ಕೇವಲ ಒಂದು ಚಮಚ ಇದನ್ನು ಮಕ್ಕಳಿಗೆ ಕೊಡಿ ಕ್ಲಾಸಲ್ಲಿ ಯಾವಾಗ್ಲೂ ಫಸ್ಟ್ ಮಕ್ಕಳ ಮೆಮೊರಿ ಹೆಚ್ಚಿಸುವ ಬ್ಯಾಹ್ಮೀ ಲೇಹ. - Karnataka's Best News Portal

ಮಕ್ಕಳ ನೆನಪಿನ ಶಕ್ತಿಗಾಗಿ ಇಲ್ಲಿದೆ ಬ್ರಾಹ್ಮಿ ಎಲೆಯ ಲೇಪನ!!ಹೆತ್ತವರಿಗೆ ಮಕ್ಕಳ ಕಾಳಜಿಯೇ ಬಹಳ ಮುಖ್ಯವಾಗಿರುತ್ತದೆ ಹಾಗೂ ಮಕ್ಕಳು ಹೆಚ್ಚು ಬುದ್ಧಿವಂತರಾಗಿದ್ದಾರೆ ಹಾಗೂ ಅವರ ಚುರುಕುತನ ತಂದೆ ತಾಯಿಯರಿಗೆ ಸಂತೋಷವನ್ನು ಉಂಟುಮಾಡುತ್ತದೆ. ಮಕ್ಕಳು ಏನನ್ನಾದರೂ ಸಾಧಿಸಬೇಕಾದರೆ ನೆನಪಿನ ಶಕ್ತಿಯು ಬಹಳ ಮುಖ್ಯವಾಗಿರುತ್ತದೆ ಹೀಗೆ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಬ್ರಾಹ್ಮಿ ಎಲೆಯ ಲೇಪನವನ್ನು ಮಾಡೋಣ. ಬ್ರಾಹ್ಮಿ ಅಥವಾ ಒಂದೆಲಗ ಎನ್ನುವುದು ಹಲವಾರು ವಿಧದ ಔಷಧೀಯ ಗುಣಗಳನ್ನು ಹೊಂದಿರುವಂತಹ ಒಂದು ಅದ್ಭುತ ಸೊಪ್ಪು. ಇದನ್ನು ಹಿಂದಿನಿಂದಲೂ ಆಹಾರ ಕ್ರಮ ಹಾಗೂ ಔಷಧಿಯಾಗಿ ಬಳಕೆ ಮಾಡಲಾಗುತ್ತದೆ. ಮಕ್ಕಳಲ್ಲಿ ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ವೃದ್ಧಿ, ಕಲಿಕೆಯ ಶಕ್ತಿ ಹೆಚ್ಚಿಸಲು, ದೊಡ್ಡವರಲ್ಲೂ ಮಾನಸಿಕ ಒತ್ತಡದ ನಿವಾರಣೆಗೆ ಇದು ಸಹಾಯಕಾರಿ. ಮಾನಸಿಕ ಒತ್ತಡವು ಹೆಚ್ಚಾದರೆ ಅದು ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಬ್ರಾಹ್ಮಿ ಉತ್ತಮ ಪರಿಹಾರ. ಇದು ನರವ್ಯವಸ್ಥೆಯನ್ನು ಸುಧಾರಣೆ ಮಾಡಿ ಮೆದುಳಿನ ಕಾರ್ಯವನ್ನು ಉತ್ತಮಪಡಿಸುತ್ತದೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಮೊದಲಿಗೆ ಬ್ರಾಹ್ಮಿ ಎಲೆ ಅಥವಾ ಒಂದಲಗ ಸೊಪ್ಪನ್ನು ಬಿಡಿಸಿ ಇಡೋಣ. ಇನ್ನು ಒಂದು ಚಮಚ ಧನಿಯಾ ಅಥವಾ ಕೊತ್ತಂಬರಿ ಬೀಜ, ಒಂದು ಚಮಚ ಜೀರಿಗೆ, ನಾಲ್ಕರಿಂದ ಐದು ಲವಂಗ ಹಾಗೂ ಎರಡು ಏಲಕ್ಕಿಯನ್ನು ಹಾಕಿ ಮಿಶ್ರಣ ಮಾಡಿ ಒಂದು ಕಡೆ ಇಡೋಣ. ಇನ್ನೊಂದು ಕಡೆ ಮೂರರಿಂದ ನಾಲ್ಕು ಹಸಿ ಖರ್ಜುರ, ಏಳರಿಂದ ಎಂಟು ಬಾದಾಮಿ, ಒಂದು 10 ಒಣದ್ರಾಕ್ಷಿ ರುಬ್ಬಿಕೊಂಡು ಪೇಸ್ಟ್ ಮಾಡೋಣ. ಈ ಬ್ರಾಹ್ಮಿ ಎಲೆಗಳನ್ನು ಸ್ವಲ್ಪ ನೀರನ್ನು ಹಾಕಿ ರುಬ್ಬಿಕೊಳ್ಳೋಣ, ಸೊಪ್ಪನ್ನು ಒಂದು ಬಟ್ಟೆಯಲ್ಲಿ ಹಾಕಿ ಚೆನ್ನಾಗಿ ಸೋಸಿಕೊಳ್ಳಬೇಕು ಸೊಪ್ಪಿನ ರಸವನ್ನು ಮಾತ್ರ ನಾವು ಬಳಸಬೇಕು. ಇನ್ನೂ ಈ ಬ್ರಾಹ್ಮಿ ಎಲೆಯ ರಸವನ್ನು ಒಂದು ಪಾತ್ರೆಗೆ ಹಾಕಿ ಕುದಿಯಲು ಬಿಡಬೇಕು, ಈ ಬ್ರಾಹ್ಮಿ ಎಲೆಯ ರಸವು ಚೆನ್ನಾಗಿ ಕುದಿಸಬೇಕು, ಕುದಿಸಲು ಬಿಟ್ಟಾಗ ಒಂದು ಗ್ಲಾಸ್ ಇರುವಷ್ಟು ರಸವು ಅರ್ಧವಾಗಬೇಕು.

