ಯಾವ ಪಕ್ಷಿ ಪ್ರಾಣಿಗಳು ಮನೆಗೆ ಎಂಟ್ರಿ ಕೊಟ್ಟರೆ ಅಪಶಕುನ ಗೊತ್ತಾ ? ಬಾವಲಿ,ಹಾವು,ಪಾರಿವಾಳ ಮನೆಗೆ ಬಂದರೆ ಏನನ್ನು ಸೂಚಿಸುತ್ತೆ ಗೊತ್ತಾ ? - Karnataka's Best News Portal

ಯಾವ ಪಕ್ಷಿ ಪ್ರಾಣಿಗಳು ಮನೆಗೆ ಎಂಟ್ರಿ ಕೊಟ್ಟರೆ ಅಪಶಕುನ ಗೊತ್ತಾ ? ಬಾವಲಿ,ಹಾವು,ಪಾರಿವಾಳ ಮನೆಗೆ ಬಂದರೆ ಏನನ್ನು ಸೂಚಿಸುತ್ತೆ ಗೊತ್ತಾ ?

ಯಾವ ಪಕ್ಷಿ ಅಥವಾ ಪ್ರಾಣಿ ಮನೆಗೆ ಎಂಟಿಕೊಡುವುದರಿಂದ ಏನು ಸೂಚನೆ ಸಿಗುತ್ತದೆ ಗೊತ್ತಾ?ನಮ್ಮ ಹಿರಿಯರು ಅನೇಕ ಶಕುನಗಳ ಬಗ್ಗೆ ತಿಳಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಕಾಗೆಯ ಬಗ್ಗೆ ಹಲವು ವಿಚಾರವನ್ನು ಹೇಳುತ್ತಾರೆ. ಕಾಗೆಗಳು ಶನಿ ಮಹಾತ್ಮ ಪ್ರಭಾವ ಇದ್ದ ಹಾಗೆ ಕಾಗೆಗಳು ಮನೆಯನ್ನು ಪ್ರವೇಶ ಮಾಡಿದರೆ ಶನಿಯ ದೃಷ್ಟಿ ಮನೆ ಮೇಲೆ ಬಿದ್ದಿದೆ ಎಂದು ಅರ್ಥ ಎಂದು ಹೇಳುತ್ತಾರೆ. ಹಾಗೂ ಕಾಗೆಗಳು ವಾಹನಗಳ ಮೇಲೆ ಯಾವಾಗಲೂ ಕುಳಿತುಕೊಳ್ಳುತ್ತಿದ್ದರೆ ಅದು ದ್ವಿ ಚಕ್ರ ವಾಹನ ಅಥವಾ ಬಹುಚಕ್ರ ವಾಹನ ಆಗಿರಬಹುದು. ಒಂದು ಅಥವಾ ಎರಡು ಬಾರಿ ಕುಳಿತುಕೊಂಡರೆ ಅದು ಅಲ್ಲಿ ಏನನ್ನು ತಿನ್ನುವ ಸಲುವಾಗಿ ನೋಡಿದ್ದಕ್ಕಾಗಿ ಕುಳಿತು ಕೊಂಡಿದೆ ಎಂದು ಕೊಳ್ಳಬಹುದು ಆದರೆ ಪದೇ ಪದೇ ಬಂದು ನಿಮ್ಮ ಗಾಡಿಯ ಮೇಲೆ ಕುಳಿತುಕೊಳ್ಳುತ್ತಿದೆ ಎಂದರೆ ಇದು ಯಾವುದೋ ಅಪಾಯದ ಮುನ್ಸೂಚನೆ ಕೊಡುತ್ತಿದೆ ಎಂದರ್ಥ. ಹಾಗಾಗಿ ಸಾಧ್ಯವಾದರೆ ಆ ವಾಹನಗಳನ್ನು ಮಾರಿ ಬಿಡುವುದು ಉತ್ತಮ.

