ಕ್ರೇಜಿ ಸ್ಟಾರ್ ರವಿಚಂದ್ರನ್ ಸಾಮ್ರಾಜ್ಯ ಹೇಗೆ ಪತನವಾಯಿತು ಸಾಲಕ್ಕೆ ನೊಂದು ಮನೆಯನ್ನೇ ಮಾರಿದ್ರ ಬೋಪಣ್ಣ.ಅಮಿತಾಬ್ ಬಚ್ಚನ್ ಸಿನಿಮಾವನ್ನೇ ನಿರ್ಮಾಣ ಮಾಡೋ ಹಂತಕ್ಕಿದ್ದ ಕನಸುಗಾರ - Karnataka's Best News Portal

ಅಮಿತಾಬಚ್ಚನ್ ಸಿನಿಮಾವನ್ನೇ ನಿರ್ಮಾಣ ಮಾಡೋ ಹಂತಕ್ಕೆ ಬೆಳೆದ ನಮ್ಮ ರವಿಚಂದ್ರನ್ ಸೋತಿದ್ದೆಲ್ಲಿ.? ಏನಾಯಿತು ರವಿಮಾಮಗೆ.?ನಾನು ಕಳೆದ ತಿಂಗಳು ಇದ್ದ ಮನೆ ಖಾಲಿ ಮಾಡಿದೆ ಎಲ್ಲರೂ ನಾನು ಸಾಲ ಮಾಡಿಕೊಂಡು ಎಲ್ಲಾ ಕಳೆದು ಕೊಂಡೆ ಎಂದರು ಅರೇ ನಾನು ಕಳೆದುಕೊಂಡಿದ್ದು ಕೇವಲ ಇವತ್ತು ಮಾತ್ರ ಅಲ್ಲ ಕಳೆದ 30 ವರ್ಷಗಳಿಂದಲೂ ನಾನು ಕೇವಲ ಕಳೆದುಕೊಂಡೇ ಬಂದೆ ನಾನು ಕಳೆದುಕೊಂಡೇ ಜಯಿಸಿಕೊಂಡು ಬಂದವನು ನಾನೇನೇ ಕಳೆದುಕೊಂಡಿರಲಿ ಅದು ಕೇವಲ ನಿಮಗಾಗಿ ರಾಯಲ್ ಆಗಿ ಬದುಕಲು ನಾನು ಸಾಲ ಮಾಡಿಕೊಳ್ಳಲಿಲ್ಲ ಹಣ ಹೂಡಲಿಲ್ಲ ರಾಯಲ್ ಆಗಿ ಸಿನಿಮಾ ಮಾಡುವುದಕ್ಕೆ ನಾನು ಸಾಲ ಮಾಡಿ ಕೊಂಡೆ ಅದೊಂದಕ್ಕೆ ಇವತ್ತಿಗೂ ನನ್ನ ಪ್ರಯತ್ನ ಮುಂದುವರಿಯುತ್ತಿದೆ ಜನ ನನ್ನ ಚಿತ್ರಕ್ಕೆ ನುಗ್ಗಿ ಬಂದಾಗ ನಾನು ಖುಷಿಪಟ್ಟಿದ್ದೇನೆ ಅದೇ ಜನ ನನ್ನ ಚಿತ್ರಗಳನ್ನು ತಿರಸ್ಕರಿಸಿದಾಗ.

ನೊಂದುಕೊಂಡಿದ್ದೇನೆ ನಿಮ್ಮನ್ನು ಮೆಚ್ಚಿ ಸಲ ಆಗದೆ ಇದ್ದುದ್ದಕ್ಕೆ ಇಂದಿಗೂ ನನಗೆ ನೋವು ಇದೆ ಆದರೆ ಆ ಹಠ ಮತ್ತು ವಿಶ್ವಾಸವನ್ನು ಬಿಟ್ಟಿಲ್ಲ ಇವತ್ತಲ್ಲ ನಾಳೆ ನಿಮ್ಮನ್ನು ನನ್ನ ಚಿತ್ರಗಳೆಡೆಗೆ ನುಗ್ಗಿಸಿ ಕರೆ ತರುವ ಸಿನಿಮಾವನ್ನು ನಾನು ನಿಮಗೆ ಕೊಡುತ್ತೇನೆ ಮತ್ತು ನಾನು ಇದನ್ನು ಮಾಡಿಯೇ ತೀರುತ್ತೇನೆ ಹೀಗೆ ಇತ್ತೀಚೆಗೆ ವೇದಿಕೆಯೊಂದರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಹೇಳಿದ ಭಾವುಕ ನುಡಿಗಳಿವು ಅವರ ಈ ಮಾತಿನಲ್ಲಿ ಅದೆಷ್ಟು ಭಾವಗಳು ಇದ್ದವು ಎಂದರೆ ತಮ್ಮ ಇಡೀ ಕರಿಯರ್ ನ ಏಳು ಬೀಳು ಮತ್ತು ಅದರಲ್ಲಿ ಕಂಡಂತಹ ಸುಖ ದುಃಖ ಮಾಡಿದ ಸಾಹಸ ಹಾಗೂ ಪ್ರೀತಿ ಎಡವಟ್ಟು ಇವೆಲ್ಲವೂ ಒಮ್ಮೆಲೆ ಗೋಚರ ಆಗುವಂತೆ ಇತ್ತು ಹೌದು ಕ್ರೇಜಿಸ್ಟಾರ್ ಎಂದರೆ ಒಂದೆಡೆ ಪ್ರೇಮಲೋಕ ನಮ್ಮ ಕಣ್ಣ ಮುಂದೆ ಬರುತ್ತದೆ.

ಯಾರಿಗೂ ಹೆದರದ ಆ ರಣಧೀರನೊಬ್ಬ ಅಲ್ಲಿ ಕಂಗೊಳಿಸಿ ನಿಲ್ಲುತ್ತಾನೆ ಇಂಡಸ್ಟ್ರಿಯ ಶೋ ಮ್ಯಾನ್ ಎಂದೇ ಗುರುತಿಸಿಕೊಂಡಂತಹ ಹಾಗೂ ಹತ್ತು ಹಲವು ರೋಚಕಗಳಿಗೆ ಹೆಸರಾದಂತಹ ರವಿಚಂದ್ರನ್ ಅವರ ಬದುಕೆ ಒಂದು ಹೋರಾಟದಂತೆ ಇತ್ತು ಈ ಹೋರಾಟ ಅವರ ಪ್ರೀತಿಯ ಜನರಿಗಾಗಿ ಅವರ ಅಭಿಮಾನಿಗಳಿ ಗಾಗಿ ಮತ್ತು ಕೇವಲ ಅವರ ಮನಸ್ಸoತೋಷಕ್ಕಾ ಗಿಯೇ ನಡೆದದ್ದು ಕೋಟಿಗಟ್ಟಲೆ ಹಣ ಹೂಡಿ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಏನು ಮಾಡಿಕೊಳ್ಳದೆ ಇರುವಂತಹ ನಟ ಯಾರಾದರೂ ಭಾರತದಲ್ಲಿ ಇದ್ದರೆ ಅದು ವಿ ರವಿಚಂದ್ರನ್ ಅವರು ಮಾತ್ರ ಎಂದು ನಿಸ್ಸಂದೇಹವಾಗಿ ಹೇಳಬಹುದು ಈ ದೆಸೆಯಲ್ಲಿ ಈ ಶೋ ಮ್ಯಾನ್ ತಾವು ಬೆಳೆದು ಬಂದ ಈ 40 ವರ್ಷಗಳ ಹಾದಿಯನ್ನು ನೆನಪಿಸಿಕೊಳ್ಳುತ್ತಾ ಆ ಕಾರ್ಯಕ್ರಮದಲ್ಲಿ ಹೀಗೆ ತಮ್ಮ ಮನದಾಳದ ಮಾತುಗಳನ್ನು ಹೇಳಿ ಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *