೂರೈಸುವ ಪಂಜುರ್ಲಿ ದೈವಕ್ಕೆ ತುಳುನಾಡಿನಲ್ಲಿ ಅಪಾರ ಗೌರವವಿದೆ.

ಕುಟುಂಬದಲ್ಲಿ ಇರುವಂತಹ ಯಜಮಾನನ ಸ್ಥಾನವನ್ನು ಪಂಜುರ್ಲಿ ದೈವಕ್ಕೆ ನೀಡಲಾಗುತ್ತದೆ ಮತ್ತು ಪಂಜುರ್ಲಿಯ ದೈವವನ್ನು ಮನೆಯ ಚಾವಡಿಯಲ್ಲಿ ಅಥವಾ ಮನೆ ಒಳಗೆ ಮನೆ ಮಂಚ ಮಾಡಿ ದೈವದ ಬಿಂಬ ಮಾಡಿ ಪೂಜಿಸಲಾಗುತ್ತದೆ ಗುಳಿಗ ದೈವ ರೋಷ ಆವೇಷದ ಅಂಶವಾಗಿದ್ದು ಮನೆಯ ಹೊರಗಡೆ ಗೂಟದ ರೂಪದಲ್ಲಿ ಕಲ್ಲಿನಲ್ಲಿ ಆರಾಧಿಸಲಾಗುತ್ತದೆ ಮನೆಯಲ್ಲಿ ಪಂಜುರ್ಲಿ ದೈವ ರಕ್ಷಣೆ ಮಾಡಿದರೆ ಮನೆಗೆ ಸೇರಿದ ಪ್ರದೇಶವನ್ನು ಕ್ಷೇತ್ರ ಪಾಲಕನಾಗಿ ಗುಳಿಗ ದೈವ ಕಾಪಾಡುತ್ತಾನೆ ಎನ್ನುವ ನಂಬಿಕೆ ಜನರಲ್ಲಿ ಇದೆ ಹೀಗೆ ಕಾಂತಾರ ಚಿತ್ರದಲ್ಲಿ ತುಳುನಾಡಿನ ಸಂಸ್ಕೃತಿ ಮತ್ತು ಅಲ್ಲಿನ ದೈವರಾಧ ನೆಯ ಬಗ್ಗೆ ಮತ್ತು ದೈವಗಳ ಶಕ್ತಿ ಏನು ಎಂಬುದನ್ನು ಕೂಡ ಈ ಚಿತ್ರದಲ್ಲಿ ತೋರಿಸಲಾಗಿದೆ.

WhatsApp Group Join Now
Telegram Group Join Now
See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು

ಇನ್ನು ಕುಟುಂಬದ ದೈವವಾಗಿ ಊರಿನ ದೈವವಾಗಿ ಗ್ರಾಮದ ಪ್ರಧಾನದೈವವಾಗಿ ಪಂಜುರ್ಲಿ ದೈವ ಆರಾಧನೆಯನ್ನು ಪಡೆಯುತ್ತಾ ಬಂದಿದೆ ಕುಟುಂಬ ದೊಳಗಿನ ವ್ಯಾಜ್ಯವನ್ನು ಸಮಸ್ಯೆಗಳನ್ನು ಪಂಜುರ್ಲಿ ದೈವ ಪೂಜೆ ನಡೆಯುವ ಸಮಯದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಸಮಸ್ಯೆಯನ್ನು ಬಗೆಹರಿಸಿದ ಸಾವಿರಾರು ಉದಾಹರಣೆಗಳನ್ನು ನಾವು ತುಳುನಾಡಿನ ಭಾಗದಲ್ಲಿ ನೋಡಬಹುದು. ನ್ಯಾಯಾಲಯದಲ್ಲಿಯೂ ಕೂಡ ಬಗೆಹರಿಯದಂತಹ ತೀರ್ಮಾನಗಳು ಪಂಜುರ್ಲಿ ದೈವದ ಮುಖಾಂತರ ಬಗೆಹರಿದಂತಹ ಎಷ್ಟೋ ಘಟನೆ ಗಳು ತುಳುನಾಡಿನಲ್ಲಿ ಕಾಣಸಿಗುತ್ತದೆ ಕಷ್ಟದಲ್ಲಿದ್ದಾಗ ನೆರವಾಗುವ ತಪ್ಪಿ ನಡೆದಾಗ ಎಚ್ಚರಿಸುವ ಸದಾ ಕಾಯುವ ನಂಬಿಗಸ್ತ ದೈವವಾಗಿ ಪಂಜುರ್ಲಿ ದೈವಾರಾಧಕರ ಮನಸ್ಸಿನಲ್ಲಿ ನೆಲೆಯಾಗಿದೆ.ಹಾಗೂ ತುಳುನಾಡಿನಲ್ಲಿ ಕೊರಗಜ್ಜ ಎನ್ನುವ ಹೆಸರೇ ಅಲ್ಲಿ ಒಂದು ಕಾರ್ಣಿಕ ಶಕ್ತಿಯಾಗಿ ನಿಂತಿದೆ ಎಂದು ಹೇಳಿದರೆ ಅದು ತಪ್ಪಾಗುವುದಿಲ್ಲ ನಂಬಿದವರನ್ನು ಯಾವುದೇ ಕಾರಣಕ್ಕೂ ಕೈ ಬಿಡದಂತಹ ಕೊರಗಜ್ಜನನ್ನು ಯಾರಾದರೂ ಅಲ್ಲಗಳೆದರೆ ಅವರು ಅಲ್ಲಿಗೆ ರಕ್ತ ಕಕ್ಕಿ ಸಾಯುತ್ತಾರೆ ಎಂದು ಎಷ್ಟೋ ಜನ ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">