ಒಲವಿನ ಚಿತ್ರದ ನಟಿ ಈಗ ಹೇಗಾಗಿದ್ದಾರೆ ಗೊತ್ತಾ ? ಗುರುತೇ ಸಿಗದಷ್ಟು ಬದಲಾಗಿದ್ದಾರೆ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಒಲವಿನ ಉಡುಗೊರೆ ಚಿತ್ರದ ನಟಿ ಈಗ ಹೇಗಿದ್ದಾರೆ.. ಗುರುತೇ ಸಿಗದಷ್ಟು ಬದಲಾಗಿದ್ದಾರೆ….!ತಮ್ಮ ಮುಗ್ಧ ನೋಟ ಹಾಗೂ ನೈಜ ಅಭಿನಯದ ಮುಖಾಂತರ ಕನ್ನಡ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿ ದ್ದಂತಹ ನಟಿ ಮಂಜುಳಾ ಶರ್ಮ ತಮಿಳಿನ ಮಂಜುಳಾ ಶರ್ಮ 80ರ ದಶಕದಲ್ಲಿ ಬಹಳ ಬೇಡಿಕೆಯ ನಟಿಯಾಗಿದ್ದರು ಹೆಚ್ಚಾಗಿ ಸಂಸಾರಿಕ ಚಿತ್ರಗಳಲ್ಲಿ ನಟಿಸುತ್ತಿದ್ದಂತಹ ಮಂಜುಳಾ ಶರ್ಮ ಅಂದಿನ ಹೆಣ್ಣು ಮಕ್ಕಳ ಫೇವರೆಟ್ ನಾಯಕ ನಟಿಯಾಗಿದ್ದರು ಮತ್ತು ಪಡ್ಡೆ ಹುಡುಗರ ಮನಸ್ಸನ್ನು ಗೆದ್ದಿದ್ದರು ಇವರು ಕೇವಲ ಕನ್ನಡ ಚಿತ್ರದಲ್ಲಿ ಅಭಿನಯ ಮಾಡುವುದಲ್ಲದೆ ತಮಿಳು ತೆಲುಗು ಮಲಯಾಳಂ ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಹಾಗೂ ಪೋಷಕ ನಟಿಯಾಗಿಯೂ ಕೂಡ ನಟಿಸಿದ್ದಾರೆ ಕನ್ನಡದಲ್ಲಿ ಮಂಜುಳಾ ಶರ್ಮ 1983 ರಲ್ಲಿ ತೆರೆಕಂಡಂತಹ ಮುತ್ತೈದೆ ಭಾಗ್ಯ ಚಿತ್ರದಲ್ಲಿ ಸಣ್ಣ ಪಾತ್ರ ಒಂದರಲ್ಲಿ ನಟಿಸುವುದರ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಪಾದಾರ್ಪಣೆಯನ್ನು ಮಾಡುತ್ತಾರೆ.ನಂತರ ಹೊಸ ಇತಿಹಾಸ ಎಂಬ ಚಿತ್ರದಲ್ಲಿ ನಟಿಸಿದರು ಇದಾದ ನಂತರ ಇವರು ನಟಿಸಿದ ಕನ್ನಡ ಚಿತ್ರ ಒಲವಿನ ಉಡುಗೊರೆ ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ನಾಯಕಿಯಾಗಿ ಡಿ ರಾಜೇಂದ್ರ ಬಾಬು ಅವರ ನಿರ್ದೇಶ ನದಲ್ಲಿ ಮೂಡಿಬಂದಂತಹ

ಈ ಚಿತ್ರ ಒಲವಿನ ಉಡುಗೊರೆ ಹೆಚ್ಚಿನ ಯಶಸ್ಸನ್ನು ಪಡೆದುಕೊಂಡಿತು ಚಿತ್ರದಲ್ಲಿ ಮಂಜುಳಾ ಶರ್ಮ ಅವರು ನಾಯಕ ನಟಿಯಾಗಿ ಅಭಿನಯಿಸಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗಿದ್ದರೂ ನಂತರ 1988ರಲ್ಲಿ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ನಮ್ಮೂರ ರಾಜ ಚಿತ್ರಕ್ಕೆ ನಾಯಕ ನಟಿಯಾಗಿ ಅಭಿನಯಿಸಿದ್ದರು ನಂತರ ಪದ್ಮವ್ಯೂಹ ಒಂದಾಗಿ ಬಾಳು ನಮ್ಮ ಭೂಮಿ ಪೋಲಿಕಿಟ್ಟಿ ಸಾಹಸ ಸಿಂಹ ಜಗನ್ನಾಥ್ ರಾಷ್ಟ್ರಗೀತೆ ಹೀಗೆ ಕನ್ನಡದ 10 ಹಲವು ಚಿತ್ರಗಳಲ್ಲಿ ತಮ್ಮದೇ ಆದಂತಹ ಅದ್ಭುತ ನಟನೆಯನ್ನು ಮಾಡುವುದರಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದುಕೊಂಡಿದ್ದಾರೆ.

ರೆಬಲ್ ಸ್ಟಾರ್ ಅಂಬರೀಶ್ ಸಾಹಸಸಿಂಹ ವಿಷ್ಣುವರ್ಧನ್ ಟೈಗರ್ ಪ್ರಭಾಕರ್ ಚರಣ್ ರಾಜ್ ಕಾಶಿನಾಥ್ ಸಾಯಿ ಕುಮಾರ್ ಹೀಗೆ ಹೆಚ್ಚು ಪ್ರಸಿದ್ಧಿ ಯಾಗಿದ್ದಂತಹ ಎಲ್ಲಾ ನಾಯಕ ನಟರ ಜೊತೆ ಮಂಜುಳಾ ಶರ್ಮಾ ಅವರು ನಾಯಕ ನಟಿಯಾಗಿ ಅಭಿನಯಿಸಿದ್ದಾರೆ ಹಾಗೂ ತೆಲುಗು ತಮಿಳು ಮಲಯಾಳಂ ನ ಎಲ್ಲ ಟಾಪ್ ನಾಯಕ ನಟರ ಜೊತೆ ನಟಿಯಾಗಿ ನಟಿಸಿರುವಂತಹ ಮಂಜುಳಾ ಶರ್ಮ ಅವರು ತಮ್ಮ ಕಾಲಾಂತರದಲ್ಲಿ ಪೋಷಕ ನಟಿ ಯಾಗಿಯೂ ಕೂಡ ನಟಿಸಿದ್ದರು 2008ರಲ್ಲಿ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಪರುಗು ಚಿತ್ರ ಇವರು ಪೋಷಕ ನಟಿಯಾಗಿ ನಟಿಸಿದಂತಹ ಕೊನೆಯ ಚಿತ್ರ ಇದಾದ ನಂತರ ಮಂಜುಳಾ ಶರ್ಮ ಅವರು ಚಲನಚಿತ್ರರಂಗದಿಂದ ದೂರ ಉಳಿದಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *