ಈ ಬಾರಿ ದೀಪಾವಳಿ ಅಮವಾಸ್ಯೆಯ ದಿನ ಸಾಯಂಕಾಲ ಮಾಡೋ ಈ ಪರಿಹಾರ ಅದೃಷ್ಟ ತಂದುಕೊಡುತ್ತೆ.ಹಣದ ಸುರಿಮಳೆ ಪ್ರತಿ ಕೆಲಸದಲ್ಲೂ ಜಯ - Karnataka's Best News Portal

2022 ದೀಪಾವಳಿ ಅಮವಾಸ್ಯೆಯಂದು ಮಾಡುವ ಈ ಪರಿಹಾರವೂ ನಿಮಗೆ ಅದೃಷ್ಟ ತರುತ್ತದೆ…ದೀಪಾವಳಿ ಹಬ್ಬದಂದು ಕುಬೇರ ಯಂತ್ರ ಪೂಜೆ ಮಾಡುವುದು ಹಾಗೂ ಲಕ್ಷ್ಮಿ ಕೂರಿಸುವುದು ವಾಡಿಕೆ. ಈ ವರ್ಷ ಕೂಡ ಯಾವ ಸಮಯದಲ್ಲಿ ಲಕ್ಷ್ಮಿ ಕೂರಿಸಬೇಕು ಹಾಗೂ ಹೆಚ್ಚಿಸಬೇಕು ಎನ್ನುವ ಅನುಮಾನ ಹಲವರಲ್ಲಿ ಇದೆ. ಕಾರಣ ಈ ವರ್ಷ ಅಮಾವಾಸ್ಯೆ ದಿನದಂದು ಗ್ರಹಣ ಬಂದಿರುವುದರಿಂದ ಯಾವ ಸಮಯದಲ್ಲಿ ಕೂರಿಸಬೇಕು, ಸೋಮವಾರವೇ ಲಕ್ಷ್ಮಿಯನ್ನು ಕುರಿಸಬಹುದೇ, ಮಂಗಳವಾರ ಗ್ರಹಣ ಇರುವುದರಿಂದ ವಿಸರ್ಜನೆ ಯಾವ ಸಮಯದಲ್ಲಿ ಮಾಡಬೇಕು ಮತ್ತು ಗ್ರಹಣ ಸಮಯದಲ್ಲಿ ಮುತ್ತೈದೆಯರಿಗೆ ಅರಿಶಿಣ ಕುಂಕುಮ ಕೊಡಬಹುದೇ ಈ ರೀತಿಯ ಹಲವಾರು ಗೊಂದಲಗಳು ಗೃಹಿಣಿಯರನ್ನು ಕಾಡುತ್ತಿದೆ. ಈ ವರ್ಷ ಸೋಮವಾರದ ಸಂಜೆ ಲಕ್ಷ್ಮಿ ಕೂರಿಸಲು ಮುಹೂರ್ತ ಇರದ ಕಾರಣ ಮಂಗಳವಾರ ಬೆಳಗ್ಗೆ ಬ್ರಾಹ್ಮಿ ಮುಹುರ್ತತದಲ್ಲಿ ಲಕ್ಷ್ಮಿಯನ್ನು ಕೂರಿಸಬೇಕು ಮತ್ತು ಯಾವುದೇ ಕಾರಣಕ್ಕೂ ಲಕ್ಷ್ಮಿಯನ್ನು ವಿಸರ್ಜಿಸುವುದು ಎನ್ನುವ ಪದವನ್ನು ಬಳಸಬಾರದು. ಲಕ್ಷ್ಮಿಯನ್ನು ಮಂಗಳವಾರ ರಾತ್ರಿ 9:30 ರಲ್ಲಿ ಸ್ವಲ್ಪ ಕದಲಿಸಬೇಕು.

ಬುಧವಾರ ಬೆಳಿಗ್ಗೆ ದೇವರಿಗೆ ಸ್ವಲ್ಪ ನೈವೇದ್ಯ ಮಾಡಿ ನಂತರ ಹೆಚ್ಚಿಸಬೇಕು. ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಡಲು ಗ್ರಹಣಕಾಲ ಮುಗಿದ ಬಳಿಕ ಸ್ನಾನ ಮಾಡಿಕೊಂಡು ಕೊಡಬಹುದು. ಪ್ರತಿಯೊಬ್ಬರ ಮನೆಯಲ್ಲಿ ಕೂಡ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಅದು ಆರ್ಥಿಕ ಸಮಸ್ಯೆ ಇರಬಹುದು, ಆರೋಗ್ಯ ಸಮಸ್ಯೆ ಇರಬಹುದು, ಕುಟುಂಬ ಕಲಹ, ಆಸ್ತಿ ವಿಚಾರ, ವಿವಾಹ ಸಂಬಂಧಪಟ್ಟ ಸಮಸ್ಯೆಗಳು, ಸಂತಾನಕ್ಕೆ ಸಂಬಂಧಪಟ್ಟ ಸಮಸ್ಯೆಗಳು, ಉದ್ಯೋಗ ಮತ್ತು ವ್ಯಾಪಾರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಈ ಸಮಸ್ಯೆಗಳಲ್ಲಿ ಯಾವುದಾದರೂ ಸಮಸ್ಯೆ ಇದ್ದೆ ಇರುತ್ತದೆ. ಇಂತಹ ಸಮಸ್ಯೆಗಳಲ್ಲಿ ಬಳಲುತ್ತಾ ಇರುವವರು ಈ ವರ್ಷ ದೀಪಾವಳಿ ದಿನದ ಸೋಮವಾರ ಸಂಜೆ ಶುಭ ಸಮಯದಲ್ಲಿ ಈ ಒಂದು ಪರಿಹಾರ ಮಾಡುವುದರಿಂದ ಈ ಎಲ್ಲ ಸಮಸ್ಯೆಗಳಿಂದ ಆಚೆ ಬರಬಹುದು ಈ ಪರಿಹಾರವನ್ನು ಸೋಮವಾರ ಸಂಜೆ 6:30 ರಿಂದ 7:30ರ ಒಳಗೆ ಮಾಡಬೇಕು ಅಥವಾ ರಾತ್ರಿ 10 ಗಂಟೆಗೆ ಮಾಡಬಹುದು.

ಆದರೆ ಯಾವುದೇ ಕಾರಣಕ್ಕೂ ಮಂಗಳವಾರದ ದಿನದಂದು ಇದನ್ನು ಮಾಡಲು ಹೋಗಬಾರದು. ಇದನ್ನು ಮಾಡುವುದು ಬಹಳ ಸರಳವಾದ ಪರಿಹಾರ ಆಗಿದೆ. ಸೋಮವಾರ ಸಂಜೆ ಲವಂಚ ಅಥವಾ ದರ್ಬೆ ಎಂದು ಕರೆಯುವ ಇದನ್ನು ಗ್ರಂಥಿಕೆ ಅಂಗಡಿಯಲ್ಲಿ ಖರೀದಿಸಿ ಮನೆಗೆ ತಂದು ಮನೆಯಲ್ಲಿರುವ ಎಲ್ಲ ಪದಾರ್ಥಗಳ ಮೇಲೆ ಸ್ವಲ್ಪ ಸ್ವಲ್ಪ ಕಟ್ ಮಾಡಿ ಇಡಬೇಕು ಇದರಿಂದ ಗ್ರಹಣದ ಯಾವುದೇ ದುಷ್ಪರಿಣಾಮಗಳು ಮನೆಯ ಮೇಲೆ ಬೀಳುವುದಿಲ್ಲ ಎಂದು ನಂಬಲಾಗಿದೆ ಈ ಒಂದು ಪರಿಹಾರವನ್ನು ಸೋಮವಾರ ಪದೇ ಮಾಡಬೇಕು ಲಾಂಚದ ಬೇರಿನಲ್ಲಿ ಬಹಳ ಆಯುರ್ವೇದಿಕ್ ಔಷದಿ ಇದನ್ನು ಗಂಧದ ಕಲ್ಲಿನಲ್ಲಿ ಉಜ್ಜಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಪಿಂಪಲ್ ದೂರ ಆಗುತ್ತವೆ ಹಾಗೂ ಹಣಕಾಸು ಇಡುವ ಪಟ್ಟಿಗೆಯಲ್ಲಿ ಲಾವಂಚ ಬೇರನ್ನು ಸಹ ಇಡುವುದರಿಂದ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಲಾವಂಚ ಬೇರಿಗೆ ಇರುವ ಆಕರ್ಷಣೆಯ ಶಕ್ತಿ ಮತ್ತು ಈ ಕುರಿತ ಇನ್ನೂ ಮುಂತಾದ ಹೆಚ್ಚಿನ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋ ನೋಡಿ.

Leave a Reply

Your email address will not be published. Required fields are marked *