ಯಾರು ಗೊತ್ತಾ ಈ ಕಾಂತಾರ ಚೆಲುವೆ ಈಕೆಯ ಹಿನ್ನೆಲೆ ಏನು ಗೊತ್ತಾ ||ಈಗಂತೂ ಎಲ್ಲೂ ನೋಡಿದರೂ ಕಾಂತಾರ ಸಿನಿಮಾದೆ ಸಕ್ಸಸ್ ಮಾತು ಕಾಂತಾರ ಚಿತ್ರ ದೇಶಾದ್ಯಂತ ಬಹುತೇಕ ವೀಕ್ಷಕರಿಗೆ ಹೆಚ್ಚು ಇಷ್ಟ ಆಗಿದೆ ಕನ್ನಡ ನೆಲದ ದೈವ ಒಂದರ ಆರಾಧನೆ ಇಲ್ಲಿನ ಪಂಜುರ್ಲಿಯ ಆರ್ಭಟ ಹಾಗೂ ಅದರ ಸಿರಿವಂತಿಕೆ ದೇಶಕ್ಕೆ ಪಸರಿಸಿದೆ ಈ ಚಿತ್ರದ ಯಶಸ್ಸಿಗೆ ರಿಷಬ್ ಶೆಟ್ಟಿ ಅವರ ನಟನೆ ಹಾಗೂ ನಿರ್ದೇಶನ ಒಂದು ಕಡೆ ಆದರೆ ಉಳಿದಂತ ಎಲ್ಲ ಪಾತ್ರಗಳು ಕೂಡ ಅಷ್ಟೇ ಸಹಕರಿಸಿದ ಎಂದು ಹೇಳಬಹುದು ಈ ದೆಸೆಯಲ್ಲಿ ಕಾಂತಾರದಲ್ಲಿ ಲೀಲಾ ಆಗಿ ನಟಿಸಿದಂತಹ ಬೊಗಸೆ ಕಣ್ಣುಗಳ ಸಹಜ ಚೆಲುವೆ ನಟಿ ಸಪ್ತಮಿ ಗೌಡ ಅವರ ಬಗ್ಗೆ ಈ ದಿನ ನಾವೆಲ್ಲರೂ ತಿಳಿದುಕೊಳ್ಳೋಣ.
ಬಹು ಅಚಾನಕ್ಕಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟಂತಹ ಸಪ್ತಮಿ ಗೌಡ ಈವರೆಗೂ ನಟಿಸಿರುವಂತಹ ಚಿತ್ರಗಳು ಕೇವಲ ಎರಡೇ ಚಿತ್ರಗಳಲ್ಲಿ ಆದರೆ ಇಂತಹ ಸಕ್ಸಸ್ ಅನ್ನು ಅವರು ಬಹುಶಃ ನಿರೀಕ್ಷೆ ಮಾಡಿರಲಿಲ್ಲ ಉದಯೋನ್ಮುಖ ನಟಿಯಾಗಿ ನಟಿಸುತ್ತಿರುವಂತಹ ಸಪ್ತಮಿ ಗೌಡ ಅವರು ಯಾರು ಎಂಬ ಪ್ರಶ್ನೆಗೆ ಉತ್ತರ ಅವರು ಮೂಲತಃ ಬೆಂಗಳೂರಿನವರು ಪಕ್ಕ ಬೆಂಗಳೂರಿನ ಯುವತಿಯಾಗಿರುವಂತಹ ಸಪ್ತಮಿ ಗೌಡ ಅವರು 1996ರ ಜೂನ್ 8 ರಂದು ಬೆಂಗಳೂರಿನಲ್ಲಿಯೇ ಜನಿಸುತ್ತಾರೆ ಇವರ ತಂದೆ ಕರುನಾಡು ಕಂಡಂತಹ ಖ್ಯಾತ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಹೌದು ಇವರು ರಾಜ್ಯದ ಖ್ಯಾತ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಆದಂತಹ ಎಸ್ ಕೆ ಉಮೇಶ್ ಅವರ ಮಗಳು ಎನ್ನುವ ಸಂಗತಿ ಅನೇಕರಿಗೆ ಗೊತ್ತಿಲ್ಲ.
ಚಿಕ್ಕವಯಸ್ಸಿನಿಂದಲೂ ಬಹಳ ಸಹಜ ಸುಂದರಿ ಹಾಗೂ ಓದಿನಲ್ಲೂ ಪ್ರತಿಭಾನ್ವಿತ ಆದಂತಹ ಸಪ್ತಮಿ ಗೌಡ ಅವರು ತಮ್ಮ ಆರಂಭಿಕ ಶಿಕ್ಷಣವನ್ನೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿಯೇ ಬೆಂಗಳೂರಿನ ಬಾಲ್ಡ್ವಿನ್ ಗರ್ಲ್ಸ್ ಹೈಸ್ಕೂಲ್ ನಲ್ಲಿ ತಮ್ಮ ಸ್ಕೂಲಿಂಗ್ ಅನ್ನು ಮುಗಿಸಿದಂತಹ ಸಪ್ತಮಿ ಮುಂದೆ ಕುಮಾರನ್ಸ್ ಪಿಯು ಕಾಲೇಜ್ ನಲ್ಲಿ ತಮ್ಮ ಪಿಯು ಶಿಕ್ಷಣವನ್ನು ಮುಗಿಸುತ್ತಾರೆ ಮುಂದೆ ಇಂಜಿನಿಯರಿಂಗ್ ಕೋರ್ಸ್ ಅನ್ನು ಆರಿಸಿಕೊಳ್ಳುವಂತಹ ಸಪ್ತಮಿ ಗೌಡ ಬೆಂಗಳೂರಿನಲ್ಲಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಲ್ಲಿ ಸಿವಿಲ್ ಇಂಜಿನಿಯರಿಂಗ್ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡರು ಓದು ಮಾತ್ರವಲ್ಲದೆ ತಮ್ಮ ಶಾಲಾ ಕಾಲೇಜುಗಳಲ್ಲಿ ಅವರು ಉತ್ತಮ ಸಾಂಸ್ಕೃತಿಕ ಪ್ರತಿಭೆ ಕೂಡ ಆಗಿದ್ದರು.