ಹಾಗೆಯೇ ಜೇನುಗಳು ಕೂಡ ಈ ರೀತಿ ಅನೇಕ ಶಕುನಗಳನ್ನು ಹೇಳುತ್ತವೆ. ಜೇನುಗಳು ಕಾರಣ ಇಲ್ಲದೆ ಯಾರನ್ನು ಕೂಡ ಕಚ್ಚುವುದಿಲ್ಲ ಜೇನು ಹುಳು ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಗೂಡು ಕಟ್ಟಿದೆ ಎಂದರೆ ನಿಮಗೆ ಹಣಕಾಸಿನಲ್ಲಿ ಪ್ರಗತಿ ಕಾಣುತ್ತಿದೆ ಹಾಗೂ ಹಣಕಾಸಿನ ವಿಚಾರದಲ್ಲಿ ಉತ್ತಮ ಲಾಭಗಳನ್ನು ಪಡೆಯುತ್ತೀರಿ ಎಂದು ಅರ್ಥ ಆದರೆ ಆಗ್ನೇಯ ದಿಕ್ಕಿನಲ್ಲಿ ಜೇನು ಗೂಡು ಕಟ್ಟುತ್ತಿದ್ದರೆ ಅದು ಕಲಹದ ಸೂಚನೆಯನ್ನು ನೀಡುತ್ತಿದೆ ಎಂದರ್ಥ. ಆಸ್ತಿ ವಿಚಾರವಾಗಿ ಅಥವಾ ಇನ್ಯಾವುದೇ ಕೌಟುಂಬಿಕ ವಿಚಾರವಾಗಿ ನಿಮ್ಮ ಮನೆಯಲ್ಲಿ ಮನಸ್ತಾಪಗಳು ಉಂಟಾಗಬಹುದು. ಅಥವಾ ಜೇನು ಹುಳು ನಿಮ್ಮ ಮನೆ ಒಳಗಡೆ ಬಂದು ಅದು ತಲೆ ಸುತ್ತಿ ಬಿದ್ದರೆ ಅಥವಾ ಸತ್ತು ಹೋದರೆ ಮನೆಯ ಹಿರಿಯರಿಗೆ ಯಾವುದೋ ಕೆಡಕು ಉಂಟಾಗುವ ಸೂಚನೆ ಇದೆ ಎಂದು ಅರ್ಥ ಈ ಶಕುನವನ್ನು ಜೇನುಹುಳು ಕೊಡುತ್ತದೆ.

WhatsApp Group Join Now
Telegram Group Join Now
See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು

ಹಾಗೆಯೇ ಇರುವೆಗಳು ಕೂಡ ಶಕುನವನ್ನು ತಿಳಿಸುತ್ತವೆ ಕಪ್ಪು ಇರುವೆಗಳು ಮನೆಯಲ್ಲಿ ಕಾಣಿಸಿಕೊಂಡರೆ ಅದು ಶುಭ ಸೂಚನೆ ನೀಡುತ್ತದೆ. ಇದರಿಂದ ನಿಮಗೆ ಎಲ್ಲಾ ರೀತಿಯಲ್ಲೂ ಒಳತಾಗುತ್ತದೆ ಎಂದು ಅರ್ಥ ಆದರೆ ಕಂದು ಇರುವೆಗಳು ಅಥವಾ ಕೆಂಪು ಇರುವೆಗಳು ಕಾಣಿಸಿಕೊಂಡರೆ ಅದು ಕೂಡ ಮನೆಯಲ್ಲಿ ಸಂಘಟನೆ ಉಂಟಾಗುವ ಸೂಚನೆಯನ್ನು ನೀಡುತ್ತದೆ, ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಗಳಲ್ಲೂ ಕೂಡ ಒಂದು ಬೆಕ್ಕು ಹಾಗೂ ಒಂದು ನಾಯಿಯನ್ನು ಸಾಕುತ್ತಿದ್ದರು ಹಾಗೂ ಸಾಕಿರುವ ಆ ಪ್ರಾಣಿಗಳು ಮನೆಯ ಜನರಿಗೆ ಕೆಲವು ಸೂಚನೆಗಳನ್ನು ಕೊಡುತ್ತಿದ್ದವು. ನಾವು ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಬೆಕ್ಕುಗಳು ಅಡ್ಡ ಬಂದರೆ ಅದನ್ನು ಎಲ್ಲರೂ ಬೈದುಕೊಳ್ಳುತ್ತಾರೆ ಆದರೆ ಆ ಸಮಯವನ್ನು ಸ್ವಲ್ಪ ತಡೆದು ಹೋಗುವುದರಿಂದ ಅನೇಕ ಅಪಾಯಗಳಿಂದ ತಪ್ಪಿಸಿಕೊಳ್ಳಬಹುದು. ಹೀಗಾಗಿ ಬೆಕ್ಕು ಈ ಮೂಲಕ ರೀತಿಯಲ್ಲಿ ಒಳ್ಳೆಯದನ್ನೇ ಮಾಡುತ್ತಿದೆ ಎಂದುಕೊಳ್ಳಬೇಕು. ಹಾಗೆ ನಾಯಿಗಳು, ಹಾವುಗಳು ಮತ್ತು ಇನ್ನು ಅನೇಕ ಪ್ರಾಣಿಗಳ ಪಕ್ಷಿಗಳು ಈ ರೀತಿ ಸೂಚನೆ ಕೊಡುತ್ತವೆ. ಇವುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

[irp]


crossorigin="anonymous">