ನುಗ್ಗೆಸೊಪ್ಪಿನ ಸಾರು ನುಗ್ಗೆಸೊಪ್ಪಿನ ಮಹತ್ವ ತಿಳಿಯಿರಿ.300 ರೋಗಗಳನ್ನು ಗುಣ ಮಾಡುವ ಶಕ್ತಿ ಇದಕ್ಕಿದೆ. - Karnataka's Best News Portal

ನುಗ್ಗೆ ಸೊಪ್ಪು ಹುಳಿ | 300 ರೋಗಗಳನ್ನು ಗುಣ ಮಾಡುವ ಸೊಪ್ಪು ||ನುಗ್ಗೆ ಮರವನ್ನು ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಹೋಲಿಸುತ್ತಾರೆ ಏನೆಂದರೆ ನೆನ್ನೆ ಮೊನ್ನೆ ಇಷ್ಟಿದ್ದ ಹುಡುಗಿ ಈ ದಿನ ನುಗ್ಗಿ ಮರದ ಹಾಗೆ ಬೆಳೆದಿದ್ದಾಳೆ ಎಂದು ತಮಾಷೆಗಾಗಿ ಮಾತಾಡುತ್ತಾರೆ ಆದರೆ ನುಗ್ಗೆಮರವನ್ನು ನಾವು ಕೇವಲ ತಮಾಷೆಗಾಗಿ ಉದಾಹರಣೆ ಕೊಡುವುದಲ್ಲ ಬದಲಾಗಿ ಅದು ತನ್ನದೇ ಆದಂತಹ ಕೆಲವೊಂದಷ್ಟು ಉಪಯೋಗ ಗುಣಗಳನ್ನು ಹೊಂದಿದೆ ಹಾಗೂ ಬಹಳ ಪ್ರಾಚೀನ ಕಾಲದಿಂದಲೂ ಕೂಡ ಇದನ್ನು ಔಷಧಗಳಲ್ಲಿ ಮತ್ತು ಆಯುರ್ವೇದ ಔಷಧಿಗಳಲ್ಲಿ ಇದನ್ನು ಹೇರಳವಾಗಿ ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ.ಇಂದಿನ ಕಾಲದವರು ಯಾವುದೇ ಒಂದು ಕಾಯಿಲೆ ಯಾವುದೇ ಒಂದು ಸಮಸ್ಯೆ ಕಾಣಿಸಿಕೊಂಡರು ಆಸ್ಪತ್ರೆಗಳಿಗೆ ಹೋಗಿ ಚುಚ್ಚುಮದ್ದುಗಳನ್ನು ತೆಗೆದುಕೊಂಡು ಬರುತ್ತಾರೆ.

ಆದರೆ ನಿಮ್ಮ ಮನೆಯಲ್ಲಿಯೇ ಅಕ್ಕಪಕ್ಕದ ಜಾಗಗಳಲ್ಲಿ ಸಿಗುವ ಕೆಲವೊಂದು ಔಷಧಿ ಯುಕ್ತ ಸಸ್ಯಗಳ ಬಗ್ಗೆ ಅವರಿಗೆ ತಿಳಿದಿರುವುದಿಲ್ಲ ಆದ್ದರಿಂದ ಎಂತಹ ಕಾಯಿಲೆಗಳನ್ನು ಗುಣಪಡಿಸಿಕೊಳ್ಳುವುದು ಹಾಗೂ ಇದು ಎಷ್ಟರಮಟ್ಟಿಗೆ ಮನುಷ್ಯನ ದೇಹಕ್ಕೆ ಆರೋಗ್ಯವನ್ನು ಒದಗಿಸಿಕೊಡುತ್ತದೆ ಹಾಗೂ ಔಷಧಿ ಗಳಿಗಿಂತ ಆಯುರ್ವೇದ ಔಷಧಿಯಾಗಿ ಇಂದಿಗೂ ಕೂಡ ಇದು ತನ್ನ ಔಷಧಿ ಗುಣವನ್ನು ಒದಗಿಸುತ್ತಿರುವು ದನ್ನು ನಾವು ಮೆಚ್ಚಲೇಬೇಕು ಹೌದು ನುಗ್ಗೆ ಸೊಪ್ಪನ್ನು ನಮ್ಮ ಪ್ರತಿನಿತ್ಯದ ಆಹಾರದಲ್ಲಿ ಅದರಲ್ಲೂ ವಾರಕ್ಕೆ ಒಮ್ಮೆಯಾದರೂ ಕೂಡ ಸೇವನೆ ಮಾಡುತ್ತಾ ಬಂದರೆ ನಮ್ಮ ದೇಹದಲ್ಲಿ ಇರುವಂತಹ ಹಲವಾರು ಸಮಸ್ಯೆ ಯನ್ನು ಇದು ಗುಣಪಡಿಸುತ್ತದೆ ಹಾಗಾದರೆ ನುಗ್ಗೆ ಸೊಪ್ಪಿನಿಂದ ಯಾವುದೆಲ್ಲ ರೀತಿಯಾದಂತಹ ಪ್ರಯೋಜನವನ್ನು ಪಡೆದುಕೊಳ್ಳಬಹುದು ಹಾಗೂ ಯಾವ ಕಾಯಿಲೆಗೆ ಇದು ಬಹು ಮುಖ್ಯವಾದoತಹ ಔಷಧಿಯಾಗಿದೆ ಎಂದು ನೋಡುವುದಾದರೆ ಬಹಳ ಮುಖ್ಯವಾಗಿ ನುಗ್ಗೆ ಸೊಪ್ಪಿನ ಸೇವನೆಯಿಂದ ಕ್ಯಾನ್ಸರ್ ನಂತಹ ದೊಡ್ಡ ಕಾಯಿಲೆಯನ್ನು ಕೂಡ ನಿವಾರಣೆ ಮಾಡಿಕೊಳ್ಳಬಹುದು.

ಅದರಲ್ಲೂ ನುಗ್ಗೆ ಸೊಪ್ಪಿನಲ್ಲಿ ಯಥೇಚ್ಛವಾಗಿ ಆಂಟಿ ಆಕ್ಸಿಡೆಂಟ್ ಗಳು ವಿಟಮಿನ್ ಸಿ ಜಿಂಕ್ ಮತ್ತು ಇತರ ಪೋಷಕಾಂಶ ತತ್ವಗಳು ಇದ್ದು ಇದು ಕ್ಯಾನ್ಸರ್ ಖಾಯಿಲೆಗೆ ಕಾರಣವಾಗಿರುವಂತಹ ಕೆಲವೊಂದು ಅಂಶಗಳನ್ನು ಇದು ದೂರ ಮಾಡಿ ಅವುಗಳನ್ನು ನಾಶಪಡಿಸಿ ದೇಹಕ್ಕೆ ಬೇಕಾದಂತಹ ಒಳ್ಳೆಯ ಪೋಷಕಾಂಶಗಳನ್ನು ಇದು ಒದಗಿಸಿಕೊಡುತ್ತದೆ ಹಾಗೂ ನಮ್ಮ ದೇಹದಲ್ಲಿ ಲಿವರ್ ಆರೋಗ್ಯವಾಗಿ ಚೆನ್ನಾಗಿರಬೇಕು ಎಂದರೆ ಮೂರು ದಿನಕ್ಕೊಮ್ಮೆ ನುಗ್ಗೆ ಸೊಪ್ಪಿನಿಂದ ತಯಾರಿಸಿದಂತಹ ಪದಾರ್ಥಗಳನ್ನು ಸೇವಿಸುವುದು ಉತ್ತಮ ಮನುಷ್ಯನಿಗೆ ಕಣ್ಣು ಕಿವಿ ಮೂಗು ಆರೋಗ್ಯವಾಗಿ ಇದ್ದರೆ ಆತನು ಒಂದು ಅರ್ಥದಲ್ಲಿ ಆರೋಗ್ಯವಾಗಿ ಇದ್ದಾನೆ ಎಂದರ್ಥ ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ವಯಸ್ಸಾದವರು ಕನ್ನಡಕಗಳನ್ನು ಬಳಸುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಿಗಿಂತ ಯುವಕರೇ ಹೆಚ್ಚಾಗಿ ಕನ್ನಡಕವನ್ನು ಬಳಸುತ್ತಿದ್ದಾರೆ ಆದ್ದರಿಂದ ಈ ನುಗ್ಗೆ ಸೊಪ್ಪು ನಮ್ಮ ಕಣ್ಣಿನ ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *