ಮಕ್ಕಳ ಜಾತಕದಲ್ಲಿ ಈ ರೀತಿ ದೋಷಗಳು ಇರಬಾರದು..ತಂದೆ ತಾಯಿಗೆ ದಾರಿದ್ರ್ಯ ಬರುತ್ತೆ.. ಒಳ್ಳೆಯದಲ್ಲ ಎಷ್ಟೋ ಜನರಿಗೆ ಇದು ಗೊತ್ತಿಲ್ಲ.. - Karnataka's Best News Portal

ಮಕ್ಕಳ ಜಾತಕದಲ್ಲಿ ಈ ರೀತಿ ಇದ್ದಾಗ ತಂದೆ ತಾಯಿಗೆ ದಾರಿದ್ರ್ಯ ಬರುತ್ತದೆ||ಮನೆಯಲ್ಲಿ ಅಮಾವಾಸ್ಯೆಯ ದಿನ ಮಗು ಏನಾದರೂ ಹುಟ್ಟಿದರೆ ಅದರಿಂದ ಏನಾದರೂ ತೊಂದರೆ ಆಗುತ್ತದೆ ಹಾಗೂ ಆ ತೊಂದರೆಗಳು ಯಾವುವು ಹೀಗೆ ಈ ವಿಷಯಕ್ಕೆ ಸಂಬಂಧಪಟ್ಟಂತಹ ಕೆಲವೊಂದಷ್ಟು ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತಹ ಅಂಶ ಏನು ಎಂದರೆ ಈ ಹುಟ್ಟು ಸಾವು ಎನ್ನುವುದು ಯಾವುದೇ ಕಾರಣಕ್ಕು ನಮ್ಮ ಕೈಯಲ್ಲಿ ಇರುವುದಿಲ್ಲ ಬದಲಾಗಿ ಎಲ್ಲಾ ಭಗವಂತನ ಇಚ್ಛೆಯಂತೆ ನಡೆಯುತ್ತಿರುತ್ತದೆ ಆದ್ದರಿಂದ ನಾವು ಅವುಗಳನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಆದರೂ ಕೂಡ ಕೆಲವೊಂದಷ್ಟು ವಿಷಯಗಳ ಬಗ್ಗೆ ಕೆಲವೊಂದು ಸಂಕಲ್ಪಗಳು ಕೂಡ ಇರುತ್ತದೆ ಅದರಂತೆಯೇ ಜನನ ವು ಇರುತ್ತದೆ ಅದು ಏನು ಎಂದರೆ ಅಮಾವಾಸ್ಯೆಯ ದಿನ ಮಗು ಜನಿಸಿದರೆ ತಂದೆ ತಾಯಿಗೆ ದೋಷ ಬರುತ್ತದೆ ಎಂದು ಶಾಸ್ತ್ರ ತಿಳಿಸುತ್ತದೆ.

ಯಾಕೆ ಈ ರೀತಿ ಹೇಳುತ್ತಾರೆ ಎಂದರೆ ಸೂರ್ಯ ಮತ್ತು ಚಂದ್ರ ಒಂದೇ ರಾಶಿಯಲ್ಲಿ ಇರುತ್ತಾರೆ ಅಂದರೆ ಚಂದ್ರ ಮತ್ತು ಸೂರ್ಯ ಅಮಾವಾಸ್ಯೆಯ ದಿನ ಒಂದೇ ಮನೆಯಲ್ಲಿ ಸ್ತಿತನಾಗಿ ಇರುತ್ತಾನೆ ಇದರಿಂದ ಆ ಮಗುವಿನ ತಂದೆ ತಾಯಿಗಳಿಗೆ ದಾರಿದ್ರ್ಯ ದೋಷ ಎನ್ನುವುದು ಬರುತ್ತದೆ ಇದರಿಂದ ಅವರಿಗೆ ನಾನಾ ರೀತಿಯಾದಂತಹ ಕೆಲಸಗಳಲ್ಲಿ ನಷ್ಟವಾಗಬಹುದು ಇದರಿಂದ ಅವರಿಗೆ ಹಣಕಾಸಿನಲ್ಲಿ ಹಲವಾರು ರೀತಿಯ ತೊಂದರೆಗಳು ಕಾಣಿಸಿಕೊಳ್ಳಬಹುದು ಮತ್ತು ಆಸ್ತಿ ವಿಚಾರದಲ್ಲಿ ಏನಾದರೂ ಭೂಮಿ ಮನೆಯನ್ನು ಕಳೆದುಕೊಳ್ಳುವಂತಹ ಸನ್ನಿವೇಶಗಳು ಕೂಡ ಎದುರಾಗಬಹುದು ಹೀಗೆ ನಾನಾ ರೀತಿಯಾದಂತಹ ಕೆಲಸ ಕಾರ್ಯಗಳು ಎಲ್ಲದರಲ್ಲಿಯೂ ಕೂಡ ನಷ್ಟವನ್ನು ಅನುಭವಿಸುವಂತಹ ಸನ್ನಿವೇಶಗಳು ಎದುರಾಗುತ್ತದೆ.

ಆದ್ದರಿಂದ ತಂದೆ ತಾಯಿಗಳು ಮಗು ಹುಟ್ಟಿದ 10 ದಿನದ ಬಳಿಕ ಅಂದರೆ 10 ದಿನಗಳ ತನಕ ಯಾವುದೇ ರೀತಿಯಾದಂತಹ ಶುಭ ಕಾರ್ಯಗಳನ್ನು ಮಾಡುವು ದಿಲ್ಲ ಬದಲಾಗಿ ಆ ಸಮಯದಲ್ಲಿ ಮನೆ ಎಲ್ಲವನ್ನು ಶುದ್ಧೀಕರಣ ಮಾಡಿ ನಂತರ 10 ದಿನದ ಮೇಲೆ ಆ ಮಗು ಹುಟ್ಟಿದ ಸಮಯವನ್ನು ಮತ್ತು ದಿನವನ್ನು ತಿಳಿಸಿ ಶಾಸ್ತ್ರವನ್ನು ಕೇಳಿ ಅದಕ್ಕೆ ಕೆಲವೊಂದಷ್ಟು ಪೂಜೆ ಹೋಮಗಳನ್ನು ಮಾಡಿಸುವುದು ಉತ್ತಮ ಇದರಿಂದ ದೋಷವನ್ನು ಸದ್ಯದಲ್ಲಿಯೇ ತೆಗೆದು ಹಾಕುವಂತೆ ಸಹಾಯ ಮಾಡುತ್ತದೆ ಇಲ್ಲವಾದರೆ ಜೀವನದುದ್ದಕ್ಕೂ ಇನ್ನೂ ಹೆಚ್ಚಿನ ಸಮಸ್ಯೆಯನ್ನು ಮತ್ತು ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ಹುಟ್ಟಿದ ಮಗುವಿನ ದಿನಾಂಕ ಸಮಯ ಗಳಿಗೆ ಎಲ್ಲವನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಕೆಲವೊಬ್ಬರು ಮಗುವನ್ನು ಈ ಸಮಯದಲ್ಲಿ ಹುಟ್ಟಿದ್ದು ಎಂದು ದೂಷಿಸುತ್ತಾರೆ ಆದರೆ ಅದು ಮಗುವಿನ ತಪ್ಪು ಅಲ್ಲ ತಂದೆ-ತಾಯಿಗಳು ಮಾಡಿದಂತಹ ಕರ್ಮಫಲದಿಂದಾಗಿ ಆ ಮಗು ಆ ಸಮಯದಲ್ಲಿ ಜನಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *