ಈ ಬಾರಿಯ ಗ್ರಹಣ ಯಾವ ಸಮಯದಲ್ಲಿ ಜರುಗುತ್ತೆ ಗ್ರಹಣದ ದಿನ ನಡೆಯುವ ಘಟನೆ ಏನು ಗೊತ್ತಾ ? ಗ್ರಹಣದ ದಿನ ಮರೆತೂ ಸಹ ಈ ತಪ್ಪುಗಳನ್ನು ಮಾಡಬೇಡಿ - Karnataka's Best News Portal

ಸೂರ್ಯ ಗ್ರಹಣ ಅಕ್ಟೋಬರ್ 25 2022ದೀಪಾವಳಿಯ ಅಮಾವಾಸ್ಯೆಯಂದು ನಡೆಯುತ್ತಿರು ವಂತಹ ಈ ಸೂರ್ಯ ಗ್ರಹಣವು ಯಾವ ಸಮಯಕ್ಕೆ ಶುರುವಾಗುತ್ತದೆ ಮತ್ತು ಯಾವ ಸಮಯಕ್ಕೆ ಮುಕ್ತಾಯವಾಗುತ್ತದೆ ಹಾಗೂ ಸೂರ್ಯ ಗ್ರಹಣದಲ್ಲಿ ಯಾವ ಯಾವ ವಿಧಿ ವಿಚಾರಗಳನ್ನು ನಾವು ಅನು ಸರಿಸಬೇಕು ಎಂಬುದರ ಹಲವಾರು ವಿಷಯಗಳನ್ನು ಈ ದಿನ ನಾವು ತಿಳಿದುಕೊಳ್ಳುತ್ತಾ ಹೋಗೋಣ. 25ನೇ ತಾರೀಖು ದೀಪಾವಳಿ ಅಮಾವಾಸ್ಯೆ ಇದ್ದು ಆ ಹಬ್ಬಕ್ಕೆ ಸೂತಕ ಎನ್ನುವುದರಂತೆ ಈ ಗ್ರಹಣ ಬಂದಿರು ವಂಥದ್ದು ಹಾಗಂತ ಇದು ಗ್ರಹಣದ ತಪ್ಪು ಎಂದು ಹೇಳಲು ಆಗುವುದಿಲ್ಲ ಯಾವಾಗಲೂ ಪೌರ್ಣಮಿ ಮತ್ತು ಅಮಾವಾಸ್ಯೆ ಯಂದೇ ಈ ಗ್ರಹಣಗಳು ಸಂಭವಿಸುವಂಥದ್ದು ಹಾಗಾಗಿ ಅಮಾವಾಸ್ಯೆಯ ದಿನ ಸೂರ್ಯಗ್ರಹಣ ಸಂಭವಿಸಿದರೆ ಪೌರ್ಣಮಿಯ ದಿನ ಚಂದ್ರ ಗ್ರಹಣ ಸಂಭವಿಸುತ್ತದೆ ಯಾಕೆ ಎಂದರೆ ಸೂರ್ಯ ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬರುವಂತದ್ದು ಹಾಗಾಗಿ ಆ ದಿನಗಳಲ್ಲಿ ಮಾತ್ರವೇ ಸೂರ್ಯ ಗ್ರಹಣ ಚಂದ್ರ ಗ್ರಹಣ ಉಂಟಾಗುತ್ತದೆ.

ಈ ಹಿಂದೆಯೂ ಅಂದರೆ ಏಪ್ರಿಲ್ 30 ನೇ ತಾರೀಖಿ ನಂದು ಸಹ ಸೂರ್ಯಗ್ರಹಣ ಸಂಭವಿಸಿತ್ತು ಆಗ ಅದು ನಮ್ಮ ಭಾರತದಲ್ಲಿ ಗೋಚರ ವಿಲ್ಲದ ಕಾರಣ ಅದರ ಬಗ್ಗೆ ಯಾರೂ ಗಮನವನ್ನು ಕೊಡಲಿಲ್ಲ ಮತ್ತು ತಲೆಕೆಡಿಸಿಕೊಳ್ಳುವಂತಹ ಅವಶ್ಯಕತೆಯೂ ಇರಲಿಲ್ಲ ಆದರೆ ಈಗ ಸಂಭವಿಸುತ್ತಿರುವoತಹ ಸೂರ್ಯ ಗ್ರಹಣವು ನಮ್ಮ ಭಾರತದಲ್ಲಿ ಗೋಚರಿಸಲಿದ್ದು ಆ ಸಮಯದಲ್ಲಿ ಆಚರಣೆಯ ವಿಧಿ ವಿಧಾನಗಳು ಹೇಗಿರಬೇಕು ಅದರಲ್ಲೂ ಹಬ್ಬದ ದಿನ ಬಂದಿರುವುದ ರಿಂದ ಹಬ್ಬವನ್ನು ಮಾಡಬೇಕ ಮಾಡಬಾರದ ಹೀಗೆ ಹಲವಾರು ಪ್ರಶ್ನೆಗಳು ಎಲ್ಲರಲ್ಲಿಯೂ ಮೂಡುತ್ತಿದೆ ಹಾಗೂ ಇದರ ಬಗ್ಗೆ ಈ ಕೆಳಗಿನಂತೆ ಕೆಲವೊಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.ಅನೇಕ ಮನೆಗಳಲ್ಲಿ ಗ್ರಹಣದ ಹಿಂದಿನ ದಿನ ಮಾಡಿದಂತಹ ಆಹಾರಗಳನ್ನು ಗ್ರಹಣ ಮುಗಿದ ಬಳಿಕ ಅದನ್ನು ತಿನ್ನುವುದಿಲ್ಲ ಬದಲಾಗಿ ಆಚೆ ಹಾಕುತ್ತಾರೆ.

ಇನ್ನೂ ಕೆಲವರು ಮನೆಯಲ್ಲಿ ಇರುವಂತಹ ನೀರನ್ನು ಕೂಡ ಉಪಯೋಗಿಸುವುದಿಲ್ಲ ನಂತರ ಅದನ್ನು ಗ್ರಹಣ ಮುಗಿದ ಬಳಿಕ ಎಲ್ಲವನ್ನು ಆಚೆ ಹಾಕಿ ಹೊಸ ನೀರನ್ನು ಸಂಗ್ರಹಣೆ ಮಾಡಿಕೊಂಡು ಅದನ್ನು ಉಪಯೋಗಿಸುತ್ತಾರೆ ಹೀಗೆ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಒಂದೊಂದು ವಿಧಾನವನ್ನು ಅನುಸರಿಸುತ್ತಿರುತ್ತಾರೆ ಹಾಗಾದರೆ ಯಾವ ಕಾರಣ ಕ್ಕಾಗಿ ಈ ಎಲ್ಲ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಬಹಳ ಪ್ರಮುಖವಾದಂತಹ ಅಂಶವಾಗಿದೆ ಅದರಲ್ಲೂ ಗ್ರಹಣದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಹಿಂದಿನ ದಿನದ ಆಹಾರವನ್ನು ಸೇವನೆ ಮಾಡಬಾರದು ಯಾಕೆ ಎಂದರೆ ಗ್ರಹಣ ನಡೆಯುವಂತಹ ಸಮಯ ದಲ್ಲಿ ಸೂರ್ಯನಿಂದ ಬರುವಂತಹ ಕಿರಣಗಳು ಸೂಕ್ಷ್ಮಾತಿ ಸೂಕ್ಷ್ಮ ಜೀವಕೋಶಗಳನ್ನು ನಾಶಪಡಿಸಿರು ತ್ತದೆ ಅಂದರೆ ಆ ಆಹಾರವು ಹಾಳಾಗಿರುತ್ತದೆ ಆದ್ದರಿಂದ ಅದನ್ನು ಸೇವಿಸಿದರೆ ನಮ್ಮ ಆರೋಗ್ಯ ಹಾಳಾಗುತ್ತದೆ ಎಂಬ ಉದ್ದೇಶದಿಂದ ಆಹಾರವನ್ನು ಸೇವಿಸಬಾರದು ಎಂದು ಎಲ್ಲರೂ ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *