ಸಾವಿರಾರು ಜನಕ್ಕೆ ಕಂತೆ ಕಂತೆ ಹಣ ಇರೋಕೆ ಮನೆ ಓಡಾಡೋಕೆ ಗಾಡಿ ಕೊಡುತ್ತಿರುವ ಈ ಹರ್ಷ ಸಾಯಿಗೆ ಅಷ್ಟು ಹಣ ಎಲ್ಲಿಂದ ಬರುತ್ತೆ ಗೊತ್ತಾ ? ಆತನ ಹಣದ ಮೂಲದ ಬಗ್ಗೆ ಆತನೇ ಬಿಚ್ಚಿಟ್ಟ ಸತ್ಯ ಇದು - Karnataka's Best News Portal

ಹರ್ಷ ಸಾಯಿ ಬಗ್ಗೆ ಅನೇಕರಿಗಿದ್ದ ಅನುಮಾನಕ್ಕೆ ಉತ್ತರ ಅವರೇ ಹೇಳಿದ್ದಾರೆ ನೋಡಿ ||ತೆಲುಗಿನಲ್ಲಿ ಯೂಟ್ಯೂಬರ್ ಆಗಿದ್ದಂತಹ ಹರ್ಷ ಸಾಯಿ ಅವರನ್ನು ನೀವೆಲ್ಲರೂ ಕೂಡ ನೋಡಿಯೇ ಇರುತ್ತೀರ ಈಗಿನ ಕಾಲದಲ್ಲಿ ಪಕ್ಕದ ಮನೆಯವರು ಚಿಟಿಕೆ ಉಪ್ಪನ್ನು ಕೇಳಿದರೂ ಕೂಡ ಕೊಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ ಆದರೆ ಈ ಹರ್ಷ ಸಾಯಿ ಅವರು ಕಷ್ಟದಲ್ಲಿ ಇರುವವರಿಗೆ ಮತ್ತು ಸಣ್ಣಪುಟ್ಟ ವ್ಯಾಪಾರ ವ್ಯವಹಾರ ಮಾಡುವವರಿಗೆ ಎಷ್ಟೋ ಹಣವನ್ನು ಇವರು ಸಹಾಯ ಮಾಡಿದ್ದಾರೆ ಹಾಗೂ ಇವರು ಒಬ್ಬ ಯೂಟ್ಯೂಬರ್ ಆಗಿರುವುದರಿಂದ ಇವರು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿ ದರು ಕೂಡ ಅದನ್ನು ಗೌಪ್ಯವಾಗಿ ಮಾಡುವುದಿಲ್ಲ ಬದಲಾಗಿ ವಿಡಿಯೋ ಮಾಡುವುದರ ಮುಖಾಂತರ ತಮ್ಮ ಯೂಟ್ಯೂಬ್ ನಲ್ಲಿ ಇದನ್ನು ಪ್ರಚಾರ ಮಾಡುತ್ತಿರುತ್ತಾರೆ ಆದರೆ ಎಷ್ಟೋ ಜನ ಇವರು ಇದನ್ನು ಗೌಪ್ಯವಾಗಿಯೇ ಮಾಡಬಹುದು ಆದರೆ ಇವರು ಎಲ್ಲರಿಗೂ ಪ್ರಚಾರ ಮಾಡುವಂತೆ ಮಾಡುತ್ತಿದ್ದಾರೆ ಇದು ತಪ್ಪು ಎಂದು ಹೇಳುತ್ತಾರೆ.

