ಪ್ರಭಾಕರ್ ಬೆಡ್ ರೂಂ ನಲ್ಲಿರುವ ಅಮೂಲ್ಯ ಖಜಾನೆ ಏನು ಗೊತ್ತಾ ? ಮಗ ವಿನೋದ್ ಪ್ರಭಾಕರ್ ಅಪ್ಪನ ಆ ಸೀಕ್ರೆಟ್ ಬಗ್ಗೆ ಹೇಳಿದ್ದೇನು ನೋಡಿ - Karnataka's Best News Portal

ಟೈಗರ್ ಪ್ರಭಾಕರ್ ಬೆಡ್ರೂಮ್ ನಲ್ಲಿರುವ ಅಮೂಲ್ಯ ಖಜನೆ ಏನು….||ಟೈಗರ್ ಪ್ರಭಾಕರ್ ಅವರು ನಮ್ಮ ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲನೆಯದಾಗಿ ಬಾಡಿ ಬಿಲ್ಡರ್ ಎಂದೇ ಹೆಸರಾಗಿದ್ದಂತಹ ಇವರು ಕೇವಲ ಕನ್ನಡ ಚಲನಚಿತ್ರರಂಗದಲ್ಲಿ ನಟನೆ ಮಾಡುವುದಲ್ಲದೆ ತಮಿಳು ತೆಲುಗು ಮಲಯಾಳಂ ಚಿತ್ರದಲ್ಲಿಯೂ ಕೂಡ ನಟನೆ ಮಾಡಿ ಎಲ್ಲಾ ಕಡೆಯಲ್ಲಿಯೂ ಕೂಡ ತಮ್ಮ ಅಭಿಮಾನಿ ಬಳಗವನ್ನೇ ಸೃಷ್ಟಿ ಮಾಡಿದ್ದರು ಅಂದಿನ ಕಾಲದಲ್ಲಿ ಇಷ್ಟು ಅತ್ಯದ್ಭುತವಾದಂತಹ ಬಾಡಿ ಬಿಲ್ಡರ್ ಆಗಿದ್ದಂತಹ ಪ್ರಭಾಕರ್ ಅವರು ಕೇವಲ ನಟನೆ ಯೊಂದರಲ್ಲಿ ಅಭಿವೃದ್ಧಿಯನ್ನು ಹೊಂದುವುದಲ್ಲದೆ ಸಿನಿಮಾದಲ್ಲಿ ಬೇಕಾದಂತಹ ಎಲ್ಲಾ ಪಾತ್ರಗಳಿಗೂ ಕೂಡ ಅದರದ್ದೆ ಆದಂತಹ ಅಭಿನಯವನ್ನು ಮಾಡುವುದರ ಮುಖಾಂತರ ತಮ್ಮ ನಟನೆಯನ್ನು ತೋರಿಸುತ್ತಿದ್ದರು.ಒಟ್ಟಾರೆಯಾಗಿ ಆಲ್ ರೌಂಡರ್ ಎಂದು ಹೇಳಿದರೆ ತಪ್ಪಾಗಲಾರದು ಅಷ್ಟರಮಟ್ಟಿಗೆ ಇವರು ಚಿತ್ರದಲ್ಲಿ ನಟನೆಯನ್ನು ಮಾಡುತ್ತಿದ್ದರು.

ಟೈಗರ್ ಪ್ರಭಾಕರ್ ಅವರು ಕೇವಲ ನಟನಾಗಿ ನಟನೆ ಮಾಡುವುದಲ್ಲದೆ ಸಹನಟನಾಗಿ ಪೋಷಕ ನಟನಾಗಿ ಖಳನಟನಾಗಿ ಛಾಯಾಗ್ರಹಕನಾಗಿ ನಿರ್ಮಾಪಕನಾಗಿ ನಿರ್ದೇಶಕರಾಗಿಯೂ ಕೂಡ ಅಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟತೆ ಮೆರೆದಂತಹ ವ್ಯಕ್ತಿ.ಅವರು ಯಾವುದೇ ರೀತಿಯಾದಂತಹ ಪಾತ್ರವಾಗಿರಲಿ ಅದರಲ್ಲೂ ಕುಡುಕನ ಪಾತ್ರದಲ್ಲಾಗಲಿ ಕುಟುಂಬಕ್ಕೆ ಸಂಬಂಧಪಟ್ಟಂತಹ ಕೆಲವೊಂದಷ್ಟು ಪಾತ್ರಗಳೆ ಆಗಿರಲಿ ಅದರಲ್ಲಿ ನಟನೆ ಮಾಡುವುದರ ಮುಖಾಂತರ ಪ್ರತಿಯೊಬ್ಬರು ಎಷ್ಟೇ ವರ್ಷ ಆದರೂ ನೆನಪಿಟ್ಟುಕೊಳ್ಳುವಂತಹ ನಟನೆಯನ್ನು ಮಾಡಿ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಅವರ ಮನಸ್ಸಿನಲ್ಲಿ ಆಳವಾಗಿ ಕೂರುತ್ತಿದ್ದರು ಎಂದೇ ಹೇಳಬಹುದಾಗಿದೆ ಇವರು ತಮ್ಮ ನಟನೆಗೆ ಕೆಲವೊಂದಷ್ಟು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಅದರಲ್ಲೂ ಪ್ರಚಂಡ ನಟ ಸಾಹಸ ಚಕ್ರವರ್ತಿ ಎಂಬ ಬಿರುದನ್ನು ಕೂಡ ಪಡೆದುಕೊಂಡಿದ್ದಾರೆ.ಇವರು ನಟನೆ ಮಾಡಿರುವಂತಹ ಕೆಲವೊಂದಷ್ಟು ಪ್ರಮುಖ ಚಿತ್ರಗಳು ಎಂದರೆ

ಸಹೋದರರ ಸವಾಲ ಸ್ನೇಹಿತರ ಸವಾಲ್ ಕಾರ್ಮಿಕ ಕಳ್ಳನಲ್ಲ ಸೆಂಟ್ರಲ್ ರೌಡಿ ಕರುಳಿನ ಕೂಗು ಕಲಿಯುಗ ಭೀಮ ಹೀಗೆ ಕೆಲವೊಂದಷ್ಟು ಹಿಟ್ ಚಿತ್ರಗಳಲ್ಲಿ ನಟನೆ ಮಾಡಿ ಈ ಚಿತ್ರದಿಂದ ಇನ್ನೂ ಹೆಚ್ಚಿನ ಯಶಸ್ಸನ್ನು ಪಡೆದುಕೊಂಡಿದ್ದರು ಹಾಗೂ ಇವರು ತಮ್ಮ 52ನೇ ವಯಸ್ಸಿನಲ್ಲಿ ವಿಧಿವಶರಾದರು ಆದರೆ ಇತ್ತೀಚಿಗೆ ಟೈಗರ್ ಪ್ರಭಾಕರ್ ಅವರ ಮಗ ವಿನೋದ್ ಪ್ರಭಾಕರ್ ಅವರನ್ನು ಕೆಲವೊಂದಷ್ಟು ಸಂದರ್ಶನ ವನ್ನು ಮಾಡುವಂತಹ ಸಮಯದಲ್ಲಿ ಅವರ ತಂದೆಯ ಕೆಲವೊಂದಷ್ಟು ನೆನಪುಗಳನ್ನು ಹಂಚಿಕೊಳ್ಳುತ್ತಾ ತಮ್ಮ ತಂದೆಯ ಕೆಲವೊಂದಷ್ಟು ಮಾತುಗಳ ಬಗ್ಗೆ ಹಾಗೂ ಅವರು ನಡೆದುಕೊಳ್ಳುತ್ತಿದ್ದಂತಹ ಸ್ವಭಾವಗಳ ಬಗ್ಗೆ ಮೀಡಿಯಾದ ಮುಂದೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ ಹಾಗೂ ಅವರ ತಂದೆಯ ಕುಡಿತದ ಚಟವನ್ನು ಯಾರು ಕೂಡ ಮಾಡಬೇಡಿ ಅದರಿಂದ ಯಾವುದೇ ಕಾರಣಕ್ಕೂ ಒಳ್ಳೆಯದಾಗುವುದಿಲ್ಲ ಬದಲಾಗಿ ನಮ್ಮ ಆರೋಗ್ಯ ನಾವೇ ಹಾಳು ಮಾಡಿಕೊಂಡಂತಾಗುತ್ತದೆ ಎಂದು ಹೇಳುವುದರ ಮುಖಾಂತರ ಒಳ್ಳೆಯ ವಿಷಯಗಳನ್ನು ಹಂಚಿಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *