ಕನ್ನಡದ ಅಪ್ಪಟ ಕಲಾವಿದೆ ಭಾವನ ರಾಮಣ್ಣನವರ ಸುಂದರವಾದ ಬಂಗಲೆ ( ಮನೆ ) ಹೇಗಿದೆ ನೋಡಿ. - Karnataka's Best News Portal

ಕನ್ನಡದ ಪ್ರಸಿದ್ಧ ನಟಿಯಾದ ಭಾವನ ರಾಮಣ್ಣ ರವರ ಮನೆ ಹೇಗಿದೆ !! ಭಾವನಾ ರಾಮಣ್ಣ ರವರು ಕನ್ನಡ ಚಿತ್ರರಂಗಕ್ಕೆ ಬಂದು 25 ವರ್ಷಗಳಾಗಿವೆ. ಈಗಾಗಲೇ 45 ಸಿನಿಮಾಗಳಲ್ಲಿ ನಟಿಸಿದ್ದಾರೆ ಇನ್ನು ಸಮಾಜ ಸೇವೆ ಹಾಗೂ ರಾಜಕೀಯದಲ್ಲೂ ಇವರದೇ ಆದ ಚಾಪನ್ನು ಮೂಡಿಸಿದ್ದಾರೆ. ಮೊದಲಿಗೆ ಭಾವನಾ ಅವರ ಮನೆಯ ಎಡಭಾಗದಲ್ಲಿ ಲಿಫ್ಟ್ ಇದೆ ಲಿಫ್ಟ್ಗೂ ಮೊದಲು ಸಣ್ಣ ಕೊಳವಿದೆ ಕೊಳದಲ್ಲಿ ಮೀನುಗಳು ಹಾಗೂ ಒಂದು ಗಣೇಶನ ವಿಗ್ರಹವು ಅಲ್ಲಿ ಸ್ಥಾಪನೆಯಾಗಿದೆ ಜೊತೆಗೆ ಸುತ್ತ ಚಿಕ್ಕ ಚಿಕ್ಕ ಸಸ್ಯಗಳನ್ನು ನೆಟ್ಟಿದ್ದಾರೆ. ಹಾಗೆ ಲಿಫ್ಟಿನ ಪಕ್ಕದಲ್ಲಿ ಮೇಲೆ ಹೋಗಲು ಮೆಟ್ಟಿಲುಗಳಿವೆ. ಇನ್ನು ಲಿಫ್ಟಿಗೆ ಹೋಗುವ ಮುನ್ನ ಗೋಡೆಯ ಮೇಲೆ ಹಳೆಯ ಚಿತ್ರಗಳು ಇವೆ ಅದಕ್ಕೆ ಸುಂದರವಾದ ಚೌಕಟ್ಟನ್ನು ಹಾಕಿದ್ದಾರೆ. ಇನ್ನು ಗೇಟಿನ ಬಲ ಭಾಗದಲ್ಲಿ ಸುಂದರವಾಗಿ ಕೆತ್ತಿರುವ ಬಾಗಿಲಿದೆ ಅಲ್ಲಿ ಆಫೀಸಿರಬಹುದು ಎಂದರೆ ಅಲ್ಲ ಬಾಗಲಿಗೆ ಕನ್ನಡಿಯನ್ನು ಹಾಕಿರುವ ಸುಂದರವಾದ ಚೌಕಟ್ಟು ಆಗಿದೆ. ಎಲ್ಲೆಲ್ಲಿ ಜಾಗವಿದೆಯೋ ಅಲ್ಲಿ ಎಲ್ಲವೂ ಗಿಡಗಳು ತುಂಬಿದೆ.

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಎಲ್ಲವೂ ಕಲಾತ್ಮಕವಾಗಿದೆ ಕಲಾಪ್ರಜ್ಞೆಗೆ ಒಂದೊಂದು ಆಧಾರವು ಇಲ್ಲಿ ಎದ್ದು ಕಾಣುತ್ತಿದೆ. ಇನ್ನು ಮೆಟ್ಟಿಲಿನ ಮೂಲಕ ಮನೆಗೆ ಹೋಗಬಹುದು ಹೋಗುವ ಮುನ್ನ ಬಲಭಾಗದಲ್ಲಿ ಚಿತ್ರದ ಫೋಟೋವಿದೆ ಇನ್ನು ಮೆಟ್ಟಿಲನ್ನು ಹತ್ತುತ್ತಾ ಹೋದರೆ ಆ ಮೆಟ್ಟಿಲಿನ ಗೋಡೆಯಲ್ಲು ಕೂಡ ಭಾವನರವರ ಕಲೆಯನ್ನು ಕಣ್ತುಂಬಿಸಿಕೊಳ್ಳಬಹುದು. ಇನ್ನೊಮ್ಮೆ ಕಲೆಯನ್ನು ಅನುಭವಿಸುತ್ತಾ ಯಾವುದೇ ಆಯಾಸವಿಲ್ಲದೆ ಕಾತುರದ ಭಾವನೆಯಲ್ಲಿ, ಅಚ್ಚರಿ, ಖುಷಿ, ಮನಸ್ಸಿಗೆ ಏನೋ ಒಂದು ಉತ್ಸಾಹದಿಂದ ಹೋಗಬಹುದು. ಇನ್ನು ಅಲ್ಲಲ್ಲಿ ಕಾಣುವ ಗೋಡೆಯ ಪೇಂಟಿಂಗ್ಗಳು ಇಲ್ಲಿ ಎದ್ದು ಕಾಣುತ್ತವೆ. ಇನ್ನು ಅವರು ಪಡೆದಿರುವಂತಹ ಪ್ರಶಸ್ತಿಗಳಿರಬಹುದು ಎಲ್ಲೆಲ್ಲಿ ಏನೇನು ಇಡಬೇಕು ಎಂಬ ಶಿಸ್ತಿನ ಚೌಕಟ್ಟನ್ನು ಭಾವನಾ ನವರು ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ.

ಇನ್ನು ಒಳಗೆ ಹೋದಲ್ಲಿ ಮೊದಲು ಭಾವನವರ ವಿಶಾಲವಾದ ನೃತ್ಯದ ಹಾಲನ್ನು ನೋಡಬಹುದು, ಅಲ್ಲಿರುವಂತಹ ನಟರಾಜನ ವಿಗ್ರಹವು ಅದ್ಭುತ ಭಾವ ಕಲೆಯನ್ನು ಪ್ರತಿಬಿಂಬಿಸುತ್ತದೆ ಹಾಗೂ ಮೂಲೆಯಲ್ಲಿ ಇರುವಂತಹ ಮರದ ಕಂಬಗಳು ಇಲ್ಲಿ ಕಣ್ಣಿಗೆ ಹಬ್ಬವನ್ನು ತಂದುಕೊಡುತ್ತದೆ. ಮನೆ ನಮ್ಮ ಯೋಚನೆಯನ್ನು ಪ್ರತಿಬಿಂಬಿಸುತ್ತದೆ, ಒಂದು ಮನೆಯನ್ನು ಕಟ್ಟಬೇಕು ಎಂದರೆ ಪೂರ್ವ ಯೋಚನೆಯು ಬಹಳ ಮುಖ್ಯವಾಗಿದೆ. ಇನ್ನು ಭಾವನರವರ ಮನೆಯ ಟೆರೇಸ್ ಮೇಲೆ ಗಿಡಗಳು ತುಂಬಿ ವಿಶ್ರಾಂತಿ ಪಡೆಯಲು ಒಂದು ಒಳ್ಳೆಯ ವಾತಾವರಣ ನಿರ್ಮಿಸಿದೆ ಹಾಗೂ ಭಾವನ ರವರ ಮನೆಯ ಒಳಗೆ ಪೂರ್ವ ಬಾಗಿಲಿನಲ್ಲಿ ಹೋಗುವಾಗ ಮರದ ತೂಗುಯ್ಯಾಲೆ ನಮ್ಮನ್ನು ಆಕರ್ಷಿಸುತ್ತದೆ. ಭಾವನರವರ ಮನೆ ಒಳಗೆ ಇರುವ ಒಂದು ಕೊಳದ ಮಧ್ಯೆ ದೇವರ ಮಂಟಪ, ಮನೆಯ ಅತ್ಯಂತ ಆಕರ್ಷಿಕ ಜಾಗವಾಗಿದೆ ಇವೆಲ್ಲವೂ ಭಾವನಾ ರವರ ಕಲಾಪ್ರಜ್ಞೆಗೆ ತಕ್ಕಂತೆ ಎಲ್ಲರನ್ನು ಮನಸೆಳಯುತ್ತವೆ. ಒಟ್ಟಿನಲ್ಲಿ ಭಾವನ ರವರ ಮನೆಯು ಆಂಟಿಕ್ಪೀಸ್ಗಳು, ಗಿಡಗಳು ಹಾಗೂ ಸುಂದರ ರಮ್ಯಾ ಭಕ್ತಿಯಿಂದ ನಿರ್ಮಿಸಲಾಗಿದೆ.

Leave a Reply

Your email address will not be published. Required fields are marked *