ಇದೆ ನೋಡಿ ಶ್ರೀ ಮಹದೇಶ್ವರ ಸ್ವಾಮಿಗಳು ತಪಸ್ಸು ಮಾಡಿದ ರಹಸ್ಯಮಯ ಸ್ಥಳ..ಮಲೆಮಹದೇಶ್ವರ ಸ್ವಾಮಿಯ ನೈಜ ವಿಸ್ಮಯ - Karnataka's Best News Portal

ಇದೆ ನೋಡಿ ಶ್ರೀ ಮಹದೇಶ್ವರ ಸ್ವಾಮಿಗಳು ತಪಸ್ಸು ಮಾಡಿದ ರಹಸ್ಯಮಯ ಸ್ಥಳ..ಮಲೆಮಹದೇಶ್ವರ ಸ್ವಾಮಿಯ ನೈಜ ವಿಸ್ಮಯ

ಇದೇ ನೋಡಿ ಮಲೆ ಮಹದೇಶ್ವರ ಸ್ವಾಮಿಗಳು ತಪಸ್ಸು ಮಾಡಿದ ರಹಸ್ಯಮಯ ಸ್ಥಳ||ಪೂರ್ವ ಘಟ್ಟಗಳಿಗೆ ಸೇರುತ್ತದೆ ಸಾಲು ಸಾಲು ಮಹದೇಶ್ವರ ಬೆಟ್ಟಗಳ ಆ ಸರಣಿ ಮಲೆ ಮಹದೇಶ್ವರ ಬೆಟ್ಟ 77 ಬೆಟ್ಟಗಳ ಸಾಲು ಈ 77 ಮಲೆಗಳಲ್ಲಿ ಒಂದು ದಬ್ಬಗುಳಿ ಮಹದೇಶ್ವರ ಮಲೆ ಪ್ರಸ್ತುತ ದಬ್ಬಗುಳಿ ಮಹದೇಶ್ವರ ಮಲೆಯು ತಮಿಳುನಾಡಿನ ಕೃಷ್ಣಗಿರಿ ಹಾಗೂ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿ ಇದೆ ಈ ಕ್ಷೇತ್ರದ ಮಹಿಮೆ ಹಿಂದೆ ಬ್ಯಾಲಪಟ್ಟ ಗ್ರಾಮದ ಶರಣರೊಬ್ಬರ ಮನೆಗೆ ಆಕಸ್ಮಿಕ ವಾಗಿ ಬೆಂಕಿ ಕಾಣಿಸಿಕೊಳ್ಳುತ್ತದೆ ಆಗ ಆ ಶರಣರ ಮನೆಯವರು ಹೊರಗೆ ಎದ್ದು ಬರುತ್ತಾರೆ ಆದರೆ ಅವರ ಮನೆಯಲ್ಲಿ ಇದ್ದಂತಹ ಎರಡು ಗೂಳಿಗಳು ಜಗಳಕ್ಕೆ ಬಿದ್ದು ಕೊಂಬುಗಳಿಂದ ಗುದ್ದಾಡಿಕೊಂಡು ಆ ಬೆಂಕಿಯಲ್ಲಿ ಬಿದ್ದು ಸುಟ್ಟು ಹೋಗುತ್ತವೆ ಈ ಬೆಂಕಿಯಲ್ಲಿ ಸುಟ್ಟು ಹೋದ ಗೂಳಿಗಳಲ್ಲಿ ಒಂದು ಬಸವನ ರೂಪವಾದರೆ ಇನ್ನೊಂದು ಲಿಂಗದ ರೂಪವನ್ನು ಧಾರಿಸುತ್ತದೆ.

ಅಂದಿನಿಂದ ಈ ಕ್ಷೇತ್ರವು ಬಹಳ ಪ್ರಸಿದ್ಧಿಯನ್ನು ಹೊಂದಿದ್ದು ಕನಕಪುರ ಜಾತ್ರೆಯ ಸಮಯದಲ್ಲಿ ಅನೇಕ ಹಳ್ಳಿಗಳಲ್ಲಿ ಹಬ್ಬದ ಮೊದಲು ಈ ಕ್ಷೇತ್ರಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗುವ ರೂಢಿ ಇದೆ ಇಲ್ಲಿಗೆ ಕನಕಪುರ ಆನೇಕಲ್ಲು ರಾಮನಗರ ಕೊಳ್ಳೇಗಾಲ ಸೇರಿದಂತೆ ಅನೇಕ ಕಡೆಯಿಂದ ಭಕ್ತಾದಿಗಳು ಬರುತ್ತಾರೆ ಕಾವೇರಿ ನದಿಯ ತೀರದಲ್ಲಿ ಇರುವಂತಹ ಈ ಪುಣ್ಯಕ್ಷೇತ್ರವು ದಟ್ಟವಾದ ಕಾಡು ಗಳಿಂದ ಸುತ್ತುವರೆದಿದೆ ಈ ನೆಲ ಮಲೆ ಮಹದೇಶ್ವರ ಸ್ವಾಮಿಯ ತಪೋಭೂಮಿಯಾಗಿದೆ ಇಲ್ಲಿ ಮಹದೇಶ್ವರ ರು ಸತತವಾಗಿ ಮೂರು ವರ್ಷಗಳ ಕಾಲ ರಹಸ್ಯ ಮಯವಾದಂತಹ ಒಂದು ಗುಹೆಯಲ್ಲಿ ತಪಸ್ಸನ್ನು ಮಾಡಿದ್ದಾರೆ ಇಲ್ಲಿ ಬಸವೇಶ್ವರ ಮಹಾದೇಶ್ವರ ಮಾರಮ್ಮನ ದೇವಾಲಯಗಳು ಕೂಡ ಇದೆ ಅಪಾರವಾದಂತಹ ಶಕ್ತಿಯನ್ನು ಹೊಂದಿರುವಂತಹ ಈ ಕ್ಷೇತ್ರಕ್ಕೆ ಯಾರೇ ಬಂದರೂ ಅವರ ಮನಸ್ಸಿನಲ್ಲಿ ಎಂತಹ ಕ್ರೂರ ಭಾವನೆ ಇದ್ದರೂ ಅವರ ಮನಸ್ಸು ಶಾಂತ ಗೊಳ್ಳುತ್ತದೆ.

WhatsApp Group Join Now
Telegram Group Join Now
See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

ಇಲ್ಲಿಯ ಸ್ಥಳದ ಮಹಿಮೆಯ ಪ್ರಕಾರ ಮಹದೇಶ್ವರ ಸ್ವಾಮಿ ಇಲ್ಲಿಗೆ ಬಂದು ತಪಸ್ಸನ್ನು ಮಾಡುತ್ತಿದ್ದರು ಇದೇ ಕಾರಣದಿಂದಾಗಿ ಈ ನೆಲವು ಮತ್ತಷ್ಟು ಪಾವನ ಗೊಂಡಿದೆ ಜಡೇಸ್ವಾಮಿ ಎನ್ನುವ ಒಬ್ಬ ಸಂತರು ಇಲ್ಲಿನ ಮಹಿಮೆಯನ್ನು ಅರಿತು ಧ್ಯಾನ ಮಾಡಲು ಸುಮಾರು 200 ವರ್ಷಗಳ ಹಿಂದೆ ರೈಲು ಕಂಬಿ ಇಟ್ಟಿಗೆಗಳನ್ನು ಬಳಸಿ ಧ್ಯಾನ ಮಂದಿರವನ್ನು ಕೂಡ ಕಟ್ಟಿದ್ದಾರೆ ಇಲ್ಲಿ ಕುಳಿತುಕೊಂಡು ಧ್ಯಾನ ಮಾಡಿದರೆ ವಿಶೇಷವಾದಂತಹ ಅನುಭವ ಮನಸ್ಸಿಗೆ ಶಾಂತಿ ದೊರಕುತ್ತದೆ ಇನ್ನು ಮಹದೇಶ್ವರ ಬೆಟ್ಟದ ಸಾಲುಗಳು ಕನಕಪುರದ ತಾಲೂಕಿನಲ್ಲಿ ಹುಟ್ಟುತ್ತದೆ ಹಾಗೂ ಸುತ್ತಮುತ್ತ ಇರುವಂತಹ ಕೆಲವೊಂದು ಪುಣ್ಯಕ್ಷೇತ್ರಗಳು ಕೂಡ ಕನಕಪುರದಲ್ಲಿ ಸೇರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">