ಇನ್ನು ಅದಕ್ಕೆ ಮೊದಲು ಮಿಶ್ರಣ ಮಾಡಿರುವಂತಹ ಕೊತ್ತಂಬರಿ ಬೀಜ ಜೀರಿಗೆ ಹಾಗೂ ಲವಂಗದ ಪುಡಿಯನ್ನು ಹಾಕಬೇಕು ನಂತರ ಡ್ರೈ ಫ್ರೂಟ್ಸ್ ನ ಪೇಸ್ಟ್ ಅನ್ನು ಹಾಕಬೇಕು. ಬ್ರಾಹ್ಮಿ ಎಲೆಯು ಕುದಿಯುತ್ತಾ ಕಂದು ಬಣ್ಣಕ್ಕೆ ತಿರುಗುತ್ತದೆ ಹಾಗೂ ಕೊನೆಯಲ್ಲಿ ಒಂದು ಸ್ವಲ್ಪ ಬೆಲ್ಲವನ್ನು ಹಾಗೂ ಎರಡು ಚಮಚ ಸಕ್ಕರೆಯನ್ನು ಹಾಕಬೇಕು ಸಕ್ಕರೆಯನ್ನು ಪಾಕವನ್ನಾಗಿ ಮಾಡಲು ಇಲ್ಲಿ ಬಳಸಲಾಗಿದೆ. ನೀರಿನ ಅಂಶವು ಕಡಿಮೆಯಾಗುವವರೆಗೂ ಅದನ್ನು ಬಾಡಿಸಬೇಕು. ಇದು ಆರಿದ ನಂತರ ಒಂದು ಡಬ್ಬದಲ್ಲಿ ಹಾಕಿ ದಿನ ಮಕ್ಕಳಿಗೆ ಒಂದು ಚಮಚದಷ್ಟು ಕೊಟ್ಟರೆ ನೆನಪಿನ ಶಕ್ತಿಯು ಹೆಚ್ಚಾಗುತ್ತದೆ ಇದರ ಪರಿಣಾಮವನ್ನು ಒಮ್ಮೆ ನೀವು ಮನೆಯಲ್ಲಿ ಮಾಡಿ ನೋಡಿದರೆ ನೀವೇ ನೋಡಬಹುದು.

By admin

Leave a Reply

Your email address will not be published. Required fields are marked *