ದೀಪಾವಳಿ ಅಮವಾಸ್ಯೆ ದಿನ ಈ 3 ವಸ್ತುಗಳ ಮೇಲೆ ದೀಪ ಬೆಳಗಿಸಿದರೆ ಲಕ್ಷ್ಮಿ ಕೃಪೆ ಸಂಕಷ್ಟಗಳು ಕಳೆದು ಅದೃಷ್ಟ ಮನೆಯಲ್ಲಿ ಏನಾಗುತ್ತೆ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ದೀಪಾವಳಿ ಅಮಾವಾಸ್ಯೆಯ ದಿನ ಈ ಮೂರು ವಸ್ತುಗಳ ಮೇಲೆ ದೀಪ ಹಚ್ಚಿದರೆ ಏನು ಪ್ರಯೋಜನ ಗೊತ್ತಾ….?
ಈ ವರ್ಷ ದೀಪಾವಳಿ ಹಬ್ಬದ ದಿನ ಸೂರ್ಯಗ್ರಹಣ ನಡೆಯುತ್ತಿದ್ದು ಅದರಲ್ಲಿಯೂ ಮುಖ್ಯವಾಗಿ ಹಬ್ಬದ ದಿನ ಇದು ಜರಗುತ್ತಿರುವುದರಿಂದ ಹಲವಾರು ರಾಶಿಯವರಿಗೆ ಹಲವಾರು ರೀತಿಯಾದಂತಹ ಬದಲಾವಣೆಗಳನ್ನು ನಾವು ಕಾಣಬಹುದು ಈ ಹಬ್ಬವನ್ನು ಪ್ರತಿಯೊಬ್ಬರೂ ಕೂಡ ತಮ್ಮ ಮನೆಯಲ್ಲಿ ಬಹಳ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ ಅದರಲ್ಲೂ ಮುಖ್ಯವಾಗಿ ಕೆಲವೊಬ್ಬರು ದೀಪಾವಳಿಯ ಅಮಾವಾಸ್ಯೆಯ ದಿನ ಕೆಲವೊಂದಷ್ಟು ಪೂಜೆಗಳನ್ನು ಕೆಲವೊಂದು ವಿಧಿ ವಿಧಾನಗಳನ್ನು ಅನುಸರಿಸಿ ಪೂಜಾ ಕೈoಕರ್ಯಗಳನ್ನು ಮಾಡುತ್ತಿರುತ್ತಾರೆ ಇದರಿಂದ ನಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ತೊಂದರೆ ಸಂಭವಿಸಬಾರದು ಮನೆಯಲ್ಲಿ ಶಾಂತಿ ನೆಮ್ಮದಿ ಇರಬೇಕು ಎಂಬ ಉದ್ದೇಶದಿಂದ ಮನೆಯಲ್ಲಿರುವ ಹೆಣ್ಣು ಮಕ್ಕಳು ಕೆಲವೊಂದಷ್ಟು ಪೂಜಾ ವಿಧಾನವನ್ನು ಅನುಸರಿಸುತ್ತಿರುತ್ತಾರೆ.

ಹಾಗಾದರೆ ದೀಪಾವಳಿಯ ಹಬ್ಬವನ್ನು ಯಾವ ರೀತಿಯಾಗಿ ಆಚರಿಸಬೇಕು ಹಾಗೂ ದೀಪಾವಳಿಯ ಅಮಾವಾಸ್ಯೆಯ ದಿನ ಯಾವ ಒಂದು ವಿಧಾನದಿಂದ ನಮ್ಮಲ್ಲಿರುವಂತಹ ಎಲ್ಲಾ ಕಷ್ಟ ದೋಷಗಳು ಎಲ್ಲ ತೊಂದರೆಗಳನ್ನು ದೂರ ಮಾಡಿಕೊಳ್ಳಬಹುದು ಹಾಗೂ ಆ ತೊಂದರೆಯನ್ನು ದೂರ ಮಾಡಿಕೊಳ್ಳುವುದಕ್ಕೆ ಯಾವ ವಿಧಿ ವಿಧಾನಗಳನ್ನು ಅನುಸರಿಸಬೇಕು ಎಂಬ ಹಲವಾರು ಮಾಹಿತಿಯನ್ನು ಈ ದಿನ ತಿಳಿದು ಕೊಳ್ಳೋಣ ಯಾರೇ ಆದರೂ ತಮ್ಮ ಕಷ್ಟ ದೂರ ಆಗುತ್ತದೆ ಈ ಒಂದು ಕೆಲಸವನ್ನು ಮಾಡುವುದರಿಂದ ಎಂದು ಹೇಳಿದರೆ ಎಲ್ಲರೂ ಕೂಡ ಈ ಕೆಲಸವನ್ನು ಮಾಡುತ್ತಾರೆ ಆದ್ದರಿಂದ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನದಲ್ಲಿ ನಿಮ್ಮ ಮನೆಯಲ್ಲಿ ಅಮಾವಾಸ್ಯೆಯ ದಿನ ಸಂಜೆಯ ಸಮಯ ಮಾಡಿಕೊಳ್ಳಬಹುದಾಗಿದೆ ಹಾಗಾದರೆ ಮೊದಲನೆಯ ದಾಗಿ ಸಂಜೆಯ ಸಮಯ ದೇವರ ಮನೆಯನ್ನು ಶುಚಿಯಾಗಿ ತೊಳೆದು ದೇವರ ಪೂಜೆಯನ್ನು ಮಾಡಬೇಕು ನಂತರ ದೇವರ ಮನೆಯ ಕೆಳಗಿನ ಭಾಗದಲ್ಲಿ ಒಂದು ಪೀಠವನ್ನು ಇಟ್ಟು ಅದರ ಮೇಲೆ ಅರಿಶಿಣ ಹಾಕಿ ಎಲ್ಲಾ ಕಡೆ ಹಚ್ಚಬೇಕು.

ನಂತರ ಅದರ ಮೇಲೆ ಮೂರು ಚಿಕ್ಕ ಚಿಕ್ಕ ರಂಗೋಲಿ ಯನ್ನು ಬಿಡಬೇಕು ನಂತರ ಅದರ ಮೇಲೆ ಮೂರು ವಿಳ್ಯದೆಲೆ ಇಟ್ಟು ಮೊದಲನೆಯ ವೀಳ್ಯದೆಲೆ ಮೇಲೆ ಅಕ್ಕಿ ಎರಡನೆಯ ದರ ಮೇಲೆ ಎಳ್ಳು ಮೂರನೆಯ ವಿಳ್ಯದೆಲೆಯ ಮೇಲೆ ಉಪ್ಪು ಹೀಗೆ ಎಲ್ಲವನ್ನು ಇಟ್ಟು ಮೂರು ದೀಪ ಇಟ್ಟು ಪೂಜೆ ಮಾಡಿ ಕೈ ಮುಗಿಯ ಬೇಕು ಇದರ ಸಂಕೇತ ಏನು ಎಂದರೆ ಅಕ್ಕಿಯ ಮೇಲೆ ಇರುವ ದೀಪವನ್ನು ಹಚ್ಚುವುದರಿಂದ ನಮ್ಮ ಕುಲದೇವರ ಆಶೀರ್ವಾದ ಸಿಗುತ್ತದೆ ಎಳ್ಳಿನ ಮೇಲೆ ಹಚ್ಚುವುದರಿಂದ ಪಿತೃಗಳ ಆಶೀರ್ವಾದ ಸಿಗುತ್ತದೆ ಉಪ್ಪಿನ ಮೇಲೆ ಹಚ್ಚುವುದರಿಂದ ಮನೆಯಲ್ಲಿರುವ ಎಲ್ಲಾ ಕಷ್ಟ ದೂರಾಗಿ ಹಣಕಾಸಿನಲ್ಲಿ ಅಭಿವೃದ್ಧಿ ಯಾಗಲಿ ಎನ್ನುವ ಉದ್ದೇಶದಿಂದ ಉಪ್ಪಿನ ಮೇಲೆ ದೀಪವನ್ನು ಹಚ್ಚಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *