ಆಂಧ್ರದಲ್ಲಿ ಯಶ್ ತೆಲುಗು ಮಾಡಿದ್ರು ಆದರೆ ರಿಷಬ್ ಶೆಟ್ಟಿ ಏನು ಮಾಡಿದ್ರು..??ಇತ್ತೀಚೆಗೆ ತೆರೆ ಕಂಡಂತಹ ಕಾಂತಾರ ಸಿನಿಮಾವು ಕನ್ನಡ ಚಿತ್ರದಲ್ಲಿ ದೊಡ್ಡ ದಾಖಲೆಯನ್ನು ಬರೆದಿದೆ ಎಂದು ಹೇಳಿದರೆ ತಪ್ಪಾಗಲಾರದು ಇದುವರೆಗೆ ಯಾರು ಕೂಡ ಈ ರೀತಿಯಾದಂತಹ ದೈವದ ಬಗ್ಗೆ ಸಿನಿಮಾವನ್ನು ತೆಗೆದಿರಲಿಲ್ಲ ಅದರಲ್ಲಿಯೂ ತುಳುನಾಡಿನ ದೇವರು ಗಳ ಬಗ್ಗೆ ಯಾವುದೇ ರೀತಿಯಾದಂತಹ ಚಿತ್ರಗಳನ್ನು ಮಾಡಿರಲಿಲ್ಲ ಆದರೆ ಇಂತಹ ಸಾಹಸವನ್ನು ಈ ದಿನ ರಿಷಬ್ ಶೆಟ್ಟಿ ಅವರು ಮಾಡಿದ್ದಾರೆ ಹೌದು ನಮ್ಮ ಕನ್ನಡದಲ್ಲಿ ಇರುವಂತಹ ನಟರಾಗಿರುವಂತಹ ಇವರು ಹಲವಾರು ಚಿತ್ರಗಳಲ್ಲಿ ನಟನಾಗಿ ಮಾಡಿದ್ದು ಹಾಗೂ ಇವರೇ ಕೆಲವೊಂದು ಸಿನಿಮಾವನ್ನು ನಿರ್ದೇಶನ ಮಾಡಿ ಅದರಿಂದ ಮುಂದೆ ಬಂದಂತಹ ಇವರು ಈಗ ಕಾಂತಾರ ಎಂಬ ಸಿನಿಮಾವನ್ನು ತೆಗೆದಿದ್ದು ಈ ಸಿನಿಮಾವು ಭಾರತದಾದ್ಯಂತ ಎಲ್ಲಾ ಕಡೆಯಲ್ಲಿಯೂ ಕೂಡ ಹೆಚ್ಚಿನ ಹೆಸರನ್ನು ಪಡೆದುಕೊಳ್ಳುತ್ತಿದೆ.
ಹಾಗೂ ಈ ಸಿನಿಮಾವನ್ನು ಮೊದಲು ಕನ್ನಡದಲ್ಲಿ ಮಾತ್ರ ಮಾಡಬೇಕು ಎಂದು ರಿಷಬ್ ಶೆಟ್ಟಿ ಅವರು ನಿರ್ಧಾರ ಮಾಡಿದ್ದರು ಅದರಂತೆಯೇ ಕೇವಲ ಕನ್ನಡ ಭಾಷೆಯಲ್ಲಿಯೇ ಮಾತ್ರ ತೆಗೆದಿದ್ದರೂ ಆದರೆ ಈ ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಬಂದಿದ್ದರಿಂದ ಇದನ್ನು ಹಿಂದಿ ತೆಲುಗು ತಮಿಳು ಎಲ್ಲ ಭಾಷೆಗಳಲ್ಲಿಯೂ ಕೂಡ ಡಬ್ಬಿಂಗ್ ಮಾಡಿದ್ದಾರೆ ಅದರಂತೆಯೇ ಮೊದಲನೆಯ ದಾಗಿ ತೆಲುಗು ಭಾಷೆಯಲ್ಲಿ ಈ ಚಿತ್ರ ತೆರೆಕಾಣುತ್ತಿದ್ದು ಅಲ್ಲಿ ಇರುವಂತಹ ತೆಲುಗಿನ ಅಭಿಮಾನಿಗಳು ಕೂಡ ಈ ಚಿತ್ರವನ್ನು ನೋಡುವುದರ ಮೂಲಕ ಧನ್ಯವಾದಗ ಳನ್ನು ಅರ್ಪಿಸಿದ್ದಾರೆ ಹಾಗೂ ಈ ತೆಲುಗು ಭಾಷೆಯಲ್ಲಿ ರಿಲೀಸ್ ಆಗುವುದಕ್ಕೂ ಮೊದಲು ರಿಷಬ್ ಶೆಟ್ಟಿ ಅವರು ತೆಲುಗಿನ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಅಲ್ಲಿ ಅವರು ಮಾತನಾಡುವಾಗ ತೆಲುಗು ಭಾಷೆ ಮತ್ತು ನಮ್ಮ ಕನ್ನಡ ಭಾಷೆಯಲ್ಲಿ ಸ್ವಲ್ಪ ಮಟ್ಟಿಗೆ ಮಾತ್ರ ವ್ಯತ್ಯಾಸವಿದ್ದು ನಾನು ಕನ್ನಡ ಭಾಷೆಯಲ್ಲಿಯೇ ಮಾತನಾಡುತ್ತೇನೆ ಎಂದು ಹೇಳುವುದರ ಮೂಲಕ ನಮ್ಮ ಕನ್ನಡ ಭಾಷೆಗೆ ಇನ್ನು ಹೆಚ್ಚಿನ ಗೌರವವನ್ನು ತಂದುಕೊಟ್ಟಿದ್ದಾರೆ.
ಅದರಂತೆಯೇ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಚಿತ್ರವನ್ನು ಪ್ರತಿಯೊಬ್ಬರೂ ಕೂಡ ನೋಡಿ ಅದರಲ್ಲಿಯೂ ಮಕ್ಕಳಿಗೆ ಈ ಒಂದು ಸಿನಿಮಾವನ್ನು ತೋರಿಸಿ ಏಕೆಂದರೆ ನಮ್ಮ ಸಂಸ್ಕೃತಿಯಲ್ಲಿ ಇರುವಂತಹ ದೈವಗಳು ಮತ್ತು ದೈವಾರಾಧನೆಯ ಬಗ್ಗೆ ಆ ಮಕ್ಕಳಿಗೆ ತಿಳಿಸುವುದು ಪ್ರತಿಯೊಬ್ಬ ತಂದೆ ತಾಯಿಯ ಕರ್ತವ್ಯವಾಗಿದೆ ಆದ್ದರಿಂದ ಇವೆಲ್ಲವೂ ಕೂಡ ಮಕ್ಕಳಿಗೆ ತಿಳಿದರೆ ಮುಂದಿನ ದಿನಗಳಲ್ಲಿ ಅವರಿಗೆ ಬಹಳ ಉತ್ತಮವಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ನಾವು ನಮ್ಮ ಸಂಸ್ಕೃತಿಯನ್ನು ಬಿಡಬಾರದು ಆದ್ದರಿಂದಲೇ ನಾನು ನಮ್ಮ ಸಂಸ್ಕೃತಿಯಲ್ಲಿ ಇರುವಂತಹ ಈ ದೈವರಾಧನೆಯ ಬಗ್ಗೆ ಈ ಒಂದು ಚಿತ್ರವನ್ನು ಮಾಡುವುದರ ಮುಖಾಂತರ ನಾನು ಯಶಸ್ಸನ್ನು ಕಂಡಿದ್ದೇನೆ ಎಂದು ಎಲ್ಲರ ಮುಂದೆ ಹೇಳಿಕೊಳ್ಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.