ಆದರೆ ಹರ್ಷ ಅವರು ನಾನು ಈ ರೀತಿ ಮಾಡುವುದ ರಿಂದ ನಾನು ನನ್ನ ಪ್ರಚಾರವನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆ ಇಲ್ಲ ಬದಲಾಗಿ ಇದರಿಂದ ಎಷ್ಟೋ ಜನ ಪ್ರೇರಿತರಾಗಬೇಕು ಇದರಿಂದ ಇನ್ನೂ ಹೆಚ್ಚಿನ ಜನ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದರಿಂದ ಅವರಿಗೆ ಒಳ್ಳೆಯದಾಗುತ್ತದೆ ಎಂಬುದರ ಉದ್ದೇಶ ದಿಂದ ಈ ರೀತಿ ಮಾಡುತ್ತೇನೆ ಎಂದು ಹೇಳುತ್ತಾರೆ ಆಗ ಹರ್ಷ ಅವರನ್ನು ಇಂಟರ್ ವ್ಯೂ ಮಾಡುತ್ತಿದ್ದಂತಹ ವ್ಯಕ್ತಿ ನೀವು ಈ ರೀತಿ ಸಹಾಯವನ್ನು ಮಾಡುತ್ತೀರಲ್ಲ ನೀವು ಯಾವ ರೀತಿ ಹಣವನ್ನು ಸಂಪಾದನೆ ಮಾಡುತ್ತೀರಾನೀವು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೀರಾ ಎಂದು ಅವರು ಪ್ರಶ್ನಿಸುತ್ತಾರೆ ಆದರೆ ಹರ್ಷ ಅವರು ನಾನು ಯಾವುದೇ ರೀತಿಯಾದಂತಹ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವುದಿಲ್ಲ.

ಬದಲಾಗಿ ನಾನು ಯೂಟ್ಯೂಬರ್ ಆಗಿದ್ದೇನೆ ಹಾಗೂ ವಿಡಿಯೋಗಳನ್ನು ಕ್ರಿಯೇಟ್ ಮಾಡುತ್ತೇನೆ ಈ ಮೂಲಕ ನನಗೆ ಅವುಗಳಿಂದ ಹಣ ಬರುತ್ತದೆ ಅದನ್ನು ನಾನು ನನ್ನ ಖರ್ಚುಗಳಿಗೆ ಬಳಸಿಕೊಳ್ಳದೆ ಅದನ್ನು ಒಳ್ಳೆಯ ಕೆಲಸ ಕಾರ್ಯಗಳಿಗೆ ಬಳಸುತ್ತಿದ್ದೇನೆ ಇದರಿಂದ ನಾನು ಖುಷಿಯಾಗಿ ಇದ್ದೇನೆ ಎಂದು ಹೇಳುತ್ತಾರೆ ಈ ರೀತಿ ಮಾಡುವುದರಿಂದ ಕೆಲವೊಂದ ಷ್ಟು ಜನಕ್ಕೆ ಒಳ್ಳೆಯದಾದರೆ ದೇವರು ನಮಗೆ ಒಳ್ಳೆಯದು ಮಾಡುತ್ತಾನೆ ಎಂಬುವ ನಂಬಿಕೆಯಿಂದ ನಾನು ಈ ರೀತಿ ಮಾಡುತ್ತಿದ್ದೇನೆ ಹೊರತು ಒಬ್ಬರನ್ನು ಮೆಚ್ಚಿಸುವುದಕ್ಕಾಗಿ ಈ ರೀತಿಯ ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತಾರೆ ಒಂದು ಶಾಲೆಯಲ್ಲಿ ಹರ್ಷ ಅವರನ್ನು ಗೆಸ್ಟ್ ಆಗಿ ಕರೆದಿದ್ದರು ಆಗ ಅಲ್ಲಿ ಒಬ್ಬ ವಿದ್ಯಾರ್ಥಿ ನೀನು ಮುಂದೆ ಏನು ಆಗಬೇಕು ಎಂದು ಕೇಳಿದಾಗ ನಾನು ಹರ್ಷ ಅವರ ಹಾಗೆ ಆಗುತ್ತೇನೆ ಎಂದು ಹೇಳುತ್ತಾರೆ ಇಷ್ಟೇ ಸಾಕು ನಾನು ಈ ರೀತಿಯ ವಿಡಿಯೋ ಮಾಡಿರುವುದರಿಂದಲೇ ಆ ಹುಡುಗ ಒಳ್ಳೆಯ ಆಲೋಚನೆಯನ್ನು ಮಾಡಿದ್ದಾನೆ ಎಂದು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *